ಕಾರವಾರ: ಸರಕಾರದಿಂದ ಕಾರವಾರದಲ್ಲಿ ನಡೆಸಲಾಗುವ ಜಿಲ್ಲಾಮಟ್ಟದ ಕರಾವಳಿ ಉತ್ಸವ ನಡೆಸಲಾಗುವು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್ ವಿ ದೇಶಪಾಂಡೆ ತಿಳಿಸಿದ್ರು.
ಇಂದು ಕಾರವಾರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಡೆದ ಸಭೆಯಲ್ಲಿ ಕರಾವಳಿ ಉತ್ಸವ ದಿನಾಂಕ ನಿಗದಿ ಪಡಿಸಲಾಯಿತು.
ಉತ್ಸವದಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಅವಕಾಶ, ನೀಡಲಾಗುವು. ಎರಡು ದಿನ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕಲಾವಿಧರಿಗೆ ಅವಕಾಶ ನೀಡಲಾಗುವುದು. ಉತ್ಸವದ ಅಂಗವಾಗಿ ಕುಸ್ತಿ ಪಂದ್ಯ, ಬಿಚ್ ಕಬ್ಬಡಿ, ಗಾಳಿ ಪಟ್ಟ ಸ್ಪರ್ಧೆ, ದೋಣಿ ಸ್ಪರ್ಧೆ, ಏರ್ಪಡಿಸಲಾಗುವುದು, ಕಾರ್ಯಕ್ರಮ ವೀಕ್ಷಣೆಗೆ ಬರುವ ಕಾರವಾರ ತಾಲೂಕಿನ ಗ್ರಾಮೀಣ ಭಾಗದಿಂದ ಬರುವ ಜನರಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದ್ರು.
ಸಭೆಯಲ್ಲಿ ಜಿಲ್ಲಾಧಿಕಾರಿ ಎಸ್ ನಕುಲ್, ಜಿಲ್ಲಾಪಂಚಾಯತ ಅಧ್ಯಕ್ಷೆ ಜಯಶ್ರೀ ಮೊಗೆರೆ, ಶಾಸಕ ಸತೀಶ ಸೈಲ್ ಮೊದಲಾದವರು ಹಾಜರಿದ್ದರು.