ಕುಮಟಾದ ರೈಲು ನಿಲ್ದಾಣದಲ್ಲಿ ಬಂದು ತಂಗಿರುವ ಅತ್ಯುತ್ತಮ ವೈದ್ಯಕೀಯ ಉಪಕರಣಗಳನ್ನು ಹಾಗೂ ವೈದ್ಯರನ್ನು ಒಳಗೊಂಡಿರುವ ‘ ಲೈಫ್ ಲೈನ್ ಎಕ್ಸ್‌ಪ್ರೆಸ್ ‘ ಗೆ ಸಾರ್ವಜನಿಕರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕುಮಟಾ ತಾಲ್ಲೂಕಿನ ಹಾಗೂ ಹೊರ ಊರುಗಳಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಚಿಕಿತ್ಸೆಗಾಗಿ ಆಗಮಿಸುತ್ತಿದ್ದಾರೆ. ಸರತಿ ಸಾಲನ್ನೂ ಲೆಕ್ಕಿಸದೆ ನುರಿತ ವೈದ್ಯರಿಂದ ಚಿಕಿತ್ಸೆ ಪಡೆದು ತೊಂದರೆಯಿಂದ ಗುಣಮುಖರಾಗಲು ಜನರು ಉತ್ಸುಕರಾಗಿರುವುದು ಕೇಂದ್ರ ಸರ್ಕಾರದ ಯೋಜನೆ ಹಾಗೂ ಸಂಸದ ಹಾಗೂ ರಾಜ್ಯ ಮಂತ್ರಿ ಅನಂತಕುಮಾರ್ ಹೆಗಡೆ ಯವರ ಪ್ರಯತ್ನ ಸಾರ್ಥಕ ಎನಿಸುತ್ತಿದೆ.

RELATED ARTICLES  Latest Update : ಗ್ರಾಮ ಪಂಚಾಯತ ಚುನಾವಣೆಯಲ್ಲಿ ಗೆದ್ದವರಾರು..?

ಇಂದು ಕಣ್ಣಿನ ಚಿಕಿತ್ಸೆ, ಮಹಿಳೆಯರಿಗೆ ಗರ್ಭಕೋಶದ ತಪಾಸಣೆ, ಬಾಯಿ ಕ್ಯಾನ್ಸರ್ ತಪಾಸಣೆಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು ಕಂಡುಬಂತು