ಕುಮಟಾ; ಕನ್ನಡ ರಾಜ್ಯೋತ್ಸವದ ಪ್ರಯುಕ್ತ, ಕನ್ನಡ ರಾಜ್ಯೋತ್ಸವ ಸಮೀತಿ ಕುಮಟಾ ಆಯೋಜಿಸಿರುವ ನುಡಿಹಬ್ಬ ಕಾರ್ಯಕ್ರಮ ಅದ್ಧೂರಿಯಾಗಿ ದೀಪ ಬೆಳಗುವುದರ ಮೂಲಕ ಉದ್ಘಾಟನೆಗೊಂಡಿತು. ಕಾರ್ಯಕ್ರಮದಲ್ಲಿ, ರಾಜ್ಯೋತ್ಸವ ಸಮೀತಿ ಸಂಸ್ಥಾಪಕರಾದ ಜನಪರ ಹೋರಾಟಗಾರ ಎಮ್ ಜಿ ಭಟ್, ಹಾಗೂ ಸೂರಜ್ ನಾಯ್ಕ ಸೋನಿ, ಸುಬ್ರಾಯ ವಾಳ್ಕೆ, ನಾಗರಾಜ ನಾಯಕ್ ತೊರ್ಕೆ, ಇನ್ನಿತರ ಗಣ್ಯರು ಉಪಸ್ಥಿತರಿದ್ದರು,ಕಾರ್ಯಕ್ರಮಕ್ಕೆ ವಿಶೇಷವಾಗಿ ಕುಮಟಾದ ಪ್ರತಿಭೆ, ಕಿರುತೆರೆ ನಟ ರಾಮ್ ಪವನ್ ಶೆಟ್ ಭಾಗವಹಿಸಿದ್ದರು.
ಪ್ರಾಸ್ಥಾವಿಕವಾಗಿ ಮಾತನಾಡಿದ ಶ್ರೀ ಎಂ.ಜಿ ಭಟ್ಟ ಕನ್ನಡ ರಾಜ್ಯೋತ್ಸವ ಸಮೀತಿ ಕುಮಟಾ ಯಾವರೀತಿಯಾಗಿ ಕಾರ್ಯ ನಿರ್ವಹಿಸಿದೆ ಎಂಬುದನ್ನು ವಿವರಿಸಿದರು. ನಂತರದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು ಹಾಗೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಬಡ ರೋಗಿಗೆ ನೆರವು ನೀಡಲಾಯಿತು. ಸುಬ್ರಾಯ ವಾಳ್ಕೆ ವಯಕ್ತಿಕವಾಗಿಯೂ ನೆರವು ನೀಡಿದರು. ಡಾ ಹಳಕಾರ ಸಹಾಯದ ಭರವಸೆ ನೀಡಿದರು.
ನಂತರ ಮನರಂಣಜನಾ ಕಾರ್ಯಕ್ರಮ ಹಾಗೂ ನೃತ್ಯ, ಯಕ್ಷಗಾನ, ಕಾರ್ಯಕ್ರಮ ನಡೆಯಿತು.