ಕಾರವಾರ: ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಕನ್ನಡ ರಾಜ್ಯೋತ್ಸವ ರಥಕ್ಕೆ ಚಾಲನೆ ನೀಡಿದರು.
ಬಳಿಕ ನಗರದ ಪ್ರಮುಖ ರಸ್ತೆಗಳಲ್ಲಿ ಕನ್ನಡ ರಥದ ಜತೆ ಸಂಚರಿಸಿದರು. ಡೋಲು, ಗ್ರಾಮೀಣ ಜನಪದರ ವೇಷಭೂಷಣ ತೊಟ್ಟ ಕಲಾವಿದರು ರಸ್ತೆಯುದ್ದಕ್ಕೂ ನರ್ತಿಸಿದರು.
ಜಿಲ್ಲಾ ಪಂಚಾಯತ ಅಧ್ಯಕ್ಷೆ ಜಯಶ್ರೀ ಮೊಗೇರ, ಕೆಎಫ್ಡಿಸಿ ಅಧ್ಯಕ್ಷ ರಾಜೇಂದ್ರ ನಾಯಕ, ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ತಾಲ್ಲೂಕು ಪಂಚಾಯತ ಅಧ್ಯಕ್ಷೆ ಪ್ರಮೀಳಾ ನಾಯ್ಕ ಹಾಜರಿದ್ದರು.

aa

ಹೊನ್ನಾವರ – ತಾಲೂಕಿನ ಪೊಲೀಸ್ ಪೆರೇಡ್ ಮೈದಾನದಲ್ಲಿ ಇಂದು ರಾಜ್ಯೋತ್ಸವದ ಅಂಗವಾಗಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ರಾಜ್ಯೋತ್ಸವವನ್ನು ಆಚರಣೆ ಮಾಡಲಾಯಿತು. ಮೊದಲಿಗೆ ತಾಯಿ ಭುವನೇಶ್ವರಿ ದೇವಿ ಗೆ ಪೂಜೆ ಸಲ್ಲಿಸಿಲಾಯಿತು. ಕನ್ನಡ ನಾಡು ನುಡಿ ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಸ್ಥಬ್ಧ ಚಿತ್ರಗಳ ಮೆರವಣಿಗೆ ಮಾಡಿ ರಾಜ್ಯೋತ್ಸವಕ್ಕೆ ಮೆರಗು ನೀಡಿದರು.

RELATED ARTICLES  ಶ್ರೀ ಶ್ರೀನಾಗಾನಂದ ಸ್ವಾಮೀಜಿಯವರಿಗೆ 'ಗೋಕರ್ಣ ಗೌರವ'

xxxxxx

ಕರ್ನಾಟಕ ಕ್ರಾಂತಿ ರಂಗ ಹೊನ್ನಾವರ ತಾಲೂಕಾ ಘಟಕದ ವತಿಯಿಂದ ರಾಜ್ಯೋತ್ಸವದ ಅಂಗವಾಗಿ ಹೊನ್ನಾವರ ತಾಲೂಕಾ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಿದರು.ಈ ಸಂದರ್ಬದಲ್ಲಿ ಅಧ್ಯಕ್ಷರಾದ ಮಂಗಲದಾಸ್ ನಾಯ್ಕ ಅನಿತಾ ಪಾಳೇಕರ್ ಹೊನ್ನಾವರ ಮಹಿಳಾ ಉಪಾಧ್ಯಕ್ಷರು ಜ್ಞಾನೇಶ್ವರ ನಾಯ್ಕ ಅನಂತ ಮೊಗೇರ ಶಿವರಾಜ್ ಮೇಸ್ತ ಅಣ್ಣಪ್ಪ ನಾಯ್ಕ ಮುಂತಾದವರು ಪಾಲ್ಗೊಂಡಿದ್ದರು.

RELATED ARTICLES  ಕುಮಟಾ ಜನತೆಗಾಗಿ ವೈವಿದ್ಯಮಯ ಬಟ್ಟೆ ಮಳಿಗೆ: ಶುಭಾರಂಭಗೊಂಡಿದೆ BLACKBIRD ಶೋರೂಂ

vv

ನಮ್ಮ ಕರವೇ ತಾಲೂಕಾ ಘಟಕದ ವತಿಯಿಂದ ರಾಜ್ಯೋತ್ಸವದ ಅಂಗವಾಗಿ ಹೊನ್ನಾವರ ತಾಲೂಕಾ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಉದಯ್ ನಾಯ್ಕ, ತಾಲೂಕಾ ಅಧ್ಯಕ್ಷರಾದ ಗಣಪತಿ ಮೇಸ್ತ, ಯುವಘಟಕದ ಅಧ್ಯಕ್ಷ ವಿಘ್ನೇಶ್ ಹೆಗ್ಡೆ, ಆರ್.ಕೆ.ಮೇಸ್ತ, ವಿನಾಯಕ್ ಕುಮಟಕರ್ ನಶ್ರುಲ್ಲ ಸಿದ್ದಿಕ್ ಮುಂತಾದವರು ಪಾಲ್ಗೊಂಡಿದ್ದರು.

zz

ಜಯಕರ್ನಾಟಕ ಹೊನ್ನಾವರ ಘಟಕದಿಂದ ತಾಯಿ ಭುವನೇಶ್ವರಿ ದೇವಿಯ ಸ್ಥಬ್ಧ ಚಿತ್ರ ಸಹಿತ ಹೊನ್ನಾವರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೈಕ್ ಮೂಲಕ ಮೆರವಣಿಗೆ ಮಾಡಿದರು.
xxaa