ಕುಮಟಾ : ಕರ್ನಾಟಕ ರಕ್ಷಣಾ ವೇದಿಕೆ ಇದು ಕರ್ನಾಟಕದ ನೆಲ,ಜಲ,ಭಾಷೆಗಳಿಗೆ ಅನ್ಯಾಯವಾದಲ್ಲಿ ತನ್ನ ಒಕ್ಕೂರಳಿನ ಧ್ವನಿಯ ಮೂಲಕ ಸಮಸ್ಯೆ ಬಗೆಹರಿಸುತ್ತದೆ. ಅತಂಹ ಸಂಘಟನೆಯೊಂದು ಕುಮಟಾದಲ್ಲಿ ನೆಲೆಯೂರಿದೆ. ಹೌದು ಕುಮಟಾ ತಾಲೂಕಿನ ಖಾಸಗಿ ಹೋಟೆಲೊಂದರಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರದ ನೇತೃತ್ವದಲ್ಲಿ ಕುಮಟಾ ತಾಲೂಕಾ ರಕ್ಷಣಾ ವೇದಿಕೆ ನಿರ್ಮಾಣವಾಗಿದ್ದು ಈ ಸಂಘಟನೆಯ ತಾಲೂಕಾ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ ಉದ್ಘಟನೆಯನ್ನು ಸಂಘಟನೆಯ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ದೀಪ ಬೆಳಗಿಸುವ ಮೂಲಕ ನೆರವೆರಿಸಿದ್ರು. ಈ ವೇಳೆ ತಾಲೂಕಾಧ್ಯಕ್ಷರಾಗಿ ತಿಮ್ಮಪ್ಪ ನಾಯ್ಕ ಆಯ್ಕೆ ಆದ್ರೆ ಉಪಾಧ್ಯಕ್ಷರಾಗಿ ಲಂಬೊಧರ ಅವರನ್ನು ನೇಮಕ ಮಾಡಲಾಯಿತು. ಈ ವೇಳೆ ಅನೇಕರು ಸಂಘಟನೆಯನ್ನು ಸೇರಿಕೊಂಡರು. ಈ ವೇಳೆ ಮಾತನಾಡಿದ ಭಾಸ್ಕರ ಪಟಗಾರ ನಮ್ಮ ಕರವೇ ಸಂಘಟನೆ ನಮ್ಮ ರಾಜ್ಯದ ನೆಲ.ಜಲ.ಬಾಷೆಗಾಗಿ ಧ್ವನಿ ಎತ್ತುತಲೆ ಬಂದಿದೆ. ಅನ್ಯ ಭಾಷಿಗರಿಂದ ನಮ್ಮ ಕನ್ನಡಿಗರಿಗೆ ತೊಂದರೆಯಾದ ವೇಳೆ ನಮ್ಮ ಸಂಘಟನೆ ಹುಟ್ಟಿಕೊಂಡಿದೆ ಎಂದರು..
ಉದ್ಯಮಿಗಳಾದ ಚಂದ್ರಶೇಖರ ಪಟಗಾರ ಜಿಲ್ಲಾ ಉದ್ಯಮಿಗಳ ಘಟಕದ ಅಧ್ಯಕ್ಷನಾಗಿ ಆಯ್ಕೆ ಮಾಡಲಾಗಿದೆ ಈ ವೇಳೆ ಮಾತನಾಡಿದ ಅವರು ನಾನೂ ಗಾರ್ಮಂಟ್ಸ ಮೂಲಕ ಅನೇಕರಿಗೆ ಉದ್ಯೂಗವಕಾಶವನ್ನು ನೀಡಿದ್ದೆನೆ. ಅದರಂತೆ ಮುಂದಿನ ದಿನದಲ್ಲಿ ಉದ್ಯೋಗ ಮಾಡುವರವರಿಗೆ ಸಹಕಾರಿಯಾಗುವ ಭರವಸೆ ನೀಡಿದ್ರು…
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಯುವಾಧ್ಯಕ್ಷ ನಾಗರಾಜ ನಾಯ್ಕ,ಜಿಲ್ಲಾ ಉಪಾಧ್ಯಕ್ಷ ಅರುಣ ಹರಕಡೆ,ಹೊನ್ನಾವರ ತಾಲೂಕಾಧ್ಯಕ್ಷ ಮಂಜುನಾಥ ಗೌಡ ಸೇರಿದಂತೆ ಅನೇಕ ಪಧಾಧಿಕಾರಿಗಳು ಉಪಸ್ಥಿತರಿದ್ದರು..