ಕಾರವಾರ: ಜಿಲ್ಲೆಯ ಸಿದ್ದಾಪುರ ಮತ್ತು ಮುಂಡಗೋಡದಲ್ಲಿ ಆಯುಧ ಅನುಜ್ಞಪ್ತಿ ನವೀಕರಣ ಆಂದೋಲನ ಕ್ರಮವಾಗಿ ನ.15 ಮತ್ತು ನ.30ರಂದು ನಡೆಯಲಿದೆ.
ಭಾರತೀಯ ಆಯುಧ ಕಾಯ್ದೆ 1959 ಮತ್ತು ಭಾರತೀಯ ಅಧಿನಿಯಮ 2016ರನ್ವಯ ಆಯುಧ ಅನುಜ್ಞಪ್ತಿ ನವೀಕರಣ ಕೋರಿ ಅರ್ಜಿಗಳು ಬರುತ್ತಿರುವ ಹಿನ್ನೆಲೆಯಲ್ಲಿ ಅರ್ಜಿಗಳ ಶೀಘ್ರ ವಿಲೇವಾರಿಗಾಗಿ ವಿಶೇಷ ಆಂದೋಲನ ಮಾಡುತ್ತಿದ್ದು, ಮುಂದಿನ ಮೂರು ತಿಂಗಳಿನಲ್ಲಿ ಅವಧಿ ಅಂತ್ಯವಾಗಲಿರುವ ಬೆಳೆ ಮತ್ತು ಸ್ವರಕ್ಷಣೆ ಅಯುಧ ಅನುಜ್ಞಪ್ತಿದಾರರು ನಿಗದಿತ ದಿನಾಂಕ ಮತ್ತು ಸಮಯದಲ್ಲಿ ತಮ್ಮ ಆಯುಧ ಪರವಾನಿಗೆ ನವೀಕರಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.

RELATED ARTICLES  ಕಾಬೂಲ್‌ನ ಇಂಟರ್‌ಕಾಂಟಿನೆಂಟಲ್‌ ಹೋಟೆಲ್‌ ಮೇಲೆ ಗುಂಡಿನ ದಾಳಿ.

ನ.15ರಂದು ಸಿದ್ದಾಪುರ ತಹಶೀಲ್ದಾರ್ ಕಾರ್ಯಾಲಯ ಹಾಗೂ ನ.30ರಂದು ಮುಂಡಗೋಡ ತಹಶೀಲ್ದಾರ್ ಕಾರ್ಯಾಲಯದಲ್ಲಿ ಬೆಳಿಗ್ಗೆ 10ರಿಂದ ಮಧ್ಯಾಹ್ನ 1.30ರವರೆಗೆ ಆಂದೋಲನ ನಡೆಯಲಿದ್ದು ಅನುಜ್ಞಪ್ತಿದಾರರು ಆಯಾ ತಹಶೀಲ್ದಾರ್ ಕಚೇರಿಯಲ್ಲಿ ನೀಡಲಾಗುವÀ ನಿಗದಿತ ನಮೂನೆ ಎ3ನಲ್ಲಿ ಅರ್ಜಿ, ಎಸ್4ನಲ್ಲಿ ಪೊಲೀಸ್ ವರದಿ, ಎಸ್3ನಲ್ಲಿ ವೈದ್ಯಕೀಯ ಪ್ರಮಾಣ ಪತ್ರ ಮತ್ತು ಲೆಕ್ಕ ಶೀರ್ಷಿಕೆ 005500104000 ನೇದಕ್ಕೆ ಸರ್ಕಾರಿ ಶುಲ್ಕ ರೂ.1500 ಜಮಾ ಮಾಡಿ, ಚಲನ್ ಮೂಲ ಪ್ರತಿ ಮತ್ತು ಪಹಣಿಯೊಂದಿಗೆ ಸಂಬಂಧಿತ ತಹಶೀಲ್ದಾರ್ ಕಚೇರಿಯಲ್ಲಿ ಸಲ್ಲಿಸಿ ಸ್ಥಳದಲ್ಲಿಯೇ ಬಂದೂಕು ಪರವಾನಿಗೆ ನವೀಕರಣ ಮಾಡಿಸಿಕೊಳ್ಳಬಹುದಾಗಿದೆ. ಈ ಆಂದೋಲನದ ಪೂರ್ಣ ಪ್ರಯೋಜನ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES  ಮೈಸೂರಿನ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರರ ಹುದ್ದೆಗಳಿಗೆ ನೇರ ನೇಮಕಾತಿ.