ಕುಮಟಾ: ನಿನ್ನೆ ಕೇಂದ್ರ ಮಂತ್ರಿ ಅನಂತ್ ಕುಮಾರ ಹೆಗಡೆ ಅವರು ನಗರದ ರೈಲ್ವೆ ನಿಲ್ದಾಣದಲ್ಲಿ ಸಂಚಾರಿ ವೈದ್ಯಕೀಯ ರೈಲಾದ ಲೈಪ್ ಲೈಪ್ ಲೈನ್ ಎಕ್ಸ್ ಪ್ರೆಸ್ ಉದ್ಘಾಟಿಸಿದ್ದು ಇಂದು ಇದರ ಪ್ರಯೋಜನ ಪಡೆಯಲು ಅನೇಕರು ರೈಲ್ವೆ ನಿಲ್ದಾಣಕ್ಕೆ ಆಗಮಿಸುತಿದ್ದಾರೆ. ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟನ ಅಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆಯವರ ಮುಂದಾಳತ್ವದಲ್ಲಿ ತೊರ್ಕೆಯಿಂದ ವಾಹನ ವ್ಯವಸ್ಥೆ ಮಾಡಲಾಗಿದ್ದು ಹಳ್ಳಿ ಹಳ್ಳಿ ಪ್ರದೇಶದ ಜನತೆಗೆ ಈ ವ್ಯವಸ್ಥೆ ಕಲ್ಪಿಸಿದೆ.ಇದು ಜನರಿಂದ ಮೆಚ್ಚುಗೆ ಪಡೆದಿದೆ.
ಮುಂಜಾನೆಯಿಂದಲೇ ಹೆಸರು ನೊಂದಾವಣೆ ಪ್ರಕ್ರಿಯೆ ಚಾಲ್ತಿಯಲ್ಲಿದ್ದು ಜಿಲ್ಲೆಯ ವಿವಿಧ ತಾಲೂಕುಗಳಿಂದ ರೋಗಿಗಳು ಆಗಮಿಸುತ್ತಿರುವದು ಕಂಡುಬಂದಿತು.
ಈ ರೈಲು ನವೆಂಬರ್ ೧೯ ರ ವರೆಗೂ ಕುಮಟಾ ರೈಲ್ವೆ ನಿಲ್ದಾಣದಲ್ಲಿ ವೈದ್ಯಕೀಯ ಸೇವೆ ನೀಡಲಿದ್ದು ಜಿಲ್ಲೆಯ ಜನರು ಇದರ ಪ್ರಯೋಜನ ಕಂಡುಕೊಳ್ಳ ಬಹುದಾಗಿದೆ. ಚಿಕಿತ್ಸೆಗೆ ಆಗಮಿಸುವವರು ನಿಮ್ಮ ಯಾವುದಾದರೂ ಗುರುತಿನ ಚೀಟಿ ತರುವುದಯ ಕಡ್ಡಾಯವಾಗಿದೆ.