ಮುಂಡಗೋಡ : ಮನೆಯಂಗಳದಲ್ಲಿ ಕನ್ನಡಸಾಹಿತ್ಯ ಕಾರ್ಯಕ್ರಮ ಪಟ್ಟಣದ ಗಾಂಧಿನಗರದ ವರ್ಗಿಸ್ ಥಾಮಸ್(ತಂಬಿ) ಯವರ ಮನೆಯಲ್ಲಿ ಸಂಜೆ ನಡೆಯಿತು
ಮುಖ್ಯ ಅತಿಥಿ ಗಳಾಗಿ ಆಗಮಿಸಿದ ಆರ್.ಜೆ. ಬೆಳ್ಳನವರ ಮಾತನಾಡಿ ಇಂದಿನ ಸಮಾಜ ನೀತಿ ಇಲ್ಲದ ಶಿಕ್ಷಣ, ಭೀತಿ ಇಲ್ಲದ ಶಾಸನ ಅಪರಮಿತ ಸ್ವಾತಂತ್ರ್ಯದ ಮೂಲಕ ಹಾಳಾಗುತ್ತಿದೆ ಎಂದರು, ಸಜ್ಜನರು ಮೌನವಾಗಿರುವುದರಿಂದ ಇಂದು ಸಮಾಜದಲ್ಲಿ ದುಷ್ಕøತ್ಯಗಳು ನಡೆಯಲು ಕಾರಣ.ನಿಮ್ಮ ಮಾತಿನ ಧಾಟಿಯವಿಷಯ ಯಾರ ಮನಸ್ಸು ನೋವಾಗದಿರಲಿ, ಎಲ್ಲರಿಗೂ ಹಿತವಾಗಿರಲಿ ಕನ್ನಡದ ಪರಿಷತ್ ನ ಉದ್ದೇಶ ಒಳ್ಳೆಸಾಹಿತ್ಯವನ್ನು ಪ್ರಚಾರಪಡಿಸಬೇಕು ಬಗ್ಗೆ ಅಭಿಮಾನವಿರಬೇಕು. ತಾಯಿ ಗರ್ಭದಿಂದ ಬರುವಾಗ ಯಾರು ಮಹಾಪುರುಷರಾಗಿರುವುದಿಲ್ಲ ಸಮಯ ಸಂದರ್ಭ ಮನುಷ್ಯನನ್ನು ಮಹಾಪುರಷರನ್ನಾಗಿ ಮಾಡುತ್ತದೆ ಎಂದರು ಇದಕ್ಕೆ ಕೆಲ ಮಹಾಪುರುಷರ ಉದಾಹರಣೆ ನೀಡಿದರು. ಅಧ್ಯಯನ ಶೀಲರಾದರೆ ಸಮಾಜದಲ್ಲಿ ಒಳ್ಳೆಯ ಹೆಸರು ಪಡೆಯಲು ಸಾಧ್ಯ ಎಂದರು.

ಮೈಸೂರ ಮಹರಾಜರು ಕನ್ನಡ ಸಾಹಿತ್ಯ ಪರಿಷತ್ ಹುಟ್ಟುಹಾಕಿದ ಕಾರಣವೆನೆಂದರೆ ರಾಜ್ಯದ ಎಲ್ಲ ಧರ್ಮ,ಜಾತಿ, ಜನಾಂಗ ಒಂದುಗೂಡಿ ಕನ್ನಡ ಭಾಷೆಯನ್ನು ಬೆಳಸಲಿ ಎಂದು ಹುಟ್ಟುಹಾಕಿದ್ದು ಇದರ ಪ್ರಕಾರ ನಮ್ಮ ಕಸಾಪ ಅಧ್ಯಕ್ಷರಾದ ನಾಗೇಶ ಪಾಲನಕರ,ಎಲ್ಲ ಜಾತಿ ಧರ್ಮದವರಿಗೆ ಪ್ರಾಶಸ್ತ್ಯ ನೀಡಿ ವಿವಿಧ ಧರ್ಮದವರ ನಿವಾಸಗಳಲ್ಲಿ ಮನೆಯಂಗಳ ಕನ್ನಡಸಾಹಿತ್ಯ ಕಾರ್ಯಕ್ರಮ ಹಮ್ಮಿಕೊಂಡು ಕನ್ನಡ ಉಳಿಸುವ ಬೆಳೆಸುವ ಉತ್ತೇಜಿಸುವ ನಿಟ್ಟಿನಲ್ಲಿ ಸಾಗುತ್ತಿದ್ದಾರೆ. ಕನ್ನಡಸಾಹಿತ್ಯ ಕಾರ್ಯಕ್ರಮಗಳಿಗೆ ಜನರು ಆಗಮಿಸುತ್ತಿದ್ದು ಇದರಿಂದ ನಮ್ಮಂತಹ ಕನ್ನಡ ಪ್ರೇಮಿಗಳಿಗೆ ಖುಷಿ ತಂದಿದೆ. ಇವರು ಕನ್ನಡ ಸಾಹಿತ್ಯಕ್ಕೆ ಮಾಡುತ್ತಿರುವ ಸೇವೆಯನ್ನು ಗಮನಿಸಿ ರಾಜ್ಯ ಮಟ್ಟದಲ್ಲಿ ಪ್ರಚಾರವಾಗಿ ಅಧ್ಯಕ್ಷರಿಗೆ ರಾಜ್ಯಪ್ರಶಸ್ತಿ ಸಿಕ್ಕರು ಸಿಗಬಹುದು ಎಂದರು.

RELATED ARTICLES  ಹೊನ್ನಾವರದಲ್ಲಿ ಯಶಸ್ವಿಯಾಗಿ ಸಂಘಟನೆಗೊಂಡ ಛಾಯಾಗ್ರಾಹಕ ಸಂಘದ ದಶಮಾನೋತ್ಸವ

ಅತಿಥಿ ನಾಗರತ್ನಾ ಶೆಟ್ಟಿ ಮಾತನಾಡಿ ಪ್ರೀತಿಯು ಒಂದು ಕಲೆ,ಸಾಹಿತ್ಯ ಒಂದು ಓದುವ ಕಲೆ ಸುಸಂಸ್ಕೃತರಾಗಿ ಬಾಳುವ ಒಂದು ಕಲೆ ಇವಲ್ಲವನ್ನು ಎರವಲು ಪಡೆದು ಹಣದಿಂದ ಪಡೆಯಲು ಸಾಧ್ಯವಿಲ್ಲ.ಕವಿ,ಸಾಹಿತ್ಯಕಾರ ಹಾಗೂ ಲೇಖಕನಿಗೆ ಇಂದು,ಮುಂದು ಎಂದೇಂದು ಬೆಲೆ ಇದೆ ಹಣ ಸಂಪಾದಿಸಲು ತನ್ನ ಜೀವಮಾನದಲ್ಲಿ ದುಡಿದು ಶೇಖರಣೆ ಮಾಡಿ ಅದೇ ದುಡ್ಡನ್ನು ತಮ್ಮ ಆರೋಗ್ಯಕ್ಕಾಗಿ ಖರ್ಚುಮಾಡುತ್ತಾನೆ ಎಂದರೆ ಆತ ಸಾಧಿಸಿದ್ದು ಏನು
ರಾಷ್ಟ್ರದ ಜನತೆಯ ಕೀರ್ತಿ ಯಶಸ್ಸು ರಾಜಕೀಯ ಇವುಗಳು ರಾವಣ ಜರಾಸಂಧ,ಕಿಚಕ ಯಮ ರಂತವರ ಪಾಲಾಗಿವೆ ಇಂತಹ ಪರಿಸ್ಥಿತಿ ಸಿಕ್ಕಿ ಬಿದ್ದಂತಹ ನಾವು ಸಾಹಿತ್ಯ ಸಂಸ್ಕøತಿಯಿಂದ ನಮ್ಮದೂರ ಸರಿಯುತ್ತಿದೆ ಎಂದರು.

RELATED ARTICLES  ಬೈಕ್ ಕಳ್ಳತನ ಮಾಡಿದ್ದ ಆರೋಪಿ ಅರೆಸ್ಟ್

ಕಾರ್ಯಕ್ರಮದ ಅಧ್ಯಕ್ಷತೆ ವಹಿಸ ಮಾತನಾಡಿದ ನಾಗೇಶ ಪಾಲನಕರ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂದು ನಂಬಿರುವ ನಾನು ನನ್ನ ಅವಧಿಯಲ್ಲಿ ಕನ್ನಡಬೆಳಸುವ ನಿಟ್ಟಿನಲ್ಲಿ ಸಾಗುವುದೇ ನನ್ನ ಮೂಲ ಉದ್ದೇಶ. ಇಂತಹ ಕಾರ್ಯಕ್ರಮಗಳನ್ನು ಗ್ರಾಮಾಂತರ ಪ್ರದೇಶಕ್ಕೂ ಹಮ್ಮಿಕೊಂಡಿದ್ದೇನೆ ಕನ್ನಡದ ಕಂಪು ತಾಲೂಕಾಧ್ಯಂತ ಹರಡಿಸುತ್ತೇನೆ ಎಂದರು
ಕಾರ್ಯಕ್ರಮದ ಉದ್ಘಾಟನೆಯನ್ನು ಸಾಹಿತಿ ಚಿದಾನಂದ ಕೋವಿ(ಪಾಟೀಲ) ನೆರವೆರಿಸಿ ಮಾತನಾಡಿದರು
ಕಸಾಪ ದ ಗೌರವ ಕಾರ್ಯದರ್ಶಿ ತುಕಾರಾಮ ಸಾನು, ಕೆ.ಪಿ.ಆನಂದಗೌಡ್ರ(ಶಿಕ್ಷಕರು),ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುಭಾಸ ಡೋರಿ, ಎಸ್.ಬಿ.ಹೂಗಾರ ನಿವೃತ್ ಶಿಕ್ಷಕ, ಜಗದೀಶ ಮೊರೆ, ನಾಗೇಶ ರೇವಣಕರ, ದಿನೇಶ ವರ್ಣೇಕರ, ನರೇಶ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು
ಕಾರ್ಯಕ್ರಮದಲ್ಲಿ ಮಧುಸೂದನ ವ್ಹಿ.ಪ್ರಭು ಹಾಗೂ ರತ್ನಪ್ಪಾ ಸೋ ಲಮಾಣಿಯವರನ್ನು ಸನ್ಮಾನಿಸಲಾಯಿತು