ಪೆರ್ಲ : ವೇದರಾಶಿಗಳಿಂದ ಪರಿಪೂರ್ಣವಾದ ಈ ದೇಶದ ಪ್ರಭಲವಾದ ಎರಡು ಕೈಗಳು ರಾಮಾಯಣ ಮತ್ತು ಮಹಾಭಾರತವಾಗಿದೆ. ಈ ಬಲಿಷ್ಠ ಕೈಗಳಿಂದ ನಮ್ಮ ಭಾರತ ದೇಶವಿಂದು ಸುಸ್ಥಿರವಾಗಿದೆ. ಈ ಹಿನ್ನೆಲೆಯಲ್ಲಿ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಪ್ರತಿ ಮನೆ ಮನೆಯಲ್ಲಿ ರಾಮಾಯಣ ಅನುರಣಿಸಬೇಕು, ಪ್ರತಿ ಮಣ್ಣಿನ ಕಣ ಕಣದಲ್ಲೂ ರಾಮ ನಾಮವು ಪ್ರತಿಧ್ವನಿಸಬೇಕು ಎಂಬ ಉದ್ದೇಶದಿಂದ ರಾಮಾಯಣವನ್ನು ಪಾರಾಯಣ ಮಾಡಬೇಕೆಂಬ ಆದೇಶವನ್ನು ನೀಡಿದರು ಎಂದು ವಿದ್ವಾನ್ ಕೇಕಣಾಜೆ ಕೇಶವ ಭಟ್ ನುಡಿದರು.

ಅವರು ಭಾನುವಾರ ಬಜಕೂಡ್ಲು ಅಮೃತಧಾರಾ ಗೋಶಾಲೆಯ `ಸಾಕೇತ’ ಮಂಟಪದಲ್ಲಿ ಮುಳ್ಳೇರಿಯ ಹವ್ಯಕ ಮಂಡಲದ ನೇತೃತ್ವದಲ್ಲಿ ಕಳೆದ 9 ದಿನಗಳಿಂದ ನಡೆದುಬರುತ್ತಿರುವ ಶ್ರೀಮದ್ವಾಲ್ಮೀಕೀ ರಾಮಾಯಣ ಪಾರಾಯಣ ನವಾಹದ ಅಂಗವಾಗಿ ನಡೆದ ಶ್ರೀರಾಮ ಪಟ್ಟಾಭಿಷೇಕ ಮಹೋತ್ಸವದ `ಧರ್ಮ ಸಭೆ’ಯಲ್ಲಿ ಉಪನ್ಯಾಸವನ್ನು ನೀಡುತ್ತಿದ್ದರು.

RELATED ARTICLES  ಕಾಳಿ ನದಿಯಲ್ಲಿ ಕಯಾಕ್ ಫನ್

ಪಾರಾಯಣದಿಂದ ದೇಶಕ್ಕೆ ಸುಖವಾಗಬೇಕು. ಸ್ವಸ್ಥ ದೇಶ, ಸ್ವಸ್ಥ ಗ್ರಾಮ, ಸ್ವಸ್ಥ ಕುಟುಂಬ ನಿರ್ಮಾಣವಾಗಬೇಕಾದರೆ ಸ್ವಸ್ಥ ವ್ಯಕ್ತಿಯ ನಿರ್ಮಾಣವಾಗಬೇಕು ಎಂಬುದೇ ಶ್ರೀಮದ್ವಾಲ್ಮೀಕಿ ರಾಮಾಯಣ ನವಾಹದ ಘನವಾದ ಉದ್ದೇಶವಾಗಿದೆ. ನಾವು ನಿತ್ಯ ಜೀವನದಲ್ಲಿ ಅನುಭವಿಸುವ ಸಮಸ್ಥ ದುಃಖಗಳಿಗೆ ಶ್ರೀಮದ್ವಾಲೀಕೀ ರಾಮಾಯಣದಲ್ಲಿ ಉತ್ತರವಿದೆ. ಸ್ವಸ್ಥ ಸಮಾಜ ನಿರ್ಮಾಣವಾಗಬೇಕಾದರೆ ಅಲ್ಲಿ ಸ್ತ್ರೀಯರು ಹಾಗೂ ಪುರುಷರು ಸಂಸ್ಕಾರವಂತರಾಗಿರಬೇಕು. ಎಲ್ಲಿ ರಾಮ ನಾಮ ಕೇಳುತ್ತದೆಯೋ ಅಲ್ಲಿ ನಮಗೆ ಜಯಪ್ರಾಪ್ತಿ ಎಂದರು.

ಮುಳ್ಳೇರಿಯ ಮಂಡಲ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಸರ್ಪಮಲೆ ಪ್ರಾಸ್ತಾವಿಕವಾಗಿ ಮಾತನಾಡಿ ಮಂಡಲದ ವತಿಯಿಂದ 100 ಬಾರಿ ರಾಮಾಯಣವನ್ನು ಪಾರಾಯಣ ಮಾಡಲಾಗಿದೆ. 9 ದಿನಗಳಿಂದ ಶ್ರೀರಾಮ ಭಕ್ತರು, ಗೋಭಕ್ತರಿಂದ ಈ ಗೋಶಾಲೆ ಪಾವನವಾಗಿದೆ ಎಂದರು.

ಶ್ರೇಷ್ಠ ವೈದಿಕರ ನೇತೃತ್ವದಲ್ಲಿ ಬೆಳಗ್ಗೆ ಪಟ್ಟಾಭಿಷೇಕ ಯಜ್ಞ, ಪಟ್ಟಾಭಿಷೇಕ ಮಹೋತ್ಸವ ನಡೆಯಿತು. ರಾಜೋಪಚಾರ, ಅಷ್ಟಾವಧಾನ ಸೇವೆ, ವಿವಿಧ ವಲಯಗಳ, ಶ್ರೀಮಠದ ಅಂಗ ಸಂಸ್ಥೆಗಳಿಂದ ಹಾಗೂ ಅನೇಕ ಭಕ್ತರು ಶ್ರೀರಾಮನಿಗೆ ಕಪ್ಪಕಾಣಿಕೆಯನ್ನು ಸಮರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ರಾಮಾಯಣ ಪಾರಾಯಣ ಸಮಿತಿಯ ವತಿಯಿಂದ ಗೋಶಾಲೆಗೆ ಸಹಾಧನವನ್ನು ನೀಡಲಾಯಿತು.

RELATED ARTICLES  'ಕರ್ನಾಟಕವನ್ನು ಗುಜರಾತ್ ನಂತೆ ಮಾಡುತ್ತೇವೆ’ :ಬಿ.ಎಸ್.ಯಡಿಯೂರಪ್ಪ

ಬಜಕೂಡ್ಲು ಗೋಶಾಲೆಯ ಗೌರವಾಧ್ಯಕ್ಷರಾದ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ವೇದಮೂರ್ತಿ ಪಳ್ಳತ್ತಡ್ಕ ಪರಮೇಶ್ವರ ಭಟ್, ಮಹಾಮಂಡಲಾಧ್ಯಕ್ಷೆ ಈಶ್ವರಿ ಬೇರ್ಕಡವು, ಕಾರ್ಯದರ್ಶಿ ಹರಿಪ್ರಸಾದ ಪೆರಿಯಪ್ಪು, ಬಾಲಸುಬ್ರಹ್ಮಣ್ಯ ಭಟ್ ಬೆಂಗಳೂರು, ಗೋವಿಂದ ಬಳ್ಳಮೂಲೆ, ರಾಮಾಯಣ ನವಾಹ ಸಮಿತಿ ಅಧ್ಯಕ್ಷ ಬಿ.ಜಿ.ರಾಮ ಭಟ್, ಮುಳ್ಳೇರಿಯ ಮಂಡಲಾಧ್ಯಕ್ಷ ಪ್ರೊ.ಶ್ರೀಕೃಷ್ಣ ಭಟ್, ಕುಮಾರ ಸುಬ್ರಹ್ಮಣ್ಯ ಪೈಸಾರಿ, ಸುಬ್ರಹ್ಮಣ್ಯ ಭಟ್ ಗಬ್ಬಲಡ್ಕ, ನವನೀತ ಪ್ರಿಯ ಕೈಪಂಗಳ, ವೇದಮೂರ್ತಿ ಕೇಶವಪ್ರಸಾದ ಕೂಟೇಲು, ಮೊದಲಾದವರು ಮಾತನಾಡಿದರು.