ಭಟ್ಕಳ: ವಿವಿಧ ಚಿಕಿತ್ಸೆಗಾಗಿ 25 ಫಲಾನುಭವಿಗಳಿಗೆ ಮಂಜೂರಾದ ಒಟ್ಟು 11.67 ಲಕ್ಷ ಮೊತ್ತದ ಮುಖ್ಯಮಂತ್ರಿ ಪರಿಹಾರ ನಿಧಿಯ ಚೆಕನ್ನು ಶಾಸಕ ಮಂಕಾಳ ವೈದ್ಯ ವಿತರಿಸಿದರು.

ಬಳಿಕ ಮಾತನಾಡಿದ ಅವರು, ‘ನಾಲ್ಕೂವರೆ ವರ್ಷಗಳ ಅವಧಿಯಲ್ಲಿ ಭಟ್ಕಳ– ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಪರಿಹಾರ ಗರಿಷ್ಠ ಮೊತ್ತ ₹ 2.5ಕೋಟಿ ವಿತರಿಸಲಾಗಿದೆ’ ಎಂದರು. ಜಿಲ್ಲಾ ಪಂಚಾಯ್ತಿ ಸದಸ್ಯ ಅಲ್ಬರ್ಟ್‌ ಡಿಕೋಸ್ತ, ತಾಲ್ಲೂಕು ಪಂಚಾಯ್ತಿ ಸದಸ್ಯ ಮಾಬ್ಲೇಶ್ವರ ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಠ್ಠಲ ನಾಯ್ಕ, ಹೆಸ್ಕಾಂ ನಿರ್ದೇಶಕ ಮಂಜುನಾಥ ನಾಯ್ಕ, ತಿರುಮಲ ನಾಯ್ಕ ಹಾಜರಿದ್ದರು.

RELATED ARTICLES  ಶ್ರೀ ರಾಘವೇಶ್ವರಭಾರತೀ ಶಾಲೆಯಲ್ಲಿ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ದಿನಾಚರಣೆ