ಕಾರವಾರ: ಪರಿಸರ ಕಾರ್ಯಕ್ರಮದ ಅಡಿಯಲ್ಲಿ ಕೈಗಾ ಅಣು ವಿದ್ಯುತ್ ಸ್ಥಾವರವು ಜನವರಿ 21ರಂದು ‘ಕೈಗಾ ಪಕ್ಷಿ’ ಸಮೀಕ್ಷೆಯನ್ನು ಆಯೋಜಿಸಿದೆ. ಇದು ‘ಕೈಗಾ ಬರ್ಡ್ ಮ್ಯಾರಥಾನ್’ನ 8ನೇ ಆವೃತ್ತಿ.

‘ಕೈಗಾ ಅಣು ಸ್ಥಾವರದ ವಲಯ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿನ ಜೀವ ವೈವಿಧ್ಯತೆಯ ವೈಜ್ಞಾನಿಕ ಅಧ್ಯಯನ ಸಲುವಾಗಿ ಏಳು ವರ್ಷಗಳಿಂದ ಪಕ್ಷಿ ಸಮೀಕ್ಷೆಯನ್ನು ಆಯೋಜಿಸಲಾಗುತ್ತಿದೆ’ ಎಂದು ಕೈಗಾ ಪರಿಸರ ಕಾರ್ಯಕ್ರಮದ ಸದಸ್ಯ ಜಿ.ಮೋಹನದಾಸ್‌ ಹೇಳಿಕೆಯಲ್ಲಿ ತಿಳಿಸಿದ್ದಾರೆ.

RELATED ARTICLES  ಉತ್ತರಕನ್ನಡದಲ್ಲಿ ಸ್ವಂತ ಉದ್ಯೋಗ ಹುಡುಕುವವರಿಗೆ ಶುಭ ಸುದ್ದಿ.

‘2011ರಲ್ಲಿ ಆರಂಭಗೊಂಡ ಸಮೀಕ್ಷೆಯಲ್ಲಿ ವಿವಿಧ ಜಾತಿಯ 142 ಪಕ್ಷಿಗಳು ಪತ್ತೆಯಾಗಿದ್ದವು. 7ನೇ ಆವೃತ್ತಿಯ ಸಮೀಕ್ಷೆಯಲ್ಲಿ ಅವುಗಳ ಸಂಖ್ಯೆ 276 ಆಯಿತು. ಯಶಸ್ಸು ಪಡೆದ ಈ ಸಮೀಕ್ಷೆಯಲ್ಲಿ ಪ್ರತಿ ವರ್ಷ ದಕ್ಷಿಣ ಭಾರತದ ನಾನಾ ಭಾಗಗಳಿಂದ ನೂರಕ್ಕೂ ಅಧಿಕ ಪಕ್ಷಿ ವೀಕ್ಷಕರು ಭಾಗವಹಿಸಲಿದ್ದಾರೆ’ ಎಂದರು.

RELATED ARTICLES  ಅಕ್ಟೊಬರ್ ೬ ರಿಂದ ೧೨ರ ವರೆಗೆ ತಾಳಮದ್ದಳೆ ಸಪ್ತಾಹ

ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಬಯಸುವವರು [email protected] ಗೆ ಇದೇ 20ರ ಒಳಗಾಗಿ ಇ–ಮೇಲ್ ಕಳುಹಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.