ಬಡಗುತಿಟ್ಟಿನ ಖ್ಯಾತ ಯಕ್ಷಗಾನ ಕಲಾವಿದರಲ್ಲೊಬ್ಬರಾದ ಬಳ್ಕೂರು ಕೃಷ್ಣ ಯಾಜಿಯವರಿಗೆ ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ವಿತರಿಸಿದರು. ತನ್ನದೇ ವಿಶಿಷ್ಠ ಶೈಲಿಯ ಅಭಿನಯದ ಮೂಲಕ ಎಂತಹುದೆ ಪಾತ್ರಕ್ಕೂ, ಜೀವ ತುಂಬುತ್ತಾ ಕಳೆದ 40ಕ್ಕೂ ಹೆಚ್ಚು ವರ್ಷಗಳಿಂದ ಯಕ್ಷರಸಿಕರ ಮನದಲ್ಲಿ ಅಚ್ಚೊತ್ತಿದ್ದಾರೆ ಶ್ರೀ ಬಳ್ಕೂರು ಕೃಷ್ಣ ಯಾಜಿ.

1956ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ವಾಲಗಳ್ಳಿಯಲ್ಲಿ ಜನಿಸಿದ ಯಾಜಿಯವರು 40 ವರ್ಷಗಳ ಕಾಲ ಅಮೃತೇಶ್ವರಿ, ಇಡಗುಂಜಿ, ಸಾಲಿಗ್ರಾಮ ಮೇಳಗಳಲ್ಲಿ ಪ್ರಧಾನ ಕಲಾವಿದರಾಗಿ ಸೇವೆ ಸಲ್ಲಿಸಿ, ಈಗ ಅತಿಥಿ ಕಲಾವಿದರಾಗಿ ಗೆಜ್ಜೆ ಕಟ್ಟುತ್ತಿದ್ದಾರೆ. ತಮ್ಮ ಪ್ರಬುದ್ಧ ಸಾಂಪ್ರದಾಯಿಕ ನಟನೆ – ನಾಟ್ಯದಿಂದ, ಹಾಗೂ ವಿದ್ವತ್ ಪೂರ್ಣ ಅರ್ಥಗಾರಿಕೆಯಿಂದ ಯಕ್ಷ ಪ್ರಿಯರ ಮನದಲ್ಲಿ ಮನೆಮಾಡಿದ್ದಾರೆ. 40 ವರ್ಷಗಳಿಂಸ ಕಲಾ ಸೇವೆಯಲ್ಲಿ ತೊಡಗಿಕೊಂಡಿರುವ ಇವರು ಯಕ್ಷರಂಗದ ಬಹುತೇಕ ಸುಮಾರು ಎಲ್ಲ ತಲೆಮಾರಿನ ಕಲಾವಿದರೊಟ್ಟಿಗೆ ಕಲಾ ಸೇವೆ ಮಾಡಿದ ಕೀರ್ತಿ ಯಾಜಿಯವರಿಗೆ ಸಲ್ಲುತ್ತದೆ.

RELATED ARTICLES  ಬದುಕಿಗೆ ಬಣ್ಣ ತುಂಬಿದವರು ಸಂಚಿಕೆ -102

ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರತಿ ವರ್ಷದ ನವೆಂಬರ್ ಒಂದರಂದು ಬೆಂಗಳೂರಿನಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳು ಪ್ರದಾನಮಾಡುತ್ತಾರೆ. ಪ್ರಶಸ್ತಿ ಒಂದು ಲಕ್ಷ ರೂಪಾಯಿಯ ಗೌರವಧನ, ಶಾಲು, ಪ್ರಶಸ್ತಿಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತದೆ. ಇದಲ್ಲದೆ ಅರ್ಹ ಪುರಸ್ಕೃತರಿಗೆ ಸರಕಾರದ ವತಿಯಿಂದ ನಿವೇಶನಗಳನ್ನು ನೀಡುವ ಕ್ರಮವೂ ಜಾರಿಯಲ್ಲಿದೆ.

RELATED ARTICLES  ಫೇ. 4 ಕ್ಕೆ "ಅಘನಾಶಿನಿಗೆ ಆರತಿ" ಕಾರ್ಯಕ್ರಮ