ಹೊನ್ನಾವರ : ಬಿ.ಜೆ.ಪಿ ಹೊನ್ನಾವರ ಮಂಡಲದಲ್ಲಿ ನಡೆದ ಹೊಸ ಕಾರ್ಯಕರ್ತರ ಬ್ರಹತ್ ಸೇರ್ಪಡೆ ಸಮಾರಂಭ ನಡೆಯಿತು. ಪಕ್ಷಕ್ಕೆ ೨೬೪ ಕಾರ್ಯಕರ್ತರು ಸೇರ್ಪಡೆಯಾದರು.

ಹೊನ್ನಾವರದ ದುರ್ಗಾಕೇರಿಯ ಶ್ರೀ ಮಾರಿಯಮ್ಮ ಯಾನೆ ದಂಡಿನ ದುರ್ಗಾದೇವಿ ದೇವಸ್ಥಾನದ ಸಭಾ ಭವನದಲ್ಲಿ ಮುಖ್ಯ ಅತಿಥಿಗಳಾದ ಸಂಸದರು ಹಾಗು ಕೇಂದ್ರ ಕೌಶಲ್ಯಾಭಿವೃದ್ಧಿ ರಾಜ್ಯ ಖಾತೆ ಸಚಿವರು ಅದಂತ ಶ್ರೀ ಅನಂತ ಕುಮಾರ್ ಹೆಗಡೆಯವರ ಸಮ್ಮುಖದಲ್ಲಿ ಬಿ.ಜೆ.ಪಿ ಪಕ್ಷಕ್ಕೆ ಸಾಲ್ಕೋಡ, ಹಳದಿಪುರ,ಕರ್ಕಿ, ದುರ್ಗಾಕೇರಿಯ ತುಳಸಿ ನಗರ, ಉದ್ಯಮ ನಗರ ಹಾಗೂ ದುರ್ಗಾಕೇರಿಯ ೨೬೪ ಹೊಸ ಕಾರ್ಯಕರ್ತರನ್ನು ಶ್ರೀ ನಾಗರಾಜ್ ನಾಯಕ ಅವರ ನೇತೃತ್ವದಲ್ಲಿ ಬರಮಾಡಿಕೊಳ್ಳಲಾಯಿತು.

RELATED ARTICLES  ಉತ್ತರಕನ್ನಡದಲ್ಲಿ ಕೊರೋನಾ ಲಸಿಕೆ ವಿತರಣೆ ಆರಂಭ

ಸಂಸದರು ಹಾಗೂ ಕೌಶಲ್ಯಾಭಿವೃದ್ಧಿ ಸಚಿವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ದಿನಕರ ಶೆಟ್ಟಿ, ಡಾ ಜಿ ಜಿ ಹೆಗಡೆ,ಸೂರಜ ನಾಯ್ಕ ಸೋನಿ ಹಾಗೂ ಇನ್ನಿತರರು ಹಾಜರಿದ್ದರು.

RELATED ARTICLES  ಹೆಗಡೆ ಹೆಣ್ಣುಮಕ್ಕಳ ಶಾಲೆಯಲ್ಲಿ ಗ್ರಹಣ ವೀಕ್ಷಣೆ