ಕುಮಟಾ: ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಕನ್ನಡ ರಾಜ್ಯೋತ್ಸವದ ನಿಮಿತ್ತ ವೈವಿಧ್ಯಮಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಕ್ಕಳೇ ರಚಿಸಿದ ಹಾಗೂ ಹಿರಿಯ ಕವಿಗಳ ಕನ್ನಡ ಗೀತೆಗಳು, ಸಿದ್ಧ ಭಾಷಣಗಳು ರಾಜ್ಯೋತ್ಸವದ ಸಡಗರದಲ್ಲಿ ಪ್ರತಿಧ್ವನಿಸಿದವು. ವಿದ್ಯಾರ್ಥಿಗಳಾದ ರಕ್ಷಿತಾ ಪಟಗಾರ, ಶ್ರೀಲಕ್ಷ್ಮೀ ಭಟ್ಟ, ರಶ್ಮಿ ಹರಿಕಾಂತ, ವಿಶ್ವಾಸ ಪೈ, ವಿವೇಕ ಮುಕ್ರಿ, ಪೂರ್ಣಿಮಾ ಪಟಗಾರ, ಸೌಂದರ್ಯ ನಾಯ್ಕ, ಸ್ನೇಹಾ ಪಟಗಾರ ಮೊದಲಾದವರು ಪಾಲ್ಗೊಂಡರು. ಈ ಸಂದರ್ಭದಲ್ಲಿ ಕನ್ನಡ ವಿಷಯದಲ್ಲಿ ಈ ವರೆಗೆ ಅತ್ಯತ್ಭುತ ಪ್ರತಿಭೆ ತೋರುತ್ತಿರುವ, ಸುಂದರ ಕೈಬರಹ, ಸ್ಪಷ್ಟ ಓದು ರೂಢಿಸಿಕೊಂಡಿರುವ ಹತ್ತನೆಯ ತರಗತಿ ವಿದ್ಯಾರ್ಥಿನಿ ಕುಮಾರಿ ಅಪೂರ್ವ ಅನಿಲ್ ಚಿತ್ರಿಗಿಗೆ ಪ್ರಪ್ರಥಮ ಬಾರಿ ಕನ್ನಡ ಶಿಕ್ಷಕ ಎಸ್.ಪಿ.ಪೈ ನೇತೃತ್ವದ ಆಯ್ಕೆ ಸಮಿತಿಯು “ಕನ್ನಡ ಕುಸುಮ” ಪ್ರಶಸ್ತಿಯನ್ನು ಪ್ರಕಟಿಸಿತು. ಪ್ರಶಸ್ತಿ ಪುರಸ್ಕøತ ಅಪೂರ್ವಳನ್ನು ಶಿಕ್ಷಕವೃಂದದವರು ಅಭಿನಂದಿಸಿ ಸನ್ಮಾನಿಸಿದರು.

RELATED ARTICLES  ಎಟಿಎಂ ಕಾರ್ಡ ಎಗರಿಸಿ ಹಣ ದೋಚಿದ ದುಷ್ಕರ್ಮಿ : ಕುಮಟಾದಲ್ಲಿ ನಡೆಯಿತು ಘಟನೆ

ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮುಖ್ಯಾಧ್ಯಾಪಕ ಎನ್.ಆರ್.ಗಜು ಕನ್ನಡ ಪ್ರೇಮ ಮತ್ತು ಅಭಿಮಾನ ವಿದ್ಯಾರ್ಥಿ ದೆಸೆಯಿಂದಲೇ ಒಡಮೂಡಿದರೆ ಗಡಿಭಾಗದಲ್ಲಿ ಭಾಷಾ ಪ್ರೀತಿಯನ್ನು ಮೂಡಿಸಬಹುದೆಂದು ಅಭಿಪ್ರಾಯಪಟ್ಟರು. ಅನ್ಯಭಾಷೆಯನ್ನು ಗೌರವಿಸುವದರ ಜೊತೆಗೆ ಕನ್ನಡವನ್ನು ಉಳಿಸಿ ಬೆಳೆಸಿಕೊಳ್ಳಬೇಕಾದ ಅಗತ್ಯತೆ ಇಂದಿನ ತುರ್ತಾಗಿದೆ ಎಂದರು. ಪ್ರಾರಂಭದಲ್ಲಿ ವಿದ್ಯಾರ್ಥಿನಿ ಪ್ರತಿನಿಧಿ ಪೂರ್ಣಿಮಾ ಪಟಗಾರ ಸ್ವಾಗತಿಸಿದರು. ಕುಮಾರಿ ಐಶ್ವರ್ಯಾ ಶಾನಭಾಗ ನಿರೂಪಿಸಿದರೆ, ಕುಮಾರ ವಿವೇಕ ಮುಕ್ರಿ ವಂದಿಸಿದರು.

RELATED ARTICLES  ಮಕ್ಕಳಾಗಲಿಲ್ಲ ಎಂಬ ನೋವಲ್ಲಿ ಆತ್ಮಹತ್ಯೆಗೆ ಶರಣಾದ ಕುಮಟಾ ಯುವಕ?