ಶ್ರೀಯುತ ಬಳ್ಕೂರು ಕೃಷ್ಣ ಯಾಜಿ ಯವರಿಗೆ ರಾಜ್ಯಪ್ರಶಸ್ತಿ ದೊರೆಯುತ್ತಿರುವುದು ಸಂತಸದ ವಿಷಯ.
ಇವರು ಯಕ್ಷಗಾನದಲ್ಲಿ ಸಾಧಿಸಿದ ಸಾಧನೆ ಅಪಾರ. ಬೆಳೆದ ಪರಿ ಅಭ್ಯಾಸಿಗಳಿಗೆ ಆದರ್ಶ. ಬಾಲ ಗೋಪಾಲ ವೇಶದಿಂದ, ಪೀಠಿಕಾ ಸ್ತ್ರೀ ವೇಶ, ಒಡ್ಡೋಲಗದಿಂದ ಹಿಡಿದು ಇಂದು ಯಾವ ಪಾತ್ರಕ್ಕಾದರೂ ಸೈ ಎನಿಸಬಲ್ಲ ಮತ್ತೊಬ್ಬ ಕಲಾವಿದನಿಲ್ಲ. ಉತ್ತರಕನ್ನಡದ ಶೈಲಿಯನ್ನು ಇವರಷ್ಟು ಪ್ರಭುದ್ಧವಾಗಿ ಅಭಿನಯಿಸಬಲ್ಲವರೂ ಬೇರೊಬ್ಬರಿಲ್ಲ.
ಮಹಾಬಲ ಹೆಗಡೆಯವರ ಮೆಚ್ಚಿನ ಶಿಷ್ಯನಾಗಿ, ನಿನ್ನೆಯಷ್ಟೇ ಡಾ. ಮಹಾಬಲ ಹೆಗಡೆ ಪ್ರಶಸ್ತಿಯನ್ನು ಪಡೆದ ಇವರಿಗೆ ಈ ದಿನ *ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ*ದೊರೆತಿರುವದು ಯಕ್ಷಗಾನ ಪ್ರಿಯರಿಗೆಲ್ಲಾ ಹಿಗಾಗಿಗಿದೆ. ಕೆರಮನೆ ಮಹಾಬಲ ಹೆಗಡೆ, ಶಂಭು ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆಯವರೆಲ್ಲಾ ನಿಮ್ಮ ನಂತರ ಹೆಸರಿಸ ಕಲಾವಿದ ಯಾರು ಎಂದು ಕೇಳಿದಾಗ ಉತ್ತರಿಸಿದ ಏಕಮಾತ್ರ ಹೆಸರೆಂದರೆ ಅದು ಬಳ್ಕೂರು ಕೃಷ್ಣ ಯಾಜಿ ಎಂದೇ. ಕನ್ನಡಿಗರ ಹೆಮ್ಮೆಯ ರಾಜ್ಯೋತ್ಸವ ನಮ್ಮ ಕೃಷ್ಣ ಯಾಜಿಯವರಿಗೆ ದೊರೆತಿರುವದಕ್ಕೆ ಅವರ ಕಲಾವಂತಿಕೆಯ ಮತ್ತು ಸಜ್ಜನಿಕೆಯ ವ್ಯಕ್ತಿತ್ವಕ್ಕೆ ಪುಟವಿಟ್ಟ ಚಿನ್ನದಹಾಗೆ ಆಗಿದೆ. ಕೃಷ್ಣಯಾಜಿಯವರಿಗೆ ಅಭಿನಂದನಾಪೂರ್ವಕ ನಮಸ್ಕಾರಗಳು. ನಿಮ್ಮ ಕಲಾಜೀವನದಲ್ಲಿ ಇನ್ನಷ್ಟು ಎತ್ತರದ ಪ್ರಶಸ್ತಿ ನಿಮ್ಮನ್ನು ಹುಡುಕಿಕೊಂಡು ಬರಲಿ ಎಂದು ಹಾರೈಸುವೆ.
ಲೇಖನ ಪ್ರಸ್ತುತಿ :ಶ್ರೀ ನಾರಾಯಣ ಯಾಜಿ