ಭಟ್ಕಳ: ಹಿಂದೂ ವಿರೋಧಿ ಹಾಗೂ ರಾಷ್ಟ್ರ ವಿರೋಧಿ ಟಿಪ್ಪು ಸುಲ್ತಾನ್ ಜಯಂತಿ ಆಚರಣೆಯನ್ನು ಸರ್ಕಾರ ರದ್ದುಗೊಳಿಸಬೇಕೆಂದು ಆಗ್ರಹಿಸಿ ಶ್ರೀ ರಾಮಸೇನೆ, ಶ್ರೀ ಭುವನೇಶ್ವರಿ ಸಂಘ, ಹಿಂದು ಜನ ಜಾಗೃತಿ ಸಮಿತಿ, ಆರ್.ಎಸ್.ಎಸ್ ಹಾಗೂ ವಿಶ್ವ ಹಿಂದೂ ಪರಿಷತ್ ವತಿಯಿಂದ ರಾಜ್ಯಪಾಲರಿಗೆ ಸಹಾಯಕ ಆಯುಕ್ತರ ಮೂಲಕ ಮನವಿಯನ್ನು ಸಲ್ಲಿಸಿದರು.
ಟಿಪ್ಪುವಿಗೆ ಅಧಿಕಾರ ಸಿಕ್ಕಿದ ಕೂಡಲೇ ಹಿಂದೂ ರಾಜರ ಹೆಸರು ಊರನ್ನು ಅಳಿಸಿ ಹಾಕಿದನು. ಮೈಸೂರನ್ನು ಇಸ್ಲಾಮೀ ರಾಜ್ಯವೆಂದು ಘೋಷಿಸಿದರು. ಅಷ್ಟೇ ಅಲ್ಲದೇ ತನ್ನ ರಾಜ್ಯದಲ್ಲಿನ ಎಲ್ಲಾ ಕಾಫಿರರನ್ನು ಮತಾಂತರಿಸಿ ಮುಸಲ್ಮಾನನಾಗಿಸುವೆ ಎಂಬ ಪ್ರತಿಜ್ಞೆ ತೆಗೆದುಕೊಂಡನು. ಮೈಸೂರಿನಲ್ಲಿನ ಎಲ್ಲಾ ಹಳ್ಳಿಯ ಮುಸಲ್ಮಾನ ಅಧಿಕಾರಿಗಳಿಗೆ ಆದೇಶವನ್ನು ಲಿಖಿತ ಸ್ವರೂಪದಲ್ಲಿ ಕಳುಹಿಸಿದನು. ಎಲ್ಲಾ ಹಿಂದೂ ಮಹಿಳೆಯರನ್ನು ಮತ್ತು ಪುರುಷರನ್ನು ಮುಸಲ್ಮಾನ ಧರ್ಮದ ದೀಕ್ಷೆಯನ್ನು ಕೊಡಿ, ಯಾರು ಸ್ವ ಇಚ್ಚೆಯಿಂದ ಮುಸಲ್ಮಾನ ಧರ್ಮವನ್ನು ಸ್ವೀಕರಿಸುವುದಿಲ್ಲವೋ, ಅವರನ್ನು ಬಲವಂತವಾಗಿ ಮುಸಲ್ಮಾನವನ್ನಾಗಿಸಿ ಅಥವಾ ಹತ್ಯೆ ಮಾಡಿದನು ಅಂತಹ ಟಿಪ್ಪುವಿನ ದಿನ ಆಚರಿಸಲು ಸರ್ಕಾರ ಹೊರಡಿಸಿರುವುದು ನಾಚಿಕೆಗೇಡಿನ ಸಂಗತಿ ಎಂದು ವಾಗ್ದಾಳಿ ನಡೆಸಿದರು.
ಈ ಸಂಧರ್ಭದಲ್ಲಿ ಶ್ರೀ ರಾಮ ಸೇನೆಯ ಮುಖಂಡ ಜಯಂತ ನಾಯ್ಕ, ಸುರೇಶ ನಾಯ್ಕ, ಭಟ್ಕಳ ಹಿಂದೂ ಜನಜಾಗೃತಿ ಸಮಿತಿಯ ಪ್ರಮುಖರಾದ ಪುಂಡಲೀಕ ಪೈ, ಸೋಮೇಶ ಗುರವ, ದಯಾನಂದ ಪ್ರಭು, ರಾಮಚಂದ್ರ ನಾಯ್ಕ, ರಂಗ ಪ್ರಭು, ಸುಧಾಕರ ಮಹಾಲೆ, ಶ್ರೀ ಭುವನೇಶ್ವರಿ ಕನ್ನಡ ಸಂಘದ ಅಧ್ಯಕ್ಷ ರಮೇಶ ನಾಯ್ಕ, ಉಪಾಧ್ಯಕ್ಷ ಮಂಜು ನಾಯ್ಕ, ಕಾರ್ಯದರ್ಶಿ ಪಾಂಡುರಂಗ ನಾಯ್ಕ, ಸದಸ್ಯ ರಾಮಚಂದ್ರ ನಾಯ್ಕ, ಈಶ್ವರ ನಾಯ್ಕ, ಜೈಶಂಕರ ನಾಯ್ಕ, ಶ್ರೀಧರ ನಾಯ್ಕ ಸೇರಿದಂತೆ ಮುಂತಾದವರು ಇದ್ದರು.