ಕುಮಟ : ತಾಲೂಕಿನ ರೊಟ್ರಕ್ಟ ಕ್ಲಬ್ ಸದಸ್ಯರು ಮೂರು ವರ್ಷದಿಂದ ವಿನೂತನ ರೀತಿಯಲ್ಲಿ ಹುಟ್ಟುಹಬ್ಬವನ್ನು ಆಚರಣೆ ಮಾಡುತ್ತಿದ್ದಾರೆ. ಅದು ಇತರರಿಗೆ ಮಾದರಿ ಎಂಬುದು ಜನತೆಯ ಅಭಿಮತ.

ರೊಟ್ರೆಕ್ಟ ಕ್ಲಬ್ ನ ಪ್ರತಿಯೊಬ್ಬ ಸದಸ್ಯರು ಪ್ರತಿಯೊಬ್ಬರ ಹುಟ್ಟುಹಬ್ಬವನ್ನು ಹೆರವಟ್ಟದ ರಾಘವೇಂದ್ರ ಮಠದ ವೃದ್ದಾಶ್ರಮದಲ್ಲಿ ಆಚರಣೆ ಮಾಡಿಕೊಳ್ಳುತ್ತಿದ್ದಾರೆ.
ರೊಟ್ರೆಕ್ಟ ಕ್ಲಬ್ ಸದಸ್ಯ ಪವನ್ ಗುನಗಾ ಇವರು ಇಂದು ತಮ್ಮ ಹುಟ್ಟುಹಬ್ಬವನ್ನು ಕುಮಟಾದ ರಾಘವೇದ್ರ ಮಠದ ವೃದ್ದಾಶ್ರಮದಲ್ಲಿ ತಮ್ನ ರೊಟ್ರೆಕ್ಟ ಕ್ಲಬ್ ಸದಸ್ಯರು ಮತ್ತು ವೃದ್ದಾಶ್ರಮದ ಸದಸ್ಯರ ಜೊತೆ ಆಚರಿಕೊಂಡರು.

RELATED ARTICLES  ಲಾಯನ್ಸ್ ಜಿಲ್ಲೆ 317 ಬಿ ಯಿಂದ ನೆರೆ ಪರಿಹಾರ ಕಾರ್ಯಕ್ರಮ

ಪ್ರತೀ ಬಾರಿ ಸದಸ್ಯರು ಹೀಗೆ ಆಚರಣೆ ಮಾಡುವುದು ಅಲ್ಲಿಯ ಜನರಿಗೆ ಸಂತಸ ತಂದರೆ. ಜನತೆಗೆ ಮಾದರಿ ಎನಿಸಿದೆ. ಈ ಬಗ್ಗೆ ರೋಟ್ರಾಕ್ಟ ಸದಸ್ಯರು ಸಂತಸ ವ್ಯಕ್ತಪಡಿಸಿದ್ದಾರೆ. ವೃದ್ಧರ ಪಾಲಿನ ಮಕ್ಕಳಂತೆ ಅವರ ಜೊತೆ ಕಾರ್ಯಕ್ರಮ ಮಾಡುವುದು ಹೆಚ್ಚಿನ ಸಂತಸ ಎನ್ನುವುದು ಸದಸ್ಯರ ಮಾತು.

RELATED ARTICLES  ಎಸ್ಎಸ್ಎಲ್ ಸಿ ಫಲಿತಾಂಶ : ಸಿ.ವಿ.ಎಸ್.ಕೆ ಮೂವರು ರಾಜ್ಯಕ್ಕೇ ಫಸ್ಟ್…!

ಈ ಸಂದರ್ಭದಲ್ಲಿ ರೋಟ್ರಾಕ್ಟನ ಸದಸ್ಯರು, ವೃದ್ಧಾಶ್ರಮದ ಸದಸ್ಯರ ಜೊತೆ ಸಂತಸದಿಂದ ಉಭಯ ಕುಶಲೋಪರಿಯೊಂದಿಗೆ ಕಾರ್ಯಕ್ರಮ ಮಾಡಿಬರುವ ಸಂಪ್ರದಾಯ ರೂಢಿಸಿಕೊಂಡಿರುವುದು ಹೆಮ್ಮೆಯ ವಿಷಯ ಎನ್ನಬಹುದು.