ಸಿದ್ದಾಪುರ: ಮಕ್ಕಳು ತಪ್ಪುದಾರಿಗೆ ಹೋಗದಂತೆ ಹಾಗೂ ಸಂಸ್ಕಾರ, ಧಾರ್ಮಿಕತೆಯ ಕುರಿತು ಸಮಗ್ರವಾದ ಮಾಹಿತಿಯನ್ನು ನೀಡಬೇಕಾದ ಜವಾಬ್ದಾರಿ ಪಾಲಕರದ್ದಾಗಿರುವುದರಿಂದ ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡುವುದಕ್ಕೆ ಮುಂದಾಗಬೇಕೆಂದು ಶಿರಸಿ ಈಶ್ವರಿ ವಿಶ್ವವಿದ್ಯಾಲಯದ ಬ್ರಹ್ಮಕುಮಾರಿ ದೇವಿಕಾ ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಲಗೇರಿ ಕಾಂವಂಚೂರು ವಲಯದ ಪ್ರಗತಿ ಬಂಧ-ಸ್ವಸಹಾಯ ಸಂಘಗಳ ಒಕ್ಕೂಟ ಹಲಗೇರಿಯಲ್ಲಿ ಆಯೋಜಿಸಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ 10ನೇ ವರ್ಷದ ಮೊಸರು ಕುಡಿಕೆ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಎಲ್ಲಿ ನೋಡಿದರೂ ಮಕ್ಕಳು ದಾರಿ ತಪ್ಪುತ್ತಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಅವರಿಗೆ ಸರಿಯಾಗಿ ನಮ್ಮ ಸಂಸ್ಕøತಿ, ಸಂಸ್ಕಾರ, ಅಚಾರ, ವಿಚಾರಗಳನ್ನು ತಿಳಿಸಿಕೊಡುವುದರ ಸಂಗಡ ಹಿರಿಯರಿಗೆ ಗೌರವ ನೀಡುವುದನ್ನು ಕಲಿಸಿಕೊಡಬೇಕು.
ಇಡೀ ಸಮಾಜದಲ್ಲಿ ಸ್ವಾರ್ಥದ ಬದುಕೇ ಹೆಚ್ಚಾಗಿರುವುದರಿಂದ ಎಲ್ಲರೂ ಎಚ್ಚರಗೊಳ್ಳಬೇಕಾಗಿದೆ. ದೂರದರ್ಶನ, ಮೊಬೈಲ್ ಬಳಕೆ ಮಕ್ಕಳಲ್ಲಿ ಹೆಚ್ಚಾಗುತ್ತಿರುವುದರಿಂದ ಮಕ್ಕಳ ಶಿಕ್ಷಣ ಕುಂಠಿತಗೊಳ್ಳುತ್ತಿದೆ. ಮಾನಸಿಕ ನೆಮ್ಮದಿ ದೂರವಾಗುತ್ತಿದೆ ಎಂದು ಹೇಳಿದರು.
ಅಧ್ಯಕ್ಷತೆವಹಿಸಿದ್ದ ಹಲಗೇರಿ ಗ್ರಾಪಂ ಅಧ್ಯಕ್ಷೆ ಶ್ಯಾಮಲಾ ಹೆಗಡೆ ಮಾತನಾಡಿ ಮಕ್ಕಳಿಗೆ ಶಿಕ್ಷನ ನೀಡುವುದರ ಜೊತೆಗೆ ಧಾರ್ಮಿಕ ವಿಷಯಗಳ ಕುರಿತು ಮಾಹಿತಿ ನೀಡಬೇಕೆಂದರು.
ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಮೇಶ ಹಾರ್ಸಿಮನೆ ಮಾತನಾಡಿ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ನಮ್ಮ ಮಕ್ಕಳಿಗೆ ಧಾರ್ಮಿಕತೆ, ನಮ್ಮ ಸಂಸ್ಕøತಿ ಹಾಗೂ ನಮ್ಮ ಆಚಾರ ವಿಚಾರಗಳನ್ನು ಮನವರಿಕೆ ಮಾಡಿಕೊಡಬೇಕು. ಹಿರಿಯರಿಗೆ ಗೌರ ನೀಡುವುದನ್ನು ಕಲಿಸಬೇಕು. ಮಕ್ಕಳ ದಿನನಿತ್ಯದ ಚಟುವಚಟಿಕೆಗಳ ಕುರಿತು ಹೆಚ್ಚಿನ ಗಮನ ನೀಡಬೇಕು ಎಂದು ಹೇಳಿದರು.
ಪತ್ರಕರ್ತ ಸುರೇಶ ಮಡಿವಾಳ ಕಡಕೇರಿ ಮಾತನಾಡಿದರು. ಕೃಷಿ ಅಧಿಕಾರಿ ಪ್ರವೀಣ ಎಂ, ಗಣೇಶ, ಒಕ್ಕೂಟದ ಅಧ್ಯಕ್ಷ ಬಲೀಂದ್ರ ನಾಯ್ಕ ಹಾಗೂ ಒಕ್ಕೂಟದ ಪದಾಧಿಕಾರಿಗಳಿದ್ದರು. ನಂತರ ಒಕ್ಕೂಟದ ಸದಸ್ಯರುಗಳಿಗೆ ವಿವಿಧ ಸ್ಪರ್ಧಾ ಕಾರ್ಯಕ್ರಮ ಜರುಗಿತು.