ಲಂಡನ್: 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾದ ಕೈಚಳಕದ ವಿಷಯದಲ್ಲಿ ಫೇಸ್ ಬುಕ್ ಮೇಲೂ ಈಗಾಗಲೇ ಆರೋಪ ಕೇಳಿಬಂದಿದೆ. ಈ ಬೆನ್ನಲ್ಲೇ ಫೇಸ್ ಬುಕ್ ನಲ್ಲಿ 270 ಮಿಲಿಯನ್ ನಕಲಿ ಖಾತೆಗಳು ಇವೆ ಎಂದು ಸಂಸ್ಥೆ ಒಪ್ಪಿಕೊಂಡಿದೆ.
ಈ ವಾರ ತನ್ನ ಮೂರನೇ-ತ್ರೈಮಾಸಿಕ ಲಾಭಾಂಶವನ್ನು ಘೋಷಿಸಿದ್ದು, ಈ ವರದಿಯಲ್ಲಿ ಈ ಹಿಂದೆ ತಾನು ಅಂದಾಜಿಸಿದ್ದಕ್ಕಿಂತ ಹೆಚ್ಚು ನಕಲಿ ಖಾತೆಗಳಿವೆ ಎಂದು ತಿಳಿಸಿರುವುದನ್ನು ದಿ ಟೆಲಿಗ್ರಾಫ್ ವರದಿ ಮಾಡಿದ್ದು ಜುಲೈ ನಲ್ಲಿ ಅಂದಾಜಿಸಿದ್ದಕ್ಕಿಂತ ಶೇ.1 ರಷ್ಟು ನಕಲಿ ಖಾತೆಗಳಿವೆ ಎಂದು ಫೇಸ್ ಬುಕ್ ಹೇಳಿದೆ.
ಇನ್ನು ಶೇ.10 ರಷ್ಟು ಖಾತೆಗಳು ಅಸಲಿ ಖಾತೆ ಹೊಂದಿರುವ ವ್ಯಕ್ತಿಗಳದ್ದೇ ಮತ್ತೊಂದು ಖಾತೆಯಾಗಿರುತ್ತದೆ 2.1 ಬಿಲಿಯನ್ ಪೈಕಿ ಶೇ.13 ರಷ್ಟು ಅಕ್ರಮ ಖಾತೆಗಳಾಗಿವೆ ಎಂದು ಫೇಸ್ ಬುಕ್ ತಿಳಿಸಿದೆ.