ಕಾರವಾರ: 100 ರಷ್ಟು ವೈದ್ಯರನ್ನು ಹೊಂದಿರುವ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಕಾಮ್ಸ್‌) ಹೊಸದಾಗಿ ಸ್ಥಾಪಿತಗೊಂಡ IMA (Indian Medical Association) ಶಾಖೆಯನ್ನು ಉದ್ಘಾಟಿಸಲು ರಾಜ್ಯ ಶಾಖೆಯ ಅಧ್ಯಕ್ಷರಾಗಿದ್ದ ಡಾ.ರಾಜಶೇಖರ್ ಬಳ್ಳಾರಿ ಅವರು ಇತ್ತೀಚಿಗೆ ಸಂಸ್ಥೆಗೆ ಆಗಮಿಸಿದ್ದರು.

RELATED ARTICLES  ಆರೋಗ್ಯ ನೀರೀಕ್ಷಣಾಧಿಕಾರಿಗಳ ಜಿಲ್ಲಾ ಶಾಖೆಯ ಪದಾಧಿಕಾರಿಗಳ ಆಯ್ಕೆ

ಸಂಸ್ಥೆಯ ನಿರಂತರ ವೈದ್ಯಕೀಯ ಶಿಕ್ಷಣದ ಚಟುವಟಿಕೆ, ಸಾರ್ವಜನಿಕ ಸೇವೆಗಳು ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಮೌಲ್ಯಮಾಪನ ಮಾಡಿ, ಪ್ರಥಮ ಭೇಟಿಯಲ್ಲಿಯೇ ಮೆಚ್ಚುಗೆ ವ್ಯಕ್ತಪಡಿಸಿ, ಸಂಘಕ್ಕೆ ಪ್ರಶಸ್ತಿ ನೀಡಲು ಆಯ್ಕೆ ಮಾಡಿದ್ದರು.

RELATED ARTICLES  ಗುರು ಸುಧೀಂದ್ರ ಕಾಲೇಜಿನಲ್ಲಿ ಬಜೆಟ್ ವಿಶ್ಲೇಷಣೆ : ಸಂಪನ್ನವಾಯ್ತು ವಿನೂತನ ಕಾರ್ಯಕ್ರಮ

ಅಕ್ಟೋಬರ್ 27 ಮತ್ತು 28 ರಂದು ಗದಗದಲ್ಲಿ ನಡೆದ ರಾಜ್ಯ ಮಟ್ಟದ ಸಮಾವೇಶದಲ್ಲಿ “ಉದಯೋನ್ಮುಖ ಅತ್ಯುತ್ತಮ IMA (Indian Medical Association) ಶಾಖೆ” ಎಂದು ಪ್ರಶಸ್ತಿ ನೀಡಿದರು. ಶಾಖೆಯ ಪರವಾಗಿ ಡಾ.ಸುರೇಶ ಭಟ್‍ರವರು ಪ್ರಶಸ್ತಿ ಸ್ವೀಕರಿಸಿದರು.