ಕಾರವಾರ: ಕರ್ನಾಟಕ ಮೀನುಗಾರರ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಅಭೂತಪೂರ್ವ ಒಂದು ವರ್ಷದ ಆಡಳಿತವನ್ನು ಪೂರ್ತಿಗೊಳಿಸಿದ ಜಿಲ್ಲೆಯ ಡಿಸಿಸಿ ಹಿಂದುಳಿದ ವರ್ಗದ ಅಧ್ಯಕ್ಷರೂ ಆದ ರಾಜೇಂದ್ರ ನಾಯ್ಕ ಅವರು ಗುರುವಾರ ದೇವಭಾಗ ಕಣಸಗಿರಿ ಮೀನುಗಾರರ ಸಂಘದ ಕಚೇರಿಗೆ ಆಗಮಿಸಿದ್ದರು.ಅವರಿಗೆ ದೇವಭಾಗ ಕಣಸಗಿರಿ ಮೀನುಗಾರರ ಮಹಿಳಾ ಸಹಕಾರ ಸಂಘ ಹಾಗೂ ಮೀನುಗಾರರ ಸಮಾಜದ ಮಹಿಳೆಯರು ಬೃಹತ್ ಸಂಖ್ಯೆಯಲ್ಲಿ ಆಗಮಿಸಿ ಸ್ವಾಗತಿಸಿದರು.

RELATED ARTICLES  ಡಾ. ಶಶಿಭೂಶಣ ಹೆಗಡೆಯವರಿಂದ 2 ಲಕ್ಷ ದೇಣಿಗೆ

ಈ ವೇಳೆ ಗ್ರಾಮ ಪಂಚಾಯತ ಅಧ್ಯಕ್ಷ ರಾಜು ತಾಂಡೇಲ್, ಗಣಪತಿ ಮಾಂಗ್ರೆ, ದೇವಭಾಗ ಕಣಸಗಿರಿ ಮೀನುಗಾರರ ಸಂಘದ ಅಧ್ಯಕ್ಷೆ ಅಶ್ವಿನಿ ಸಾಳಗಾಂವಕ, ಉಪಾಧ್ಯಕ್ಷೆ ಪ್ರತಿಮಾ ಜುವೇಕರ, ಕಾರ್ಯದರ್ಶಿ ಪ್ರೀತಿ ಸೈಲ್, ಸದಸ್ಯರು ಗೀತಾ ಮೇಥಾ, ಪ್ರತೀಕ್ಷಾ ಮಾಜಾಳಿಕರ, ಸರೋಜಾ ಕಾಣಕೋಣಕರ, ದೀಪಾ ಕೆರಕರ, ಸೋನಾಲಿ ಮೊರೇಕರ, ಮೀನಾ ಮಾಜಾಳಿಕರ, ಸುಚಿತ್ರಾ ಖೋಬ್ರೆಕರ ಹಾಗೂ ಸ್ಥಳೀಯ ಮೀನುಗಾರರ ಮಹಿಳೆಯರು ಇದ್ದರು.

RELATED ARTICLES  ಗೋಕರ್ಣದ ಡಾ . ನಾರಾಯಣ ಸದಾಶಿವ ಭಟ್ಟರಿಗೆ ಅಂತರಾಷ್ಟ್ರೀಯ ಪುರಸ್ಕಾರ