ಕಾರವಾರ: ಕರುನಾಡ ರಕ್ಷಣಾ ವೇದಿಕೆಯಿಂದ ಕರ್ನಾಟಕದ ಗಡಿ ಪ್ರದೇಶವಾದ ಸದಾಶಿವಗಡದ ಆಜಾದ ಅಟೋ ನಿಲ್ದಾಣದಲ್ಲಿ ಕಾರವಾರ ಅಂಕೋಲಾ ಕ್ಷೇತ್ರದ ಶಾಸಕರಾದ ಸತೀಶ ಕೆ.ಸೈಲ್ ಧ್ವಜಾರೋಹಣ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಕರುನಾಡ ರಕ್ಷಣಾ ವೇದಿಕೆ ಗಡಿ ಪ್ರದೇಶದಲ್ಲಿ ಕನ್ನಡ ರಾಜಹೋತ್ಸವ ಆಚರಿಸುವುದು ತುಂಬಾ ಒಳ್ಳೆಯ ಕಾರ್ಯವೆಂದು, ಗಡಿ ಪ್ರದೇಶದಲ್ಲಿ ಅಬಿವೃದ್ಧಿ ಕೆಲಸಕ್ಕೆ ಹೆಚ್ಚು ಅನುದಾನ ನೀಡಲಾಗುವುದು ಎಂದು ನುಡಿದರು.
ನಂತರ ಗ್ರಾಮ ಪಂಚಾಯತ ಸದಸ್ಯರಾದ ಸುರಜ ದೇಸಾಯಿ ಮಾತನಾಡಿ ಕನ್ನಡದ ನುಡಿ,ನೆಲ,ಜಲ, ರಕ್ಷಿಸುವ ಭಾರ ಪ್ರತಿಯೋಬ್ಬ ಕನ್ನಡಿಗರ ಆದ್ಯ ಕರ್ತವ್ಯವೆಂದು ನುಡಿದರು ಗಡಿ ಪ್ರದೇಶದಲ್ಲಿ ಪ್ರಗತಿ ಪರ ಕೆಲಸಗಳು ಆಗುತ್ತಿದ್ದು ಶಾಸಕರು ಹೆಚ್ಚು ಅನುದಾನ ಗಡಿ ಪ್ರದೇಶಕ್ಕೆ ನೀಡಿದ್‌ದು ಷ್ಲಾಘನಿಯ ವೆಂದರು ಕನ್ನಡವನ್ನು ನಾವೆಲ್ಲರೂ ಪ್ರೀತಿಸಿ ಬೆಳಸೂಣವೆಂದು ಶಾಲಾ ಮುಖ್ಯೋದ್ಯಾಪಕಿಯಾದ ಬೇಬಿ ಆಸಿಯಾ ಖಾನ ನುಡಿದರು
ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರು ಹಾಗೂ ಸಂಸ್ಥಾಪಕರು ಆದ ಎನ್,ದತ್ತಾ ಮಾತನಾಡಿ ನಮ್ಮ ರಕ್ಷಣಾ ವೇದಿಕೆಯು ಸುಮಾರು ವರ್ಷಗಳಿಂದ ಗಡಿ ಪ್ರದೇಶದಲ್ಲಿ ಕರ್ನಾಟಕ ರಾಜೋತ್ಸವ ಆಚರಣೆಯೊಂದಿಗೆ ಕನ್ನಡಿಗರ ಸಮಸ್ಯೆಗಳನ್ನು ನಿವಾರಿಸುವಲ್ಲಿ ಕಾರ್ಯ ನಿರ್ವಹಿಸುತ್ತಾ ಇದೆ ನಾವೆಲ್ಲರೂ ಒಗ್ಗೂಡಿ ಕನ್ನಡದ ನುಡಿ,ನೆಲ,ಜಲ, ನುಡಿ ರಕ್ಷಣೆಗಾಗಿ ಸದಾಸಿದ್ದರಿರೋಣವೆಂದು ನುಡಿದರು.
ಈ ರಾಜೋತ್ಸವದ ಕಾರ್ಯಕ್ರಮದಲ್ಲಿ ಕರುನಾಡ ರಕ್ಷಣಾ ವೇದಿಕೆಯ ಕಾರ್ಯದರ್ಶಿಗಳಾದ ತಾಲೂಕಾದ್ಯಕ್ಷರಾದ ಆನಂದು ಮಡಿವಾಳ, ಛತ್ರಪತಿ ಮಾಳ್ಸೇಸಕರ, ಮಂಗೇಶ ಜ. ನಾಯ್ಕ ನಾಗೇಂದ್ರ ಯು. ಅಂಚೆಕರ, ದೀಪಕ ಕುಡಾಳಕರ, ಗುರುದಾಸ ನಾಯ್ಕ ಮದನ ಗುನಗಿ, ಸುನೀಲ್ ನಾಯ್ಕ, ಸುಜೀತ್ ಮಾಳ್ಸೇಸಕರ್, ಅಜಾದ ಅಟೋನಿಲ್ದಾಣ ಅಧ್ಯಕ್ಷರಾದ ಪುರಂದರ ತಾಂಡೇಲ್, ಗೌಸ್ ಹಸನ್ ಖಾನ್, ಹಾಗೂ ಪದಾದಿಕಾರಿಗಳು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ, ಶಿಕ್ಷಕಿಯರು ವಿದ್ಯಾರ್ಥಿಗಳು, ಕರ್ನಾಟಕ ಅಸಂಘಟಿತ ಕಟ್ಟಡ ಕೂಲಿಕಾರ್ಮಿಕ ಸಂಘಧ ಸರ್ವ ಸದಸ್ಯರು, ಹಾಗೂ ಕರುನಾಡ ರಕ್ಷಣಾ ವೇದಿಕೆಯ ಸರ್ವ ಸದಸ್ಯರು ಪದಾದಿಕಾರಿಗಳು ಉಪಸ್ಥಿತರಿದ್ದರು.