ಕಾರವಾರ: ಬರುವ ಡಿಸೆಂಬರ್‍ನಲ್ಲಿ ನಡೆಯುವ ಕರಾವಳಿ ಉತ್ಸವದಲ್ಲಿ ಕಲಾ ಪ್ರದರ್ಶನ ಮಾಡುವ ಕಲಾವಿದರಿಂದ ಅರ್ಜಿ ಆಹ್ವಾನಿಸಲಾಗಿದೆ. ಡಿಸೆಂಬರ್ 8 ರಿಂದ 10 ರವರೆಗೆ ಕರಾವಳಿ ಉತ್ಸವ ನಡೆಯಲಿದ್ದು, ಕಾರವಾರದ ಮಯೂರವರ್ಮ ವೇದಿಕೆ ಹಾಗೂ ಜಿಲ್ಲಾ ರಂಗಮಂದಿರದಲ್ಲಿ ಆಚರಿಸಲು ತೀರ್ಮಾನಿಸಲಾಗಿದೆ. ಉತ್ಸವಕ್ಕೆ ಆಸಕ್ತ ಕಲಾವಿದರು ತಾವು ಪ್ರದರ್ಶಿಸುವ ಕಲೆಯ ವಿವರ, ಪ್ರದರ್ಶನಕ್ಕೆ ಬೇಕಾಗುವ ಸಮಯವನ್ನು ಹಾಗೂ ಸಂಭಾವನೆಯನ್ನು ನಮೂದಿಸತಕ್ಕದ್ದು.

RELATED ARTICLES  ಗ್ರಾಮ ಪಂಚಾಯತಿಯಲ್ಲಿ ಕರವಸೂಲಿಗಾರ ಮತ್ತು ಜವಾನ ಹುದ್ದೆಗಳಿಗೆ ಅರ್ಜಿ ಆಹ್ವಾನ

ಅರ್ಜಿಗಳನ್ನು ಸಾಂಸ್ಕøತಿಕ ಸಮಿತಿಯಲ್ಲಿ ಪ್ರಸ್ತಾಪಿಸಿ ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳಲಾಗುವುದು. ಹಾಗೂ ಸಮಿತಿಯ ನಿರ್ಧಾರ ಅಂತಿಮವಾಗಿರುತ್ತದೆ. ಆಸಕ್ತ ಕಲಾವಿದರು ತಮ್ಮ ಮನವಿಗಳನ್ನು ನವೆಂಬರ್ 15 ರೊಳಗೆ ತಮ್ಮ ಕಲೆಯ ಪ್ರದರ್ಶನದ ಕುರಿತು ಭಾವಚಿತ್ರ/ ಸಿ.ಡಿ.ಯೊಂದಿಗೆ ಈ ಹಿಂದೆ ಕಾರ್ಯಕ್ರಮಗಳನ್ನು ನೀಡಿದ ಅನುಭವದ ವಿವರಗಳೊಂದಿಗೆ ಸಹಾಯಕ ಕಮೀಷನರ್ ಕಾರವಾರ ರವರ ಕಚೇರಿಗೆ ಸಲ್ಲಿಸುವಂತೆ ಸದಸ್ಯ ಕಾರ್ಯದರ್ಶಿ, ಸಾಂಸ್ಕೃತಿಕ ಸಮಿತಿ ಕರಾವಳಿ ಉತ್ಸವ -2017 ಹಾಗೂ ಸಹಾಯಕ ಆಯುಕ್ತರು ಕಾರವಾರ ಇವರು ತಿಳಿಸಿದ್ದಾರೆ.

RELATED ARTICLES  ವಿಳಂಬವಾಗುತ್ತೆ ದ್ವಿತೀಯ ಪಿ.ಯು ರಿಸಲ್ಟ್