ಕುಮಟಾ : ತಾಲೂಕಾ ಭಗವದ್ಗೀತಾ ಅಭಿಯಾನ ಸಮಿತಿ ಕುಮಟಾ ಇವರ ಆಶ್ರಯದಲ್ಲಿ ಶ್ರೀ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ಭಗವದ್ಗೀತಾ ಅಭಿಯಾನದ ಪ್ರಾರಂಭೋತ್ಸವ ಕುಮಟಾದ ಕೊಂಕಣ ಎಜುಕೇಶನ್ ಟ್ರಸ್ಟಿನ ಆವಾರದಲ್ಲಿ ನಡೆಯಿತು. ಇದರಲ್ಲಿ ಭಾಗವಹಿಸಿದ ಶ್ರೀಯುತ ಸುಬ್ರಾಯ ವಾಳ್ಕೆ ಇಚ್ಛಾಶಕ್ತಿ ಹಾಗೂ ಪ್ರಯತ್ನ ಬದುಕಿಗೆ ಅಗತ್ಯ ಎಂದರು.
ಖ್ಯಾತ ಆಧ್ಯಾತ್ಮಿಕ ಪ್ರವಚನಕಾರರಾದ ಶ್ರೀಮತಿ ಭಾವನಾ ಪ್ರಭು ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಗುರುವಿನ ಗುಲಾಮನಾಗುವ ವರೆಗೆ ಮುಕ್ತಿ ದೊರೆಯದು. ಕೆಲವು ಪಾಲಕರಿಗೆ ಮಕ್ಕಳು ಭಗವದ್ಗೀತೆ ಓದಿದರೆ ಸನ್ಯಾಸಿಯಾಗುತ್ತಾರೆ ಎಂಬ ಅಭಿಪ್ರಾಯ ಇದೆ ಅದು ತಪ್ಪು ಗೀತೆ ಗೆಲುವು ಕೊಡುತ್ತದೆ. ಸನ್ಯಾಸದ ಪ್ರಚೋದನೆ ಅದರಲ್ಲಿ ಇಲ್ಲ ಎಂದರು. ಪ್ರತಿ ಮಗೂ ದೇವರ ಮಕ್ಕಳು ಅವರು ದೇವರೇ ಆಗಬೇಕು ಎಂದರು.
ನಂತರ ಮುಖ್ಯ ಅತಿಥಿಗಳಾಗಿದ್ದ ಉದ್ಯಮಿ ಹಾಗೂ ಚಲನಚಿತ್ರ ನಿರ್ಮಾಪಕ ಸುಬ್ರಾಯ ವಾಳ್ಕೆ ಮಾತನಾಡಿ ಗೀತೆ ಜೀವನದ ತತ್ವ, ಭಗವದ್ಗೀತೆಯ ಬಗ್ಗೆ ಈ ಎಲ್ಲ ಕೆಲಸ ನಡೆಯುತ್ತಿದೆ. ಭಗವದ್ಗೀತೆ ನಮ್ಮ ಜೀವನ ನಿರ್ವಹಣೆ ಹಾಗೂ ಮನಸ್ಸಿನ ತಳಮಳ ನಿವಾರಿಸಿ ಬದುಕನ್ನು ಕಲಿಸುತ್ತದೆ ಎಂದರು.
ಮಕ್ಕಳು ಗೀತೆಯನ್ನು ಕಲಿಯುವುವ ಅಗತ್ಯ ಈ ಕಾಲದಲ್ಲಿ ಹೆಚ್ಚಾಗಿ ಇದೆ. ಧರ್ಮ ರಕ್ಷಣೆಗೆ ಬರುವುದಾಗಿ ತಿಳಿಸಿದ ಕೃಷ್ಣನ ಪುನರವತರಣ ಇಂದಿನ ಅಗತ್ಯ ಎನ್ನಿಸಿದೆ. ಸೌತ್ ಆಪ್ರಿಕಾದಲ್ಲಿ ನಡೆದ ಅಜ್ಜ ಮೊಮ್ಮಗನ ಕತೆಯನ್ನು ಮನೋಜ್ಞವಾಗಿ ವಿವರಿಸಿದ ಅವರು ಮಕ್ಕಳಿಗೆ ಪ್ರಯತ್ನ ಹಾಗೂ ಇಚ್ಚಾಶಕ್ತಿಯ ಬಗ್ಗೆ ವಿವರಿಸಿದರು.
ಉದ್ಯಮಿಗಳಾದ ಎಸ್.ಕೆ ನಾಯ್ಕ ಆಥಿತ್ಯದ ನುಡಿಗಳನ್ನಾಡಿದರು. ಅಧ್ಯಕ್ಷತೆಯನ್ನು ಎಸ್ ಜಿ ನಾಯ್ಕ ವಹಿಸಿದ್ದರು. ಮುರಳೀಧರ ಪ್ರಭು ಸ್ವಾಗತಿಸಿದರು. ಆನಂದು ನಾಯ್ಕ ವಂದಿಸಿದರು. ಚಿದಾನಂದ ಭಂಡಾರಿ ಅತಿಥಿಗಳನ್ನು ಪರಿಚಯಿಸಿದರು.