ಭಾರತದಲ್ಲಿ ದೇವಾಲಯಗಳ ಸಂಖ್ಯೆಗೇನು ಕಡಿಮೆ ಇಲ್ಲ. ಹಾಗೆಯೇ ವಿಚಿತ್ರ ದೇವಾಲಯಗಳೂ ಇಲ್ಲಿ ಕಾಣಸಿಗುತ್ತವೆ. ಈ ಪೈಕಿ ಉತ್ತರಾಖಂಡ್ ನ ಫತೇಪುರದಲ್ಲಿರುವ ಗೋಪಾಲ್ ಬಿಶ್ತ್ ದೇವಾಲಯವೂ ಒಂದು.
ಈ ದೇವಾಲಯದ ವಿಶೇಷತೆ ಏನು ಅಂದ್ರಾ? ಎಲ್ಲಾ ದೇವಾಲಯಗಳಲ್ಲಿ ಸಾಮಾನ್ಯವಾಗಿ ದೇವರಿಗೆ ಹಣ್ಣು-ಕಾಯಿ, ನೈವೇದ್ಯ, ಕಾಣಿಕೆಗಳನ್ನು ಅರ್ಪಿಸಿದರೆ ಈ ದೇವಾಲಯದಲ್ಲಿ ಮಾತ್ರ ವಿಚಿತ್ರ ಆಚರಣೆ ಇದೆ. ಅದೇನೆಂದರೆ ದೇವಾಲಯಕ್ಕೆ ಭೇಟಿ ನೀಡುವ ಭಕ್ತಾದಿಗಳು ತಮ್ಮ ಇಷ್ಟಾರ್ಥಗಳು ಈಡೇರಲು ಹರಕೆ ಹೊತ್ತು ಕುಡಗೋಲನ್ನು ಅರ್ಪಿಸುತ್ತಾರೆ!
ದಟ್ಟ ಕಾಡಿನ ನಡುವೆ ಇರುವ ಈ ದೇವಾಲಯದ ಬಗ್ಗೆ ಸ್ಥಳೀಯರಿಗೆ ಅಪಾರ ಶ್ರದ್ಧೆ ಮತ್ತು ಭಕ್ತಿ ಇದೆ. ಭಕ್ತಾದಿಗಳು ಏನೇ ಕೋರಿದರೂ ಈ ದೇವರು ಅದನ್ನು ಈಡೇರಿಸುತ್ತಾನೆ ಎಂದು ಹೇಳುತ್ತಾರೆ.
ದೇವಾಲಯಕ್ಕೆ ಬರುವ ಹೆಚ್ಚಿನ ಭಕ್ತಾದಿಗಳು ತಮ್ಮ ಜಾನುವಾರು ಹಾಗೂ ಕೃಷಿ ಭೂಮಿಯನ್ನು ರಕ್ಷಿಸುವಂತೆ ದೇವಾಲಯದಲ್ಲಿ ಪ್ರಾರ್ಥಿಸಿ ಕುಡಗೋಲು ಅರ್ಪಿಸುವುದು ಇಲ್ಲಿ ಸಾಮಾನ್ಯದ ಸಂಗತಿಯಾಗಿದೆ.