ನಮ್ಮಲ್ಲಿ ದೇವರ ದೀಪಕ್ಕೆ ಯಾವ ಯಾವದೋ ಸಿಕ್ಕಿದ ಎಣ್ಣೆ ತುಪ್ಪಗಳನ್ನು ಬಳಸುತ್ತಾರೆ.
ಕೆಲವರು ಎಳ್ಳೇಣ್ಣೆ ಒಳ್ಳೆಯದು ಎಂದು , ಕೆಲವರು ಪಾಮ್ ಆಯಿಲ್ ಕೂಡ ಹಚ್ಚುತ್ತಾರೆ.
ದೇವರ ದೀಪವನ್ನು ಹಸುವಿನ ತುಪ್ಪದಿಂದ ಹಚ್ಚುವಂತೆ ಮತ್ತಾವುದರಿಂದ ಹಚ್ಚಬಹುದು?
ಕರ್ಪೂರಂ ಗೋಘೃತಮ್ ತೈಲಂ ಕೋಸುಂಭಂ ನಾರಿಕೇರಜಮ್!
ಆಜ್ಯಂ ಘೃತಂ ವಾ ಸಂಪಾದ್ಯ ಪುಮಾನೇವಂ ಸ್ವಶಕ್ತಿತಃ!!
ಗೋಘೃತೇನ ತು ಸರ್ವೇಷ್ಟಫಲಸಿದ್ಧ
ಿಂ ಲಭೇನ್ನರಃ
ಅಮಂಗಲ್ಯಹರಂ ತೈಲಂ ಕೌಸುಂಭಮ್ ಕೀರ್ತಿವರ್ಧನಮ್
ನಾರಿಕೇರಂ ಸೌಖ್ಯದಮ್ ಚ ಹ್ಯಾಜ್ಯಂ ಭೋಗೈಕ ಸಾಧನಮ್!
ಏರಂಡಂ ಮಾಹಿಷಘೃತಂ ಸರ್ವಥಾ ವರ್ಜಯೇದ್ಬುಧಃ!!
ಮೇಲಿನ ಪ್ರಮಾಣದ ಪ್ರಕಾರ
ಹಸುವಿನ ತುಪ್ಪದಿಂದ ದೀಪ ಹಚ್ಚಿದರೆ ಸಮಸ್ತ ಇಷ್ಟ ಪ್ರಾಪ್ತಿಯಾಗುತ್ತದೆ,
ಎಳ್ಳೆಣ್ಣೆಯಿಂದ ದೀಪ ಹಚ್ಚಿದರೆ ಅಮಂಗಲ ಪರಿಹಾರವಾಗುತ್ತದೆ,
ಕುಸುಬೇ ಎಣ್ಣೆಯಿಂದ ದೀಪ ಹಚ್ಚಿದರೆ ಕೀರ್ತಿಯೂ ಹೆಚ್ಚುತ್ತದೆ,
ಕೊಬ್ಬರಿ ಎಣ್ಣೆಯಿಂದ ದೀಪ ಹಚ್ಚಿದರೆ ಸೌಖ್ಯವು ಹೆಚ್ಚುತ್ತದೆ.
ಆಡಿನ ತುಪ್ಪದಿಂದ ದೀಪ ಹಚ್ಚುವುದು ಭೋಗಕ್ಕೆ (ಸುಖಾನುಭವಕ್ಕೆ)
ಉತ್ತಮಸಾಧನವು.
ಅಂದರೆ ಆಡಿನ ತುಪ್ಪದಿಂದ ದೇವರ ದೀಪವನ್ನು ಹಚ್ಚಿದರೆ ಸುಖವು ಸಿಗುತ್ತದೆ
ಆದರೆ ಹರಳೆಣ್ಣೇ ಮತ್ತು ಎಮ್ಮೆಯ ತುಪ್ಪವನ್ನು ದೇವರ ದೀಪ ಹಚ್ಚಲು ಸರ್ವಥಾ ಉಪಯೋಗಿಸಬಾರದು .
ಆದ್ದರಿಂದ ಒಟ್ಟಾರೆ ಹಸುವಿನ ತುಪ್ಪ, ಎಳ್ಳೆಣ್ಣೆ, ಕೊಬ್ಬರಿ ಎಣ್ಣೆ,
ಆಡಿನ ತುಪ್ಪ ಇವುಗಳಿಂದ ದೇವರ ದೀಪವನ್ನು ಹಚ್ಚಬಹುದು.ಎಂದು ಪ್ರಮಾಣಿತವಾಯಿತು .
ದೇವರ ದೀಪ ಹಚ್ಚಲು ಹತ್ತಿ ಬತ್ತಿಯನ್ನು ಉಪಯೋಗಿಸುತ್ತೇವೆ. ಇದೇ ರೀತಿ ಇನ್ಯಾವ ಬತ್ತಿಗಳಿಂದ ದೇವರ ದೀಪವನ್ನು ಹಚ್ಚಬಹುದು?
ಪಾದ್ಮೇನ ಜ್ವಲಿತಾ ದೀಪ್ತಿಃ ಸಾರ್ವಭೌಮಪ್ರದಾಯಿನೀ
ಸರ್ವೇಷ್ಟದಾಯಿನೀ ನಿತ್ಯಂ ಸರ್ವಾಭಿಷ್ಟಾರ್ಥ ಸಿದ್ಧಿದಾ!!
ಕ್ಷಮೇಣ ಜ್ವಲಿತಾ ದೀಪ್ತಿಃ ಷಡೂರ್ಮಿಪರಿಹಾರಿಣೀ
ನಿತ್ಯಯೌವನದಾತ್ರಿ ಸ್ಯಾತ್ ಸರ್ವಾಭೀಷ್ಟಪ್ರದಾ
ಯಿನೀ
ದಶಾ ನಿರ್ಮಿತಯಾ ವರ್ತ್ಯಾ ಜ್ವಲಿತಾ ದೀಪಿಕಾ ಪರಾ!!
ಭವೇತ್ಪಾಪಕ್ಷಯಸ್ತಸ್ಯ ಜ್ಞಾನ ಸೌಭಾಗ್ಯ ಸಂಪದಃ!!
ಕಾರ್ಪಾಸವರ್ತಿದೀಪೇನ ಪುಣ್ಯಂ ಪಾಪಕ್ಶಯೋ ಭವೇತ್!
ಏತಾನ್ಸಂಭೂಯ ಯೋ ಮಹ್ಯಂ ದೀಪಂ ಯಚ್ಛತಿ ಮಾನವಃ
ಮದ್ಭಕ್ತಿಫಲಭಾಕ್ ನಿತ್ಯಂ ಸೋಶ್ವಮೇಧಫಲಂ ಲಭೇತ್!!
ಮೇಲಿನ ಪ್ರಮಾಣ ಓದಿ.
ತಾವರೆ ದಂಟಿನ ನಾರು ಕೇಳಿದ್ದೀರಲ್ಲವೇ. ಅದರಿಂದ ಬತ್ತಿಯನ್ನು ಮಾಡಿ
ಉರಿಸಿದರೆ ಸಾರ್ವಭೌಮತ್ವ ಪ್ರಾಪ್ತಿಯಾಗುತ್ತದೆ. ಸಕಲ ಇಷ್ಟಾರ್ಥಗಳನ್ನೂ
ಕೊಡುತ್ತದೆ.ಹಾಗೂ ಸಕಲಾಭೀಷ್ಟಸಿದ್ಧಿ
ಯಾಗುತ್ತದೆ
ಅಗಸೇ ನಾರಿನಿಂದ ಬತ್ತಿಯನ್ನು ಮಾಡಿ ಉರಿಸಿದರೆ ಹಸಿವೆ, ನೀರಡಿಕೆ,ಮುಪ್ಪು.
ಮೃತ್ಯು,ಶೋಕ ಹಾಗೂ ಮೋಹ ಎಂಬ ಆರು ಜೀವನದ ಧರ್ಮಗಳು
ಪರಿಹಾರವಾಗುತ್ತದೆ(೬ ಊರ್ಮಿಗಳು) ಮತ್ತು ನಿತ್ಯದಲ್ಲೂ ಯೌವನ
ಪ್ರಾಪ್ತಿಯಾಗುತ್ತದೆ. ಹಾಗೂ ಎಲ್ಲ ಅಭೀಷ್ಟಗಳನ್ನುಂಟು ಮಾಡುತ್ತದೆ.
ನಾರಿನಿಂದ ಬತ್ತಿಯನ್ನು ಮಾಡಿ ದೀಪವನ್ನು ಉರಿಸಿದರೆ ಪಾಪನಾಶವಾಗುವುದಲ್ಲದೆ ಜ್ಞಾನ ಸೌಭಾಗ್ಯ ಸಂಪತ್ತುಗಳನ್ನು ಕೊಡುತ್ತದೆ.
ಹತ್ತಿಯಿಂದ ಬತ್ತಿಯನ್ನು ಮಾಡಿ ದೀಪವನ್ನು ಉರಿಸಿದರೆ ಪಾಪನಾಶವಾಗಿ
ಪುಣ್ಯವುಂಟಾಗುತ್ತದೆ.
ಆದ್ದರಿಂದ ಒಟ್ಟಿನಲ್ಲಿ ಹತ್ತಿಯಿಂದ ಮಾಡಿದ ಬತ್ತಿಯಿಂದ ದೇವರ ದೀಪವನ್ನು
ಹಚ್ಚುವಂತೆ ತಾವರೆ ದಂಟಿನ ನಾರು, ಅಗಸೆ ನಾರು ಹಾಗು ನಾರು ಇವುಗಳಿಂದ
ಬತ್ತಿಯನ್ನು ಮಾಡಿ ದೇವರ ದೀಪವನ್ನು ಹಚ್ಚ ಬಹುದು.