ಶಿರಸಿ ; ಹಿಂದೂ ಜಾಗರಣಾ ವೇದಿಕೆ ಮತ್ತು ವಿಶ್ವ ಹಿಂದೂ ಪರಿಷತ್ ಶಿರಸಿ ಇವರ ವತಿಯಿಂದ ಶ್ರೀ ಗೋಪಾಲ ದೇವಡಿಗಾ, ಹೆಚ್.ಜೆ.ವಿ. ಶಿರಸಿ ತಾಲೂಕಾ ಸಂಚಾಲಕರು ಇವರ ನೇತೃತ್ವದಲ್ಲಿ ಇಂದು ಶಿರಸಿಯ ಸಹಾಯಕ ಕಮೀಷನರ್ ರವರ ಕಚೇರಿಯ ಎದುರಿನ ರಸ್ತೆಯ ಪಕ್ಕದಲ್ಲಿ ಹಿಂದೂ ಸಾಮಾಜಿಕ ಕಾರ್ಯಕರ್ತರ ಮೇಲೆ ನಡೆದಿರುವ ಸರಕಾರಿ ಪ್ರಯೋಜಿತ ದಬ್ಬಾಳಿಕೆ, ದೌರ್ಜನ್ಯ ಹಾಗೂ ಕಿರುಕುಳ ಕುರಿತು ಕ್ರಮಕೈಗೊಳ್ಳುವುದು, ಹಿಂದೂ ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳನ್ನು ಹತ್ತಿಕುವ ರಾಜ್ಯ ಸರ್ಕಾರದ ಕೆಲವು ಅಧಿಕಾರಿಗಳ ಅತಿರೇಕದ ವರ್ತನೆ ಕುರಿತು ತನಿಖೆ ಹಾಗೂ ಕ್ರಮಕೈಗೊಳ್ಳಲು ಸೂಚಿಸುವುದು, ಮುಸ್ಲಿ ಮೂಲವಾದಿಗಳ ರಾಷ್ಟ್ರ ವಿರೋಧಿ ಹಿಂದೂ ವಿರೋಧಿ ಕೃತ್ಯಗಳನ್ನು ಮೆಟ್ಟಿನಿಲ್ಲುವ ದಿಟ್ಟ ಕ್ರಮಕ್ಕಾಗಿ ರಾಜ್ಯ ಸರಕಾರದ ಮೇಲೆ ಒತ್ತಡ ಹೇರುವುದು ಇತ್ಯಾದಿ ಬೇಡಿಕೆ ಆಗ್ರಹಿಸಿ, ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕರಾದ ಶ್ರೀ ವಿಶ್ವೇಶ್ವರ ಹೆಗಡೆ ಮಾತನಾಡಿ, ರಾಜ್ಯದ ಕಾಂಗ್ರೇಸ್ ಸರಕಾರದ ಕಾರ್ಯವೈಖರಿ ನೋಡಿದರೆ ಸಂವಿಧಾನಿಕವಾಗಿ ತನ್ನ ಆಡಳಿತ ನಡೆಸುವಲ್ಲಿ ವಿಫಲವಾಗಿದೆ. ಸಿದ್ದರಾಮಯ್ಯನವರು ಅಲ್ಪಸಂಖ್ಯಾತರ ಓಲೈಕೆಯ ರಾಜಕೀಯ ಮಾಡುತ್ತಿದ್ದಾರೆ. ಬಹುಸಂಖ್ಯಾತರ ಭಾವನಗೆ ಧಕ್ಕೆ ತರುವುದಕ್ಕೆ ಗೋ ಮಾಂಸ ತಿನ್ನುತ್ತೇನೆ ಅನ್ನುತ್ತಾರೆ. ಸಿದ್ದರಾಮಯ್ಯನವರ ಸರಕಾರ ಯಾವ ರೀತಿ ಹಿಂದೂ ವಿರೋಧಿ ಆಡಳಿತ ನಡೆಸುತ್ತಿದೆ ಎಂಬುದು ಜನತೆಗೆ ಮುಟ್ಟಿಸುವ ಕೆಲಸ ನಮ್ಮ ಹಿಂದೂ ಪರ ಸಂಘಟನೆಗಳು ಮಾಡುತ್ತಿವೆ. ಪೊಲೀಸ ಇಲಾಖೆಯವರು ಸರಕಾರದ ಒತ್ತಡಕ್ಕೆ ಮಣಿದು ಭಟ್ಕಳದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲಿಸಿವೆ. ಈ ರೀತಿ ಸುಳ್ಳು ಪ್ರಕರಣ ದಾಖಲಿಸುವ ಅಧಿಕಾರಿಗಳನ್ನು ಗುರುತಿಸಿ ಮುಂದಿನ ದಿನಗಳಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದಲ್ಲಿ ತಕ್ಕ ಪಾಠ ಕಲಿಸುತ್ತೇವೆ ಎಂದರು.
ಎ.ಸಿ. ಶ್ರೀ ರಾಜುಮೊಗವೀರ ರವರಿಗೆ ಮಾನ್ಯ ರಾಜ್ಯಪಾಲರಿಗೆ ಸಂಭೋಧಿಸಿದ ಮನವಿಯನ್ನು ಸಲ್ಲಿಸಿದರು.