ಕಾರವಾರ: ಕಪ್ಪು ಇರುವೆ ಕಚ್ಚಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಇಲ್ಲಿನ ಅಂಗವಿಕಲ ಯುವಕ ಶಿವು ಚಂದ್ರಸ್ವಾಮಿ (19) ಎಂಬಾತ ಚಿಕಿತ್ಸೆ ಫಲಿಸದೇ ಶುಕ್ರವಾರ ಮೃತಪಟ್ಟಿದ್ದಾನೆ.

ಬೈತ್‌ಖೋಲ್‌ನ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ತಾಯಿ ಕಮಲಾರ ಜತೆ ಗುಡಿಸಲಿನಲ್ಲಿ ಈತ ವಾಸವಾಗಿದ್ದ. ಈತನ ತಾಯಿಗೆ ಒಟ್ಟು ನಾಲ್ವರು ಮಕ್ಕಳಿದ್ದು, ಅದರಲ್ಲಿ ಅವಳಿ ಮಕ್ಕಳಾದ ಈತ ಹಾಗೂ ಸಂಗೀತಾ ಹುಟ್ಟು ಅಂಗವಿಕಲರಾಗಿ ಜನಿಸಿದ್ದರು.

RELATED ARTICLES  ಎ.ಟಿ.ಎಂ ಕೇಂದ್ರದಲ್ಲಿ ಸಹಾಯ ಮಾಡುವ ನೆಪದಲ್ಲಿ ಜನರಿಗೆ ಮೋಸ‌ ಮಾಡುತ್ತಿದ್ದ ಖತರ್ನಾಕ್ ಆಸಾಮಿ ಪೊಲೀಸ್ ಬಲೆಗೆ

ತುಳಸಿ ವಿವಾಹಕ್ಕಾಗಿ (ತುಳಸಿ ಪೂಜೆ) ಮನೆಯಲ್ಲಿ ಕಬ್ಬನ್ನು ತಂದು ಇಡಲಾಗಿತ್ತು. ಈ ವೇಳೆ ಅದಕ್ಕೆ ಕಪ್ಪು ಇರುವೆ ಬಂದಿದ್ದು, ತಾಯಿ ಕೆಲಸಕ್ಕೆ ತೆರಳಿದ ಸಂದರ್ಭ ಅದು ಶಿವುವನ್ನು ಸಂಪೂರ್ಣವಾಗಿ ಆಕ್ರಮಿಸಿವೆ. ಕೆಲಹೊತ್ತು ಅದು ಆತನನ್ನು ಕಚ್ಚಿದ್ದು, ನೋವು ತಾಳಲಾರದೆ ಆತ ಕಿರುಚಾಟ ಪ್ರಾರಂಭಿಸಿದ್ದಾನೆ. ಅದನ್ನು ಕೇಳಿದ ಸ್ಥಳೀಯರು ಸ್ಥಳಕ್ಕಾಗಿಮಿದ್ದಾಗ ಆತ ಅಸ್ವಸ್ಥಗೊಂಡಿದ್ದ. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ದು, ಚಿಕಿತ್ಸೆ ನೀಡಲಾಯಿತು. ಆದರೆ ಚಿಕಿತ್ಸೆ ಫಲಿಸದೇ ಶಿವು ಅಸುನೀಗಿದ್ದಾನೆ.

RELATED ARTICLES  ಮನೆಯ ಬಾಗಿಲಿಗೇ ಬಂತು ಚಿರತೆ.

ತೀರಾ ಬಡತನದಲ್ಲಿದ್ದ ಅವರಿಗೆ ಕುಟುಂಬಕ್ಕೆ ಆತನ ಶವ ಸಂಸ್ಕಾರ ನಡೆಸಲೂ ಹಣವಿಲ್ಲದೇ ಕೊರಗುತ್ತಿದ್ದರು. ಬಳಿಕ ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ, ನಗರಸಭಾ ಸದಸ್ಯೆ ಛಾಯಾ ಜಾವ್ಕಾರ್ ಹಾಗೂ ಸ್ಥಳೀಯ ನಿವಾಸಿ ವಿಲ್ಸನ್ ಫರ್ನಾಂಡಿಸ್ ಮಾಹಿತಿ ತಿಳಿದು ಆತನ ಅಂತಿಮ ಸಂಸ್ಕಾರ ನೆರವೇರಿಸಿದರು. ಡಿಸಿಎಫ್ ಕೆ.ಗಣಪತಿ ಕಟ್ಟಿಗೆಯನ್ನು ಉಚಿತ ವ್ಯವಸ್ಥೆ ಮಾಡಿಕೊಟ್ಟರು.