ದಿನವೊಂದು ಆರಂಭವಾಗುವುದು ಪ್ರಾರ್ಥನೆ ಹಾಗೂ ತಿಂಡಿ ತಿನ್ನುವ ಮೂಲಕ. ಪ್ರಾರ್ಥನೆ ಎಷ್ಟು ಮುಖ್ಯವೋ, ಬೆಳಗ್ಗಿನ ಉಪಾಹಾರ ಕೂಡಾ ಅಷ್ಟೇ ಮುಖ್ಯ ಎನ್ನುತ್ತಾರೆ ವೈದ್ಯರು ಹಾಗೂ ನಮ್ಮ ಹಿರಿಯರು. ಆದರೆ ಇದರ ಮಹತ್ವ ಬಲ್ಲವರಿಗೆ ಮಾತ್ರ ಗೊತ್ತು. ಯಾಕೆಂದರೆ ಇವಕ್ಕೆ ಅದರದ್ದೇ ಆದ ಮಹತ್ವವಿದೆ.

ದಿನದ ಆರಂಭದಲ್ಲಿ ನಿಮ್ಮ ದೇಹಕ್ಕೆ ಹೆಚ್ಚಿನ ಕ್ಯಾಲೋರಿಗಳನ್ನು ನೀಡಲು ಉಪಾಹಾರ ತಿನ್ನಬೇಕಾಗುತ್ತದೆ. ಮತ್ತು ಉಪಹಾರ ಸೇವನೆ ದಿಢೀರ್ ಘಟಿಸುವ ಹೃದಯ ಸಮಸ್ಯೆಗಳನ್ನು ತಡೆಯುತ್ತದೆ. ಕೆಲವರು ತೂಕ ಇಳಿಸಲು ಬೆಳಗ್ಗಿನ ಉಪಹಾರವನ್ನು ತಿರಸ್ಕರಿಸುತ್ತಾರೆ. ಆದರೆ ವೈದ್ಯರ ಪ್ರಕಾರ ಇದು ಸರಿಯಲ್ಲ. ‘ಉಪಹಾರ’ ವು ದಿನದ ಪ್ರಮುಖ ಊಟ ಎಂಬುದು ಹಿರಿಯರ ಮಾತು.

RELATED ARTICLES  ಕೆಮ್ಮು ಮತ್ತು ನೆಗಡಿ ನಿವಾರಣೆಗೆ ಇಲ್ಲಿದೇ..... ಮನೆ ಮದ್ದು!

ದಿನದ ಆರಂಭದಲ್ಲಿ ನಮ್ಮ ಕ್ಯಾಲೊರಿಗಳನ್ನು ಹೆಚ್ಚಿಸಲು ಉಪಾಹಾರ ಮಾಡಬೇಕು. ಹೀಗೆ ಮಾಡುವುದರಿಂದ ಚಯಾಪಚಯ ಕ್ರಿಯೆ ಹೆಚ್ಚುತ್ತದೆ. ಜೊತೆಗೆ ಸ್ಥೂಲಕಾಯತೆಯನ್ನು ತಡೆಯುತ್ತದೆ. ಮತ್ತು ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಗಳನ್ನು ಕಡಿಮೆ ಮಾಡುವುದರ ಮೂಲಕ ಹೃದಯ ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ಈ ವಿಷಯ ಎಷ್ಟು ಮಂದಿಗೆ ಗೊತ್ತಿಲ್ಲ, ಹೇಳಿ..? ಬೆಳಗ್ಗೆ ಕೆಲಸಕ್ಕೆ ಹೋಗುವ ಮುಂಚೆ ಉಪಾಹಾರ ಸೇವನೆ ಒಳ್ಳೆಯದು.ಬೆಳಗ್ಗಿನ ಉಪಹಾರ ತ್ಯಜಿಸುವುದಕ್ಕೂ , ಉಪವಾಸ ಮಾಡುವುದಕ್ಕೂ ತುಂಬಾ ವ್ಯತ್ಯಾಸವಿದೆ.

RELATED ARTICLES  ಮಲಗುವ ವಿಧಾನವೇ ನೋವನ್ನು ನಿವಾರಿಸುತ್ತದೆ! ಇಲ್ಲಿದೆ ಅದ್ಭುತ ಮಾಹಿತಿ.

ಪ್ರತಿದಿನದ ಉಪಾಹಾರ ತಿನ್ನುವವರಲ್ಲಿ ಹೆಚ್ಚಿನ ಕೊಲೆಸ್ಟರಾಲ್ ಮತ್ತು ರಕ್ತದೊತ್ತಡ ಕಡಿಮೆಯಾಗಬಹುದು. ಮತ್ತು ಬೆಳಗ್ಗಿನ ಭೋಜನವನ್ನು ಬಿಟ್ಟುಬಿಡುವ ಜನರಲ್ಲಿ ಬೊಜ್ಜು ಅಥವಾ ಮಧುಮೇಹ ಬರುವ ಸಾಧ್ಯತೆ ಇದೆ ಎನ್ನುತ್ತಾರೆ ವೈದ್ಯರು. ಇನ್ನು ತಿನ್ನುವಾಗ ಭಾವನಾತ್ಮಕ ವಿಷಯ ಕೂಡಾ ಪ್ರಾಮುಖ್ಯತೆ ಪಡೆಯುತ್ತದೆ. ಮನಸ್ಸು ನೆಮ್ಮದಿಯಾಗಿದ್ದರೇ ಶಾಂತವಾಗಿ ಆಹಾರ ತಿನ್ನಬಹುದು. ಮನಸ್ಸು ಕೆಟ್ಟರೆ ಆರೋಗ್ಯ ಹಾಳಾಗುತ್ತದೆ ಅನ್ನುವುದು ಇದಕ್ಕೆ..