ದಾಂಡೇಲಿ : ನಗರದ ಸುಭಾಸನಗರದಲ್ಲಿರುವ ಒಳ ಕ್ರೀಡಾಂಗಣಕ್ಕೆ ಇನ್ನಷ್ಟು ಮೂಲಸೌಕರ್ಯವನ್ನು ಒದಗಿಸಿಕೊಡುವಂತೆ ನಗರದ ಬ್ಯಾಡ್ಮಿಂಟನ್ ಅಸೋಶಿಯಶನ್ ವತಿಯಿಂದ ಅಧ್ಯಕ್ಷ ಉದ್ಯಮಿ ಎಸ್.ಪ್ರಕಾಶ ಶೆಟ್ಟಿಯವರ ನೇತೃತ್ವದಲ್ಲಿ ಸಚಿವ ದೇಶಪಾಂಡೆಯವರಿಗೆ ಮಂಗಳವಾರ ಮನವಿ ನೀಡಿ ವಿನಂತಿಸಲಾಯಿತು.

RELATED ARTICLES  ಮೇರಾ ಭಾರತ ಪ್ರತಿಷ್ಠಾನದಿಂದ ಹೊಸಗದ್ದೆ ಶಾಲೆಯಲ್ಲಿ ಸ್ವಚ್ಛತಾ ಅಭಿಯಾನ

ಮನವಿಗೆ ಸಕರಾತ್ಮಕವಾಗಿ ಸ್ಪಂದಿಸಿದ ಸಚಿವ ದೇಶಪಾಂಡೆಯವರು ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು. ಈ ಸಂದರ್ಭದಲ್ಲಿ ಬ್ಯಾಡ್ಮಿಂಟನ್ ಅಸೋಶಿಯಶನ್ ಅಧ್ಯಕ್ಷ ಎಸ್.ಪ್ರಕಾಶ ಶೆಟ್ಟಿ, ಪದಾಧಿಕಾರಿಗಳಾದ ವಿಷ್ಣುಮೂರ್ತಿ ರಾವ್, ಸುರೇಶ ಕಾಮತ್, ಪ್ರಮೋದ ಶಾನಭಾಗ್, ಇಮಾಮ್ ಸರ್ವರ್, ಡಾ: ಸಲ್ಮಾನ್, ಸಚ್ಚಿನ್ ವಾಜ್, ಸಂದೇಶ್ ಇನ್ಸೂಲಿಕರ್, ನವೀನ ಕಾಮತ್ ಮೊದಲಾದವರು ಉಪಸ್ಥಿತರಿದ್ದರು.

RELATED ARTICLES  ಘೋಷಣೆಯಾಯ್ತು 'ಪತಂಜಲಿ ಬಿಎಸ್ಎನ್ಎಲ್ ಪ್ಲಾನ್'! ಇದೇನು ಹೊಸ ಯೋಜನೆ ಗೊತ್ತಾ?