ಹೊನ್ನಾವರ :ಇಲ್ಲೊಂದು ಗ್ರಾಮವಿದೆ. ಈ ಗ್ರಾಮ ಸೌಲಭ್ಯಗಳಿಂದ ವಂಚಿತವಾಗಿ ಅನಾಥವಾದ ಸ್ಥಿತಿಯಲ್ಲಿ ತನ್ನ ಗೋಳು ಕೇಳೋರ್ಯಾರಪ್ಪ ಅಂತ ಪೆಚ್ಚು ಮೋರೆಹಾಕಿ ಮುಂಬರುವ ಚುನಾವಣೆಯ ದಿನವನ್ನು ನೋಡುತ್ತಾ ಕುಳಿತಿದೆ.ಹೌದು ಚುನಾವಣೆ ಬಂತು ಎಂದರೆ ಹೊಸ ಹೊಸ ಆಶ್ವಾಸನೆಗಳ ಅಂಲಕಾರದ ಕನಸು ಕಟ್ಟುವ ಕೆಲಸ ಜನಪ್ರತಿನಿಧಿಗಳಿಂದ ಆಗುತ್ತೆ. ಚುನಾವಣೆ ಮುಗಿಯುತಿದ್ದಂತೆ ಮತ್ತೆ ಅದೇ ಹಳೆ ಸೀರೆ ಎನ್ನುವ ಮಾತಿನಂತೆ ಇದ್ದು ಬಿಡುತ್ತಂತೆ ಈ ಗ್ರಾಮ…

ಹೌದು ಹೊನ್ನಾವರ ತಾಲೂಕಿನ ಕರ್ಕಿ ಗ್ರಾಮ ಪಂಚಾಯತ ವ್ಯಾಪ್ತಿಯ ಕೊಂಕಣಿ ಖಾರ್ವಿ ಸಮಾಜದವರು ವಾಸಿಸುತ್ತಿರುವ ಪಾವಿನಕುರ್ವಾ ಎನ್ನುವ ಊರು. ಇಲ್ಲಿ ಯಾವುದೇ ವ್ಯವಸ್ಥೆಗಳು ಸರಿಯಾಗಿಲ್ಲ ಅಂದರೆ ರಾತ್ರಿಯ ಸಮಯದಲ್ಲಿ ಮಹಿಳೆಯರು, ಪುರುಷರು, ಮಕ್ಕಳು ನಡೆದಾಡುವ ಜಾಗದಲ್ಲಿ ಯಾವುದೇ ದಾರಿದೀಪ ಇಲ್ಲ, ಸರಿಯಾದ ರಸ್ತೆ ಇಲ್ಲ, ಈ ಭಾಗದ ಜನರು ರಾತ್ರಿ ಸಮಯದಲ್ಲಿ ಸಂಚರಿಸಬೇಕು ಎಂದರೆ ತುಂಬಾ ಕಷ್ಟ ಅನುಭವಿಸಬೇಕು ಹಾಗೂ ಮಹಿಳೆಯರು ಮೀನು ಮಾರಾಟ ಮಾಡಿ ಬರುವಾಗ ರಸ್ತೆ ಸರಿ ಇಲ್ಲದ ಕಾರಣ ಬಿದ್ದು ಕೈಕಾಲುಗಳಿಗೆ ಗಾಯ ಮಾಡಿಕೊಂಡಿರುವ ಪ್ರಸಂಗವು ನಡೆದಿದೆಯಂತೆ. ಹಾಗೆ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿನಿಯರು ಮಧ್ಯಾಹ್ನದ ಸಮಯದಲ್ಲಿ ನಡೆದಾಡಲು ತುಂಬಾ ಭಯಭೀತರಾಗುತ್ತಾರೆ. ಕಾರಣ ತುಂಬಾ ಪೊದೆಗಳು ರಸ್ತೆಯನ್ನು ಆವರಿಸಿಕೊಂಡಿದ್ದು. ಹೀಗೆ ಇನ್ನು ಹಲವು ಕಾರಣಗಳು ತುಂಬಾ ವರ್ಷದಿಂದ ಇಲ್ಲಿಯ ಜನ ಅನುಭವಿಸಿಕೊಂಡು ಬಂದಿದ್ದಾರೆ. ಸುಸಜ್ಜಿತವಾದ ರಸ್ತೆಯ ಅನುಕೂಲ, ದಾರಿದೀಪ ಮಾಡಿಕೊಡಬೇಕಾಗಿ ಜನಪ್ರತಿನಿಧಿಗಳಿಗೆ ಮತ್ತು ಇಲಾಖೆಗೆ ನಾವು ಕೇಳಿಕೊಂಡರು ಇದುವರೆಗೂ ಯಾವುದೇ ಅಧಿಕಾರಿಗಳು ಗಮನ ತೆಗೆದುಕೊಳ್ಳದೆ ಜಾಣ ಕೂರಡರಂತೆ ವರ್ತಿಸುತ್ತಿದ್ದಾರೆ..

RELATED ARTICLES  ಗೋಕರ್ಣದಲ್ಲಿ 'ವಿಜಯೋತ್ಸವ' ಸಂಪನ್ನ: ದೇವರಿಗೆ ವಿಶೇಷ ಪೂಜೆ

3 ಗ್ರಾ. ಪಂ. ಸದಸ್ಯರಿದ್ದರೂ ಅನುದಾನ ವಂಚಿತವಾಗಿ ಪಾವಿನಕುರ್ವ ಮಜರೆಗೆ ರಸ್ತೆ ಸಮಸ್ಯೆ ಇನ್ನಿಲ್ಲದಂತೆ ಕಾಡುತ್ತಿದೆ. ಇಲ್ಲಿ ಕ್ಷೇತ್ರದ ಶಾಸಕರ ಮತ್ತು ಸ್ಥಳೀಯ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯ ಎದ್ದು ಕಾಣುತ್ತದೆ ಎಂದು ಸಾರ್ವಜನಿಕರು ದೂರಿದ್ದಾರೆ . ಈ ಮನವಿಗೆ ಸ್ಪಂದಿಸದೆ ಇದ್ದಲ್ಲಿ ಮುಂದಿನದಿನಗಳಲ್ಲಿ ಉಗ್ರಹೋರಾಟದ ಎಚ್ಚರಿಕೆ ನೀಡಿದರು

ಮನವಿ ಸ್ವೀಕರಿಸಿ ಮಾತನಾಡಿದ ಕರ್ಕಿ ಗ್ರಾಮ ಪಂಚಾಯತ ಪಿ ಡಿ ಓ ಗ್ರಾಮಸ್ಥರ ವಿವಿದ ಮನವಿಯನ್ನು ಸ್ವಿರಿಸಿದೆವೆ ಗ್ರಾಮ ಪಂಚಾಯತನಿಂದಾಗುವ ವಿದ್ಯುತ ತಂತಿ ಅಳವಡಿಕೆ ಹಾಗೂ ಬೀದಿ ದೀಪಗಳಿಗೆ 1.40 ಸಾವಿರ ಅನುದಾನ ಇಟ್ಟಿದೆವೆ 2 ತಿಂಗಳ ಒಳಗೆ ಕೇಲಸ ಮಾಡಿಕೋಡಿಕೋಡುತೆವೆ ಕರ್ಕಿ ತೂಗು ಸೇತುವೆಯಿಂದ ಪಾವಿನಕುರ್ವಾಕ್ಕೆ ಹೋಗುವ ರಸ್ತೆ ಪಕ್ಕದಲ್ಲಿ ಬೇಳೆದಿರುವ ಗಿಡ ಗಂಟೆಗಳನ್ನು ಕಡಿಯಬೇಕು ಅಂತ ಹೇಳಿದ್ದಾರೆ ಅವರ ಎದುರೇ ಕೇಲಸಗಾರರನ್ನು ಕರೆದು ತಿಳಿಸಿದ್ದೆನೆ ಹಾಗೆ ರಸ್ತೆ ಕಾಮಗಾರಿಗೆ ಪಂಚಾಯತನಿಂದ ಅನುದಾನ ಕಡಿಮೆ ಇರುತದೆ ಹೆಚ್ಚಿನ ಅನುದಾನವನ್ನು ಮಾನ್ಯ ಶಾಸಕರು ಅಥವಾ ಎಮ್ ಪಿ ಯವರ ಗಮನಕ್ಕೆ ತಂದು ಅವರಿಗೆ ಇ ವಿಷಯವನ್ನು ತಿಳಿಸುತೆನೆ, ಪಂಚಾಯತನ ವತಿಯಿಂದ ಮೂಲಬೂತ ಸೌಕರ್ಯವನ್ನು ನೀಡುತ್ತೇನೆ ಎಂದರು..

RELATED ARTICLES  ಮಳೆ ಹೆಚ್ಚಳ ಜಿಲ್ಲೆಯ ಹಲವು ತಾಲೂಕಿನ ಶಾಲೆಗಳಿಗೆ ನಾಳೆ ರಜೆ.

ಒಟ್ಟಾರೆ ಮೂಲೆಗುಂಪಾಗಿರುವ ಈ ಗ್ರಾಮದ ಕನಸನ್ನು ನನಸಾಗುವ ಕಾರ್ಯಕ್ಕೆ ಸಂಬಂದಪಟ್ಟವರು ಮುಂದಾಗುತ್ತಾರೋ ಅಥವಾ ಮತದಾರ ಪ್ರಭುಗಳನ್ನು ಆಟಕುಂಟು ಲೆಕ್ಕಕಿಲ್ಲ ಎಂದು ತಮ್ಮದೇ ಆದ ಹಳೆ ಚಾಳಿಯನ್ನು ಮುಂದುವರಿಸುತ್ತಾರಾ ಎಂದು ಕಾದುನೋಡಬೇಕಿದೆ.