ಹೊನ್ನಾವರ- ಯಕ್ಷಮಿತ್ರಕೂಟ ಹೊಸಾಕುಳಿ ಮತ್ತು ಅಖಿಲ ಭಾರತ ಕಿಸಾನ ಸಂಘ ಕಾರವಾರ ಇವರ ಸಹಯೋಗದಲ್ಲಿ ಏಳನೆವರ್ಷದ ತಾಳಮದ್ದಲೆ ಮತ್ತು ಸನ್ಮಾನ ಕಾರ್ಯಕ್ರಮ ಹೊಸಾಕುಳಿಯ ಉಮಾ ಮಹೇಶ್ವರ ದೇವಾಲಯದಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ನಿವೃತ್ತ ಡಿ.ಎಪ್.ಓ ನಾಗರಾಜ ನಾಯಕ ತೊರ್ಕೆ ಮಾತನಾಡಿ, ಡಾ.ಎಮ್.ಪಿ ಕರ್ಕಿಯವರು ಶಾಸಕರಾದ ಅವದಿಯಲ್ಲಿ ಮರಾಕಲ್ ಕುಡಿಯುವ ನೀರನ್ನು ಕುಮಟಾ ಹೊನ್ನಾವರ ಜನತೆಗೆ ಅನುಕೂಲ ಮಾಡಿದ್ದಾರೆ. ಇಂತಹ ಹಲವೂ ಜನಪರ ಯೋಜನೆಗಳು ರೂಪಿಸಿಕೊಟ್ಟಿದ್ದಾರೆ, ಆದರೆ 1994 ನಂತರ ಯಾವುದೆ ಯೋಜನೆಗಳು ಬಾರದೆ ಇರುವುದು ಬೇಸರದ ಸಂಗತಿ ಎಂದರು..
ಈ ಸಂದರ್ಭದಲ್ಲಿ ಮಾಜಿ ಶಾಸಕ ಡಾ.ಎಮ್.ಪಿ.ಕರ್ಕಿಯವರನ್ನ ಸನ್ಮಾನಿಸಲಾಯಿತು. ನಂತರ ಮಾತನಾಡಿದ ಅವರು ನಾನು ಯಾವಾಗಲೂ ಸುಳ್ಳು ಹೇಳಿ ರಾಜಕಾರಣ ಮಾಡಿಲ್ಲಾ ನನಗೆ ಶಾಸಕರಾಗಲೂ ಹೊಸಾಕುಳಿ ಗ್ರಾಮ ಮುಖ್ಯ ಕಾರಣ ಎಂದರು.
ಹೊಸಾಕುಳಿ ಗ್ರಾಮ ಪಂಚಾಯತ ಅಧ್ಯಕ್ಷ ಸುರೇಶ ಶೆಟ್ಟಿ ಮಾತನಾಡಿ, ಡಾ.ಎಮ್.ಪಿ. ಕರ್ಕಿಯವರ ಸನ್ಮಾನಿಸುವ ನನ್ನ ಅಧ್ಯಕ್ಷ ಅವದಿಯಲ್ಲಿ ಅವಕಾಶ ಸಿಕ್ಕಿರುವುದು ನನ್ನ ಸೌಬಾಗ್ಯ ಎಂದರು..
ಅಧ್ಯಕ್ಷತೆ ವಹಿಸಿದ ಭಾರತೀಯ ಕಿಸಾನ ಸಂಘದ ಅಧ್ಯಕ್ಷ ಶಿವರಾಮ ಗಾಂವಕರ ಮಾತನಾಡಿ, ಡಾ.ಎಮ್.ಪಿ. ಕರ್ಕಿಯವರು ನಮಗಾಗಿ ಬದುಕದೆ ಸಮಾಜಕ್ಕಾಗಿ ಬದುಕುತ್ತಿರುವ ಏಕೈಕ ವ್ಯಕ್ತಿ ಎಂದ ಅವರು ನಮ್ಮ ಜಿಲ್ಲೆಯಲ್ಲಿನ ಪ್ರಾಮಾಣಿಕ ರಾಜಕಾರಣಿ ಡಾ.ಎಮ್.ಪಿ. ಕರ್ಕಿಯವರು ಎಂದರು..
ಈ ಸಂದರ್ಭದಲ್ಲಿ ಮಾಜಿ ಶಾಸಕ ದಿನಕರ ಶೆಟ್ಟಿ, ಹಿರಿಯ ಪತ್ರಕರ್ತ ಜಿ.ಯು. ಭಟ್ಟ, ಯಶೋದರ ನಾಯ್ಕ, ಸೂರಜ್ ನಾಯ್ಕ ಸೋನಿ, ಡಾ ಜಿ.ಜಿ. ಹೆಗಡೆ, ಸುರೇಶ ಶೆಟ್ಟಿ, ಶಂಭು ಭಟ್ಟ ಕಡತೋಕಾ, ಕೃಷ್ಣಮೂರ್ತಿ ಭಟ್ಟ, ಶಿವರಾಮ ಭಟ್ಟ, ಪ್ರಕಾಶ ಹೆಗಡೆ, ಸುಬ್ರಹ್ಮಣ್ಯ ಭಟ್ಟ, ಎಸ್.ಜಿ. ಭಟ್ಟ ಮುಂತಾದವರು ಇದ್ದರು..