ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಟಗರು ಚಿತ್ರದ ಟೀಸರ್ ಬಿಡುಗಡೆಗೆ ದಿನಗಣನೆ ಆರಂಭವಾಗಿದ್ದು, ಟೀಸರ್ ಬಿಡುಗಡೆಗೆ ಈಗಾಗಲೇ ವೇದಿಗೆ ಹಾಗೂ ಅತಿಥಿಗಳ ಪಟ್ಟಿ ಸಿದ್ಧವಾಗಿದೆ.

ನವೆಂಬರ್.7ರಂದು ನಗರದ ಟೌನ್ ಹಾಲ್ ನಲ್ಲಿ ಟಗರು ಟೀಸರ್ ಬಿಡುಗಡೆ ಕಾರ್ಯಕ್ರಮ ನಡೆಯಲಿದ್ದು, ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಜಿ.ಆರ್. ವಿಶ್ವನಾಥ್, ಸಚಿವ ಡಿ.ಕೆ.ಶಿವಕುಮಾರ್ ಅವರು ಮುಖ್ಯ ಅತಿಥಿಗಳಾಗಲಿದ್ದಾರೆ. ಇದಲ್ಲದೆ ಸ್ಟಾರ್ ಸೆಲೆಬ್ರಿಟಿಗಳಾದ ಪುನೀತ್ ರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾಹ್ ಹಾಗೂ ರಕ್ಷಿತ್ ಶೆಟ್ಟಿ ಕೂಡ ಹಾಜರಿರಲಿದ್ದಾರೆಂದು ಚಿತ್ರದ ಮೂಲಗಳು ತಿಳಿಸಿವೆ.

RELATED ARTICLES  ಪ್ರತ್ಯೇಕ ಧರ್ಮ: ಪರಿಣತರ ಸಮಿತಿ ವಿಸರ್ಜನೆಗೆ ಆಗ್ರಹ

ಟಗರು ಚಿತ್ರದ ಟೀಸರ್ ನ್ನು ಶಿವಣ್ಣ ಅವರ ಅಭಿಮಾನಿಗಳಿಂದಲೇ ಬಿಡುಗಡೆಯಾಗುತ್ತಿದ್ದು, ಶಿವು ಅಡ್ಡ ಹಾಗೂ ರಾಜ್ ಡೈನಸ್ಟಿ ಎಂಬ ಎರಡು ಗುಂಪುಗಳು ಬಿಡುಗಡೆ ಮಾಡಲಿವೆ.
ಟಗರು ಚಿತ್ರವನ್ನು ದುನಿಯಾ ಸೂರಿ ನಿರ್ದೇಶನ ಮಾಡುತ್ತಿದ್ದು, ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆ ಅವರದೇ ಆಗಿದೆ. ಮಹೇಂದ್ರ ಸಿಂಹ ಅವರು ಛಾಯಾಗ್ರಹಣ ಮಾಡಿದರೆ, ಗೋಧಿ ಬಣ್ಣ ಸಾಧಾರಣ ಮೈಕಟ್ಟು ಖ್ಯಾತಿಯ ಚರಣ್ ರಾಜ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.

RELATED ARTICLES  ಅನಂತಕುಮಾರ್ ಅಂತಿಮ ಯಾತ್ರೆ ಆರಂಭ: ಸಕಲ ಸರಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ.