ಭಟ್ಕಳ: ನಾನು ಬಿಜೆಪಿ ಪಕ್ಷದಲ್ಲಿಯೆ ರಾಜಕೀಯ ನಿವೃತ್ತಿ ಹೊಂದುದ್ದೇನೆ ಹೊರತು ಕಾಂಗ್ರೆಸ್ ಸೇರುವುದಿಲ್ಲ ಎಂದು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಜೆ.ಡಿ ನಾಯ್ಕ ತಿಳಿಸಿದ್ದಾರೆ.

ಅರವಿಂದ್ ಭಟ್ ಎನ್ನುವ ವ್ಯಕ್ತಿ ನನ್ನ ತೇಜೋವಧೆ ಮಾಡುವ ದೃಷ್ಟಿಯಿಂದ ನನ್ನ ಫೇಸ್ಬುಕ್ ಖಾತೆಯಲ್ಲಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಬರೆದಿದ್ದರು. ಆದರೆ ನಾನು ಮತ್ತೆ ಎಂದು ಕಾಂಗ್ರೆಸ್ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

RELATED ARTICLES  ಭಟ್ಕಳದಲ್ಲಿ ಮತ್ತೊಬ್ಬ ವೃದ್ಧನಿಗೆ ಪಾಸಿಟೀವ್ : ಮತ್ತೆ ಕರೋನಾ ಭೀತಿ..!

ಅರವಿಂದ್ ಭಟ್ ಸೇರಿದಂತೆ ಇನ್ನು 10 ಜನರ ಮೇಲೆ ಪೊಲೀಸರಿಗೆ ದೂರು ಸಲ್ಲಿಸಿದ್ದೇನೆ. ನಾನು ಮತ್ತೆ ಕಾಂಗ್ರೆಸ್ ಸೇರುತ್ತೇನೆ ಎಂಬುದು ಸತ್ಯಕ್ಕ ದೂರವಾದದ್ದಾಗಿದ್ದು, ಕಾಂಗ್ರೆಸ್ ಅಧಿಕಾರದಿಂದ ಬೇಸತ್ತು ನಾನು ಬಿಜೆಪಿ ಸೇರಿದ್ದೇನೆ, ನಾನು ಇದೇ ಪಕ್ಷದಲ್ಲಿ ದುಡಿದು ಇಲ್ಲಿಯೆ ನಿವೃತ್ತಿ ಹೊಂದುತ್ತೇನೆ ಎಂದರು

RELATED ARTICLES  ಶಿರಸಿ ಜಾತ್ರೆ : ನಗರ ಸಭೆಗೆ ಒಟ್ಟು 42.64 ಲಕ್ಷ ರೂ. ಆದಾಯ

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಸುಬ್ರಾಯ ನಾಯ್ಕ, ಜೆ.ಡಿ.ನಾಯ್ಕ ಅಭಿಮಾನಿ ಬಳಗದ ಅಧ್ಯಕ್ಷ ನಾಗೇಶ ದೇವಾಡಿಗ, ಸಚಿನ್ ನಾಯ್ಕ, ರಮೇಶ ನಾಯ್ಕ ನೂಜ, ನಾರಾಯಣ ನಾಯ್ಕ, ಕುಮಾರ ನಾಯ್ಕ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.