ಕುಮಟಾ – ತಾಲೂಕಿನ ತಾಲೂಕಾಡಳಿತದ ವತಿಯಿಂದ ಪಟ್ಟಣದ ಮಣಕಿ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡಾಂಬೆಯ ಪೂಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕುಮಟಾ,ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರು ಮತ್ತು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶಾರದಾ ಮೋಹನ ಶೆಟ್ಟಿ ನೆರವರಿಸಿದರು.ನಂತರ ಮಾತನಾಡಿದ ಶಾಸಕರು ಕನ್ನಡ ಭಾಷೆ ಅತ್ಯಂತ ಶ್ರೀ ಮಂತ ಭಾಷೆ. ಕನ್ನಡವನ್ನು ನಾವು ಉಳಿಸಿ ಬೆಳಸಬೇಕು, ನಾವು ಕನ್ನಡಿಗರು ಎನ್ನಲು ಕೇವಲ ಮಾತಿನಿಂದ ಅಲ್ಲ.. ಎಲ್ಲಾ ರೀತಿಯಾ ಸಾಹಿತ್ಯ,ಕಲೆ ಮೂಲಕ ಕನ್ನಡ ಬೆಳಸಬೇಕು. ಆಂಗ್ಲ ಬಾಷೆಯನ್ನು ವ್ಯವಹಾರಕ್ಕಾಗಿ ಬಳಸಿಕೊಂಡು ಕನ್ನಡವನ್ನು ಉಸಿರಾಗಿಸಿಕೊಳ್ಳಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಭಾಗಿಯಾದ ಜಿಲ್ಲೆಯ ಖ್ಯಾತ ಸಾಹಿತಿಗಳಾದ ಬಿ.ಎ. ಸನದಿಯವರು ಮಾತನಾಡಿ ಜಿಲ್ಲೆಯಲ್ಲಿ ಅನೇಕ ಭಾಷೆಗಳಿವೆ ಆದರೆ ಎಲ್ಲಾ ಭಾಷೆಯನ್ನು ಸಂಭಾಳಿಸಿ ನಮ್ಮ ಭಾಷೆಯನ್ನು ಜೀವಂತಾಗಿಡಬೇಕು. ಕನ್ನಡ ಭಾಷೆ ಎಂದೂ ಸಾಯುವಂತೆ ಮಾಡಬಾರದು. ಕನ್ನಡ ಅಮರವಾಗಿಡುವಲ್ಲಿ ನಾವು ಕನ್ನಡ ಬಳಕೆ ಮಾಡುವುದು ಅವಶ್ಯವಾಗಿದೆ ಎಂದರು..
ಇದೆ ವೇಳೆ ಕ.ಸಾ.ಪದ ತಾಲೂಕಾಧ್ಯಕ್ಷ ಶ್ರೀಧರ ಉಪ್ಪಿನಗಣಪತಿ ಮಾತನಾಡಿ ಕನ್ನಡದ ಮತ್ತು ಕನ್ನಡ ಕವಿಗಳ ಇತಿಹಾಸ ತಿಳಿಸುವ ಕಾರ್ಯ ಮಾಡಿದ್ರು…
ಈ ವೇದಿಕೆಯಲ್ಲಿ ಸಹಾಯಕ ಆಯುಕ್ತರಾದ ಲಕ್ಷ್ಮಿ ಪ್ರೀಯಾ,ತಹಸಿಲ್ದಾರ ಮೇಘರಾಜ ನಾಯ್ಕ,ಪುರಸಭಾ ಅಧ್ಯಕ್ಷ ಮಧುಸೂಧನ್ ಶೇಟ್,ಸೇರಿದಂತೆ ಹಲವರು ಪಾಲ್ಗೊಂಡಿದ್ರು.ವಿದ್ಯಾರ್ಥಿಗಳು,.ಸಾರ್ವಜನಿಕರು ಭಾಗಿಯಾಗಿದ್ರು. ಹಲವು ಇಲಾಖೆಯ ವತಿಯಿಂದ ಮತ್ತು ವಿದ್ಯಾರ್ಥಿಗಳಿಂದ ಕನ್ನಡ ತಾಯಿ ಭುವನೇಶ್ವರಿಯ ಮೆರವಣಿಗೆ ಹಮ್ಮಿಕೊಳ್ಳಲಾಯಿತು..