ಕಾರವಾರ: ಮಾಜಿ ಸೈನಿಕರ ಅಂಶದಾಯಿ ಯೋಜನೆಯಡಿಯಲ್ಲಿ ಅರಗಾ ಆಸ್ಪತ್ರೆಯಲ್ಲಿ ತಾತ್ಕಾಲಿಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ECHS ಅರಗಾ, ಕಾರವಾರದ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಶಿಯನ್ ಮತ್ತು ಡೆಂಟಲ್ ಟೆಕ್ನಿಶಿಯನ್ ತಲಾ ಒಂದು ಹುದ್ದೆಗಳನ್ನು ತಾತ್ಕಾಲಿಕವಾಗಿ ಒಂದು ವರ್ಷದವರೆಗೆ ನೇಮಿಸಲಾಗುವದು.

ಅವಶ್ಯಕ್ಕನುಸಾರವಾಗಿ ಮತ್ತೋಂದು ವರ್ಷಕ್ಕೆ ವಿಸ್ತರಿಸಲಾಗುವುದು. ಮಾಜಿ ಸೈನಿಕರು ಹಾಗೂ ಆಸಕ್ತ ಅಭ್ಯರ್ಥಿಗಳು ತಮ್ಮ ವೈಯಕ್ತಿಕ ವಿವರಗಳೊಂದಿಗೆ ನವೆಂಬರ 30 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. The officer-in-charge, station Headquarters Cell, INS kadamba, PO-Naval Base, karawar-581308ಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ 08382-231401,263632 ಹಾಗೂ www.echs.gov.in ಯನ್ನು ಸಂಪರ್ಕಿಸಬಹುದು. ಡಿಸೆಂಬರ ಮೊದಲ ವಾರದಲ್ಲಿ ಸಂದರ್ಶನ ಏರ್ಪಡಿಸಲಾಗುವದು ಮತ್ತು ಒಂದು ವೇಳೆ ಮಾಜಿ ಸೈನಿಕ ಅಭ್ಯರ್ಥಿಗಳು ಲಭ್ಯ ಇರದೇ ಇದ್ದಲ್ಲಿ ಇತರ ಅಬ್ಯರ್ಥಿಗಳಿಗೆ ಆಧ್ಯತೆ ನೀಡಲಾಗುವದು ಎಂದು ಜಿಲ್ಲಾ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪನಿರ್ದೇಶಕಿ ಕಮಾಂಡರ್ ಇಂದುಪ್ರಭಾ ವಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES  ಡಿ.26ರಂದು ಸೇವಂತಿಗೆ ಪುಷ್ಪ ಪ್ರದರ್ಶನ ಮತ್ತು ಮಾರಾಟ ಮೇಳ.