ಕುಮಟಾ ; ಕನ್ನಡ ರಾಜ್ಯೋತ್ಸವ ಹಾಗೂ ತುಳಸಿ ಹುಣ್ಣಿಮೆಯ ಶುಭಸಂದರ್ಭದಂದು ಕುಮಟಾದ ಅಘನಾಶಿನಿ, ಕಾಗಾಲ, ಮೊಸಳೆಸಾಲ ಭಾಗದ 24 ಅರ್ಹ ಫಲಾನುಭವಿಗಳಿಗೆ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ ಉಚಿತ ಗ್ಯಾಸ್ ಕಿಟ್ ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷರೂ ಆದ ನಾಗರಾಜ ನಾಯಕ ತೊರ್ಕೆಯವರು ಮಾತನಾಡಿ ಕೇಂದ್ರದ ಉಜ್ವಲ ಯೋಜನೆಯು ಮಹಿಳೆಯರ ಸ್ವಾಸ್ಥ್ಯ ಹಾಗೂ ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಜಾರಿಯಾದ ಜನಪರ ಯೋಜನೆಯಾಗಿದ್ದು ಇದುವರೆಗೂ ಗ್ಯಾಸ್ ಸಂಪರ್ಕ ಹೊಂದಿರದ ಬಡ ಕುಟುಂಬಗಳಿಗೆ ಉಚಿತ ಗ್ಯಾಸ್ ಕಿಟ್ ಗಳನ್ನು ವಿತರಿಸಿ ಹೊಗೆಮುಕ್ತ ಮನೆಗಳನ್ನು ನಿರ್ಮಿಸುವ ಗುರಿ ಹೊಂದಿದೆ. ಈ ಯೋಜನೆಯ ಅನುಕೂಲತೆಯನ್ನು ಫಲಾನುಭವಿಗಳು ತಮ್ಮ ಹಣ, ಸಮಯ ವ್ಯಯಿಸದೇ ಸುಲಭವಾಗಿ ಪಡೆದುಕೊಳ್ಳಬೇಕೆಂಬ ನಿಟ್ಟಿನಲ್ಲಿ ನಾವೆಲ್ಲ ಕಾರ್ಯಪ್ರವೃತ್ತರಾಗಿದ್ದೇವೆ. ಪ್ರಧಾನಮಂತ್ರಿ ಮೋದಿ ನೇತ್ರತ್ವದ ಕೇಂದ್ರ ಸರಕಾರ ಹತ್ತು ಹಲವಾರು ಜನಪ್ರಿಯ ಹಾಗೂ ಮಹತ್ವಾಕಾಂಕ್ಷಿ ಯೋಜನೆಗಳನ್ನು ಜಾರಿಗೆ ತಂದಿದೆ. ಇದೀಗ ದೀನದಯಾಳ್ ಉಪಾಧ್ಯಾಯ ವಿದ್ಯುದೀಕರಣ ಯೋಜನೆಯಡಿ ಇದುವರೆಗೂ ವಿದ್ಯುತ್ ಸಂಪರ್ಕ ಹೊಂದಿರದ ಮನೆಗಳಿಗೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸುವ ನೂತನ ಯೋಜನೆಯನ್ನು ಘೋಷಿಸಿ ಕತ್ತಲುಮುಕ್ತ ಮನೆಗಳ ನಿರ್ಮಾಣದ ಗುರಿಯನ್ನು ಹೊಂದಿದೆ ಎಂದು ಉಜ್ವಲ ಯೋಜನೆ ಹಾಗೂ ವಿದ್ಯುದೀಕರಣ ಯೋಜನೆಯ ಕುರಿತಾಗಿ ಮಾಹಿತಿ ನೀಡಿದರು.
ಇನ್ನೋರ್ವ ಬಿಜೆಪಿ ಪ್ರಮುಖರಾದ ದಿನಕರ ಶೆಟ್ಟಿಯವರು ಮಾತನಾಡಿ ಉಜ್ವಲ ಯೊಜನೆಯ ಅನುಕೂಲತೆಯನ್ನು ಅರ್ಹರು ಪಡೆದುಕೊಳ್ಳಬೇಕೆಂಬ ದಿಶೆಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರಾಮಾಣಿಕವಾಗಿ ನಿಃಸ್ವಾರ್ಥತೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ. ಈ ಯೋಜನೆಯಡಿ ಉಚಿತವಾಗಿ ಗ್ಯಾಸ್ ಕಿಟ್ ಗಳನ್ನು ಒದಗಿಸುತ್ತಿರುವುದಲ್ಲದೇ ಜೊತೆಗೆ ತಮ್ಮ ಟ್ರಸ್ಟ್‍ನ ವತಿಯಿಂದ ಎಲ್ಲಾ ಫಲಾನುಭವಿಗಳಿಗೆ ಉಚಿತವಾಗಿ ಲೈಟರಗಳನ್ನು ಸಹ ನೀಡುತ್ತಿರುವ ನಾಗರಾಜ ನಾಯಕ ತೊರ್ಕೆಯವರ ಕಾರ್ಯವನ್ನು ಶ್ಲಾಘಿಸಿದರು.
ಅಘನಾಶಿನಿಯ ಯಶೋದಾ ಮಡಿವಾಳ, ಮಂಜುಳಾ ಹರಿಕಾಂತ, ಬೀರಮ್ಮ ಗೌಡ, ರಾಧಾ ಅಂಬಿಗ, ನಾಗಮ್ಮ ಗೌಡ, ನೀಲಾ ಮಡಿವಾಳ, ಅಮ್ಮು ಗೌಡ, ಗೀತಾ ಅಂಬಿಗ, ದುರ್ಗಿ ಹರಿಕಾಂತ, ಸರೋಜಾ ಅಂಬಿಗ, ಶಾಂತಿ ಅಂಬಿಗ, ಶಾಂತಿ ಎಮ್. ಅಂಬಿಗ, ಮೊಸಳೆಸಾಲದ ರಾಧಾ ಪಟಗಾರ, ಕಮಲಾ ಪಟಗಾರ, ಅನಸೂಯಾ ಪಟಗಾರ, ಸವಿತಾ ಪಟಗಾರ, ಮಂಗಲಾ ಪಟಗಾರ, ರಾಮಿ ಪಟಗಾರ, ದೇವಿ ಪಟಗಾರ, ಹೇಮಾವತಿ ಹರಿಕಾಂತ, ಕಾಗಾಲಿನ ಬಲಿಯಮ್ಮ ಗೌಡ, ಗೀತಾ ಗೌಡ, ಕಲ್ಪನಾ ಹರಿಕಾಂತ, ರೇಖಾ ಜಿ. ಹರಿಕಾಂತ ಇವರುಗಳು ಈ ಯೋಜನೆಯ ಅನುಕೂಲತೆಯನ್ನು ಪಡೆದುಕೊಂಡು ಸಂತಸಪಟ್ಟರು.
ಈ ಸಂದರ್ಭದಲ್ಲಿ ಶಕ್ತಿಕೇಂದ್ರದ ಅಧ್ಯಕ್ಷರಾದ ಬಿ.ಡಿ.ಪಟಗಾರ, ಕೇಶವ ಪಟಗಾರ, ನಾಗವೇಣಿ ಹೆಗಡೆ, ಸದಾನಂದ ಡಿ. ನಾಯಕ ಹೊಸ್ಕಟ್ಟಾ, ವೆಂಕಟ್ರಮಣ ಕವರಿ, ಸುನೀತಾ ಗೌಡ, ಎಲ್. ಆರ್. ಭಂಡಾರಿ, ಸೀತಾ ಆಗೇರ, ರವಿ ಪಂಡಿತ, ಲಕ್ಷ್ಮಣ ಹರಿಕಾಂತ, ಗುರು ಜೆ. ಗೌಡ ಮುಂತಾದವರು ಉಪಸ್ಥಿರಿದ್ದರು.