ನವದೆಹಲಿ: ನೋಟು ನಿಷೇಧ ಬಳಿಕ ಬರೊಬ್ಬರಿ 17 ಸಾವಿರ ಕೋಟಿ ರು. ಹಣ ‘ನಾಮ್ ಕೇ ವಾಸ್ತೇ’ (ಹೆಸರಿಗಷ್ಟೇ ಇರುವ ಕಂಪನಿ) ಕಂಪನಿಗಳಿಂದ ಬ್ಯಾಂಕ್ ಖಾತೆಗಳಿಗೆ ಠೇವಣಿಯಾಗಿದೆ ಎಂದು ಕೇಂದ್ರ ಸರ್ಕಾರದ ದತ್ತಾಂಶಗಳು ಹೇಳುತ್ತಿವೆ.

ಇತ್ತೀಚೆಗಷ್ಟೇ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯಕ್ಕೆ ದೇಶದ 56 ಬ್ಯಾಂಕ್ ಗಳು ನೀಡಿದ ಮಾಹಿತಿಯನ್ವಯ ದೇಶದಲ್ಲಿ ಸುಮಾರು 2.24 ಲಕ್ಷ ಶಂಕಿತ ಬೇನಾಮಿ ಕಂಪನಿಗಳಿವೆ ಎಂದು ತಿಳಿದುಬಂದಿದ್ದು, ಸುಮಾರು 35 ಸಾವಿರ ಕಂಪನಿಗಳಿಗೆ ಸಂಬಂಧಿತ 58 ಸಾವಿರ ಬ್ಯಾಂಕ್ ಖಾತೆಗಳ ವಿವರಗಳನ್ನು ಕೇಂದ್ರ ಸರ್ಕಾರಕ್ಕೆ ಬ್ಯಾಂಕ್ ಗಳು ನೀಡಿದ್ದವು. ಈ ಕಂಪನಿಗಳಿಂದ ಸುಮಾರು 17 ಸಾವಿರ ಕೋಟಿ ರುಪಾಯಿಗಳು ಬ್ಯಾಂಕ್ ಖಾತೆಗೆ ಜಮೆಯಾಗಿದೆ.

RELATED ARTICLES  ಲಾರಿ ಚಾಲಕನಂತೆ ಬಂದ ಪೋಲೀಸ್ ಅಧಿಕಾರಿ : ಭ್ರಷ್ಟ ಅಧಿಕಾರಿಗಳು ಬಲೆಗೆ..! : ರವಿ ಚನ್ನಣ್ಣನವರ್ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ

ಸಚಿವಾಲಯ ಹೊರಡಿಸಿರುವ ಪ್ರಕಟಣೆಯಲ್ಲಿ ಒಂದು ಬೇನಾಮಿ ಕಂಪನಿ 2,134 ಬ್ಯಾಂಕ್ ಖಾತೆಗಳನ್ನು ಹೊಂದಿತ್ತು ಎಂಬ ಅಂಶ ಬೆಳಕಿಗೆ ಬಂದಿದ್ದು, ಆರಂಭದಲ್ಲಿ ಕನಿಷ್ಠ ಬ್ಯಾಲೆನ್ಸ್ ಇಲ್ಲದೆ ತೆರೆಯಲಾದ ಈ ಕಂಪನಿಗೆ ಸಂಬಂಧಿತ ಖಾತೆಯಲ್ಲಿ ನೋಟು ನಿಷೇಧ ಬಳಿಕ ನಿಷೇಧಿತ 500 ಮತ್ತು 1000 ನೋಟುಗಳ ಸುಮಾರು 2,484 ಕೋಟಿ ರು. ವಹಿವಾಟು ನಡೆದಿದೆ ಎಂಬ ಅಂಶ ಬೆಳಕಿಗೆ ಬಂದಿದೆ. ಪ್ರಸ್ತುತ ಈ ಶಂಕಿತ ಬೇನಾಮಿ ಕಂಪನಿಗಳಿಗೆ ಸಂಬಂಧಿಸಿದ ಬ್ಯಾಂಕ್ ಖಾತೆಗಳನ್ನು ಕೇಂದ್ರ ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದ್ದು, ಈ ಸಂಬಂಧ ವಿಚಾರಣೆ ಮುಂದುವರೆಸಿದೆ.

RELATED ARTICLES  ರವಿ ಬೆಳಗೆರೆ ಕನ್ನಡದ ಸನ್ನಿ ಲಿಯೋನ್: ಅಗ್ನಿ ಶ್ರೀಧರ್