ಭಟ್ಕಳ – ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಯಿತು. ಕಾರ್ಯಕ್ರಮದ ಆಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಆರ್. ನರಸಿಂಹ ಮೂರ್ತಿ ಮಾತನಾಡಿ ನಾಡು ನುಡಿಯ ಅಭಿಮಾನವನ್ನು ನಮ್ಮಲ್ಲಿ ಉಳಿಸಿ ಬೆಳೆಸಿಕೊಳ್ಳುವ ಜೊತೆಗೆ ನಾಡು ನುಡಿಯ ಪ್ರಗತಿಗೆ ಕೊಡುಗೆ ನೀಡುವ ಮೂಲಕ ನಾಡು ನುಡಿಯ ಸೇವೆ ಮಾಡಬೇಕಲ್ಲದೇ ಭಾವಿ ಜೀವನದಲ್ಲಿ ಶಿಕ್ಷಕರಾಗುವ ಪ್ರಶಿಕ್ಷಣಾರ್ಥಿಗಳು ಮಕ್ಕಳಲ್ಲಿ ನಾಡು ನುಡಿ ಸಂಸ್ಕøತಿಯ ಕುರಿತು ಅಭಿಮಾನ ಮೂಡಿಸುವ ಕಾರ್ಯವನ್ನು ಮಾಡಬೇಕು ಎಂದರು.
ಉಪನ್ಯಾಸಕ ಹಾಗೂ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ ಕನ್ನಡ ನಾಡಿನ ಶ್ರೇಷ್ಠ ಪರಂಪರೆ ಇತಿಹಾಸದ ಅರಿವನ್ನು ಮೂಡಿಸಿಕೊಂಡು ಇನ್ನಷ್ಟು ಶ್ರೀಮಂತಗೊಳಿಗೊಳಿಸಬೇಕಿದೆ.ನಮ್ಮ ನಾಡು ನುಡಿಯ ಸವಾಲುಗಳನ್ನು ಎದುರಿಸುವ ಜೊತೆಗೆ ಜಾಗತಿಕ ಮಟ್ಟದಲ್ಲಿ ಎಲ್ಲ ಸಾಧನೆಯನ್ನು ಮಾಡುವ ಎಲ್ಲ ಸಾಧ್ಯತೆಗಳಿಗೆ ತರೆದುಕೊಳ್ಳಬೇಕಿದೆ ಎಂದು ನುಡಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದ ಉಪನ್ಯಾಸಕ ನಾಗರಾಜ ಮಡಿವಾಳ ಪ್ರಾಸ್ಥಾವಿಕ ನುಡಿಗಳನ್ನಾಡಿ ಎಲ್ಲರನ್ನು ಸ್ವಾಗತಿಸಿದರು. ಕಾರ್ಯಕ್ರಮವನ್ನು ಭುವನೇಶ್ವರಿ ದೇವಿಗೆ ಪುಷ್ಪಾರ್ಚನೆಮಾಡುವ ಮೂಲಕ ಚಾಲನೆ ನೀಡಲಾಯಿತು.
ಪ್ರಶಿಕ್ಷಣಾರ್ಥಿ ಸಂದೀಪ ಗೌಡ ಮಾತನಾಡಿದರು. ಶೋಭಾ ಸಂಗಡಿಗರು ನಾಡಗೀತೆ ಹಾಡಿದರೆ ಪ್ರಶಿಕ್ಷಣಾರ್ಥಿ ಅಶ್ವಿನಿ ನಾಯ್ಕ ಮತ್ತು ನಿರ್ಮಲಾ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಸುಧಾ ವಂದಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ರಶ್ಮಿ ಏ.ಆರ್.,ಗಜಾನನ ಶಾಸ್ತ್ರಿ, ಬೊಧಕೇತರ ಸಿಬ್ಬಂದಿಗಳು ಹಾಗೂ ಪ್ರಶಿಕ್ಷನಾರ್ಥಿಗಳು ಉಪಸ್ಥಿತರಿದ್ದರು.