ಬದಿಯಡ್ಕ : ಬಜಕೂಡ್ಲು ಅಮೃತಧಾರಾ ಗೋಶಾಲೆಯ `ಸಾಕೇತ’ ವೇದಿಕೆಯಲ್ಲಿ ಕಳೆದ 9 ದಿನಗಳಿಂದ ಮುಳ್ಳೇರಿಯ ಹವ್ಯಕ ಮಂಡಲದ ನೇತೃತ್ವದಲ್ಲಿ ನಡೆದುಬರುತ್ತಿರುವ ಶ್ರೀಮದ್ವಾಲ್ಮೀಕೀ ರಾಮಾಯಣ ಪಾರಾಯಣ ನವಾಹ ಹಾಗೂ ಗೋಮಾತಾ ಸಪರ್ಯಾ-ಗೋಪಾಷ್ಟಮೀ ಮಹೋತ್ಸವದ ಶ್ರೀಮದ್ವಾಲ್ಮೀಕೀ ರಾಮಾಯಣ ಪಾರಾಯಣ, ಗೋಪಾಷ್ಟಮೀ ಮಹೋತ್ಸವವು ಶನಿವಾರ ರಾತ್ರಿ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.

ದೇವೇಂದ್ರನನ್ನು ಪೂಜಿಸಿಕೊಂಡು ಬರುತ್ತಿದ್ದ ಗೋಪಾಲಕರು ಶ್ರೀಕೃಷ್ಣನ ನಿರ್ದೇಶನದಂತೆ ಗೋವರ್ಧನ ಪರ್ವತವನ್ನು ಪೂಜಿಸುವುದನ್ನು ಕಂಡು ಕ್ರೋಧಗೊಂಡ ದೇವೇಂದ್ರನು ಗೋಕುಲದ ಮೇಲೆ ಸತತ 7 ದಿನಗಳ ಕಾಲ ಮಳೆ ಸುರಿಸಿದ. ಗೋಪಾಲಕರು ಶ್ರೀಕೃಷ್ಣನ ಮೊರೆಹೋದಾಗ ಆತ ಗೋವರ್ಧನ ಪರ್ವತವನ್ನೇ ಕಿರುಬೆರಳಿನಿಂದ ಎತ್ತಿ ಹಿಡಿದು ಇಂದ್ರನ ಗರ್ವಭಂಗ ಮಾಡಿ ಗೋಪಾಲಕರನ್ನು ಹಾಗೂ ಗೋವುಗಳನ್ನು ರಕ್ಷಿಸಿದ ದಿನವನ್ನು ಗೋಪಾಷ್ಟಮಿಯಾಗಿ ಆಚರಿಸುತ್ತಾರೆ. ಭಾರತೀಯ ಗೋತಳಿಯ ಗೋಮಯದಿಂದ ವಿಶೇಷವಾಗಿ ನಿರ್ಮಿಸಲ್ಪಟ್ಟ ಗೋವರ್ಧನ ಗಿರಿಯಲ್ಲಿ ಶ್ರೀಕೃಷ್ಣನನ್ನು ಪೂಜಿಸಲಾಯಿತು. ಮುಸ್ಸಂಜೆಯ ಹೊತ್ತಿನಲ್ಲಿ 1008 ಹಣತೆಗಳಿಂದ ಶೃಂಗರಿಸಿದ ಗೋವರ್ಧನ ಗಿರಿಯ ದೃಶ್ಯ ಸೇರಿದ ಆಸ್ತಿಕರನ್ನು ಭಕ್ತಿಪರವಶರನ್ನಾಗಿಸಿತು. ಶ್ರೀರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಬಜಕೂಡ್ಲು ಅಮೃತಧಾರಾ ಗೋಶಾಲೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಗೋಪಾಷ್ಟಮಿ ಕಾರ್ಯಕ್ರಮವು ವೇದಮೂರ್ತಿ ಕೇಶವ ಪ್ರಸಾದ ಕೂಟೇಲು ಅವರ ನೇತೃತ್ವದಲ್ಲಿ ಬಹುವಿಜೃಂಭಣೆಯಿಂದ ನಡೆದು ಬರುತ್ತಿದೆ.

RELATED ARTICLES  ಪ್ರವಾಹ ಪರಿಸ್ಥಿತಿ ನಿರ್ವಹಿಸಲು ರಾಜ್ಯ ಸರ್ಕಾರದಿಂದ 195 ಕೋಟಿ ಬಿಡುಗಡೆ.

ದೀಪಾವಳಿಯ ಗೋಪಾಷ್ಟಮಿ ಪರ್ವ ಕಾಲದಲ್ಲಿ ಗೋವಿನ ಸಾನ್ನಿಧ್ಯದಲ್ಲಿ ರಾಮಾಯಣ ಪಾರಾಯಣ ಕಾರ್ಯಕ್ರಮದ ಮೂಲಕ ಶ್ರೀರಾಮಚಂದ್ರನನ್ನು ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಆರಾಧಿಸಿರುವುದು ನಾಡಿನ ಸಮಸ್ಥರ ಶ್ರೇಯೋಭಿವೃದ್ಧಿಗೆ ಸಂಪ್ರಾರ್ಥಿಸಲಾಗಿದೆ. ಮುಳ್ಳೇರಿಯ ಹವ್ಯಕ ಮಂಡಲದ ವಿವಿಧ ವಲಯಗಳ ಕಾರ್ಯಕರ್ತರ ಒಗ್ಗಟ್ಟಿನ ಪರಿಶ್ರಮದಿಂದ ಕಾರ್ಯಕ್ರಮಗಳು ಯಶಸ್ವಿಯಾಗಿ ಪೂರ್ಣಗೊಂಡಿದೆ.

RELATED ARTICLES  ಖಡ್ಡಾಯ ಮಲೆಯಾಳಿ ಭಾಷಾ ಹೇರಿಕೆ ವಿರುದ್ಧ ಪ್ರತಿಭಟನೆ.