ನವದೆಹಲಿ: ಸುಗಮ ಉದ್ದಿಮೆಯಿಂದಾಗಿ ಜೀವನವೂ ಸುಗಮವಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.ಇಂಡಿಯಾಸ್ ಬ್ಯುಸಿನೆಸ್ ರಿಫಾರ್ಮ್ಸ್ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಸುಗಮ ಉದ್ದಿಮೆ ಸುಗಮ ಜೀವನದತ್ತ ನಮ್ಮನ್ನು ಕೊಂಡೊಯ್ಯುತ್ತದೆ ಎಂದಿದ್ದಾರೆ. ಇದೇ ವೇಳೆ ವಿಶ್ವ ಬ್ಯಾಂಕ್ ನ ಇತ್ತೀಚಿನ ವರದಿಯಲ್ಲಿ ಭಾರತಾದ ಆರ್ಥಿಕತೆ ಕುರಿತು ಉತ್ತಮ ಅಭಿಪ್ರಾಯ ವ್ಯಕ್ತವಾಗುವ ನಿಟ್ಟಿನಲ್ಲಿ ಕೆಲಸ ಮಾಡಿದವರನ್ನು ಮೋದಿ ಅಭಿನಂದಿಸಿದ್ದಾರೆ.

RELATED ARTICLES  "11ರಂದು ದೇವಳಮಕ್ಕಿ ರಥೋತ್ಸವ"

ದೇಶದಲ್ಲಿ ಬದಲಾವಣೆ ತರಬೇಕು ಹಾಗೂ ದೇಶದ 1.25 ಬಿಲಿಯನ್ ಜನತೆಗೆ ಬದಲಾವಣೆ ಗೋಚರಿಸುವಂತೆ ಮಾಡುವುದೇ ನನ್ನ ಜೀವನದ ಗುರಿ ಎಂದು ಪ್ರಧಾನಿ ಮೋದಿ ಹೇಳಿದ್ದು, ಭಾರತ ಯುವಜನತೆಯ ದೇಶವಾಗಿದ್ದು, ಉದ್ಯೋಗ ಸೃಷ್ಟಿಸುವುದು ಅತ್ಯುತ್ತಮ ಅವಕಾಶವೂ ಹೌದು, ಸವಾಲಿನ ಸಂಗತಿಯೂ ಹೌದು ಎಂದು ಅಭಿಪ್ರಾಯಪಟ್ಟಿದ್ದಾರೆ.

ವಿಶ್ವಬ್ಯಾಂಕ್ ನಲ್ಲಿ ಕಾರ್ಯನಿರ್ವಹಿಸುತ್ತಿರುವವರು ಭಾರತದ ರ್ಯಾಂಕಿಂಗ್ ಏರಿಕೆಯ ಬಗ್ಗೆ ಅನುಮಾನ ಹೊಂದಿದ್ದರು. ಆದರೆ ಕೇವಲ 3 ವರ್ಷಗಳ ಅವಧಿಯಲ್ಲಿ ನಾವು 42 ಶ್ರೇಣಿಗಳನ್ನು ಏರಿಕೆ ಕಂಡಿದ್ದು, 100 ನೇ ಸ್ಥಾನಕ್ಕೆ ಜಿಗಿದಿದ್ದೇವೆ. ಇಷ್ಟಕ್ಕೇ ತೃಪ್ತಿ ಪಡದೇ ಮತ್ತಷ್ಟು ಕೆಲಸಗಳನ್ನುಮಾಡುತ್ತೇವೆ. ಭಾರತ ಜ್ಞಾನ ಆಧಾರಿತ, ಕೌಶಲ್ಯ ಅಭಿವೃದ್ಧಿ ಹಾಗೂ ತಂತ್ರಜ್ಞಾನ ಚಾಲಿತ ಆರ್ಥಿಕತೆಯಾಗಲಿದೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗಷ್ಟೇ ವಿಶ್ವ ಬ್ಯಾಂಕ್ ಪ್ರಕಟಿಸಿದ್ದ ಉದ್ದಿಮೆ ಸ್ನೇಹಿ ರಾಷ್ಟ್ರಗಳ ಪೈಕಿಯ ವರದಿಯಲ್ಲಿ ಭಾರತದ ಶ್ರೇಣಿ 30 ಸ್ಥಾನಗಳಷ್ಟು ಏರಿಕೆ ಕಂಡಿತ್ತು.

RELATED ARTICLES  ಬೀರಣ್ಣನಾಯಕ ಮೊಗಟಾರವರಿಗೆ ಸನ್ಮಾನ