ಕಾರವಾರ: ಭಟ್ಕಳದ ಗೌಸಿಯಾ ಸ್ಟ್ರೀಟ್ ನ ಒಳಚರಂಡಿ ಹಾಗೂ ಒಳಚರಂಡಿ ಘಟಕದ ವ್ಯವಸ್ಥೆಯ ವಿನ್ಯಾಸ ಹಾಗೂ ಅಂದಾಜು ಪಟ್ಟಿಯಂತೆ ಎಸ್.ಟಿ.ಪಿ ಘಟಕವನ್ನು ಯೋಜನೆಯಂತೆ ಪಟ್ಟಣದ ಕೆಳಭಾಗವಾದ ಮುಂಡಳ್ಳಿಯಲ್ಲಿ ನಿರ್ಮಿಸಲು ಕ್ರಮವಹಿಸುವಂತೆ ಭಟ್ಕಳದ ಸ್ಥಳೀಯ ನಿವಾಸಿಗಳ ನಿಯೋಗವು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಅವರಿಗೆ ಗುರುವಾರ ಮನವಿ‌ ಮಾಡಿದೆ.

RELATED ARTICLES  ಸಾಗರದಲ್ಲಿ ವಿಪ್ರಜಾಗೃತಿ ಸಮಾವೇಶ ಸಮಾರೋಪ ಸಮಾರಂಭ : ರಾಘವೇಶ್ವರ ಶ್ರೀಗಳ ದಿವ್ಯ ಸಾನಿಧ್ಯ.

ಮುಂಡಳ್ಳಿಯಲ್ಲಿ ಎಸ್.ಟಿ.ಪಿ ಘಟಕವನ್ನು ಸ್ಥಾಪನೆ ಮಾಡುವುದರಿಂದ ತ್ಯಾಜ್ಯದ ನೀರನ್ನು ಬೇರೆಡೆ ಸ್ಥಳಾಂತರ ಮಾಡುವುದು ಹಾಗೂ ಆಗಾಗ ಅದನ್ನು ಶುದ್ಧೀಕರಣ ಘಟಕದಿಂದ ಪಂಪ್ ಗಳ ಮೂಲಕ ಸಾಗಿಸುವುದರಿಂದ ಪಂಪ್ ಗಳು ಹಾಳಾಗುವುದು ತಪ್ಪುತ್ತದೆ. ಜತೆಗೆ ಗ್ರ್ಯಾವಿಟಿಯ ಮೂಲಕ ಈ ತ್ಯಾಜ್ಯ ನೀರನ್ನು ಯೋಜನೆಯಲ್ಲಿ ತೋರಿಸಿದ ಸ್ಥಳಕ್ಕೆ ಸಾಗಿಸಬಹುದು. ಹಾಗೂ ಪಟ್ಟಣದ ಮೇಲ್ಭಾಗವಾದ ವೆಂಕ್ಟಾಪುರದ ಎಸ್.ಟಿ.ಪಿ ಘಟಕದಲ್ಲಿ ನಿರ್ಮಿಸಲು ನಿರ್ಣಯಿಸಿದಂತೆ ಮೊದಲು ರಚಿಸಿದ ವಿನ್ಯಾಸ ಹಾಗೂ ಅಂದಾಜು ಪಟ್ಟಿಯಂತೆ ಈ ಒಳಚರಂಡಿ ಘಟಕಗಳನ್ನು ನಿರ್ಮಾಣ ಮಾಡಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

RELATED ARTICLES  ಶಿವರಾಮ ಹೆಬ್ಬಾರ ವಿರುದ್ಧ ಪ್ರಶಾಂತ ದೇಶಪಾಂಡೆ ಸ್ಪರ್ಧೆ..!

ತಂಜೀಮ್ ನ ಅಲ್ತಾಫ್ ಖರೂರಿ, ಭಟ್ಕಳ ಪುರಸಭೆಯ ಮಟ್ಟಾ ಸಾಧಿಕ್, ಇನಾಯತ್ ಉಲ್ಲಾ ಗವಾಯಿ ಹಾಗೂ ಇತರರು ಹಾಜರಿದ್ದರು.