ಮುಳ್ಳೆರ್ಯ ಹವ್ಯಕ ಮಂಡಲ ಚಂದ್ರಗಿರಿ ವಲಯ ಬಜೆ ಘಟಕದ ಬಳ್ಳಮೂಲೆ ಗೋವಿಂದ ಭಟ್ಟ ಅವರ ಗದ್ದೆಯಲ್ಲಿ ” ಭತ್ತದ ಭಕ್ತಿ – ರಾಮನೈವೇದ್ಯ ” ಕ್ಕಾಗಿ ಮಾಡಿದ ಭತ್ತದ ಪೈರಿನ ಕೊಯ್ಲು ಇಂದು 05.11.2017 ರಂದು ಜರಗಿತು.

* ಘಟಕ ಗುರಿಕ್ಕಾರರಾದ ಬಜೆ ರಾಮಚಂದ್ರ ಭಟ್ ಅವರು ರಾಮನೈವೇದ್ಯ ಬಗ್ಗೆ ಮಾಹಿತಿಗಳನ್ನಿತ್ತು ಪ್ರಾರ್ಥನೆ ಮಾಡಿದರು.

RELATED ARTICLES  ಭಟ್ಕಳ ತಾಲೂಕಾ ಕಸಾಪ ದಿಂದ ಷರೀಫ್ ಅವರಿಗೆ ಅಭಿನಂದನೆ

* ಗುರುವಂದನೆ ಮಾಡಿ ಕಾಟವು ಪ್ರಾರಂಭಿಸಲಾಯಿತು.

* ಈ ಪವಿತ್ರ ಕಾರ್ಯದಲ್ಲಿ ಗುರಿಕ್ಕಾರರಾದ ಮಹಾಲಿಂಗೇಶ್ವರ ಭಟ್ ಪರಯಂಗೋಡು, ವಲಯ ಕಾರ್ಯದರ್ಶಿ ರಾಜಗೋಪಾಲ ಕೈಪಂಗಳ, ರಾಜ ಕುಂಜತ್ತೋಡಿ, ತ್ರಿಪುರ ಸಂಯುಕ್ತ, ಶ್ಯಾಮ್ ಪ್ರಸಾದ್ ಕೈಪಂಗಳ, ಬಜೆ ವಿಷ್ಣು ಭಟ್, ಸರಸ್ವತಿ ಬಳ್ಳಮೂಲೆ, ವೃಂದಾ ಬಳ್ಳಮೂಲೆ, ಬಾಲಕೃಷ್ಣ, ಸುಹಾಸ್ ಇವರು ಭಾಗವಹಿಸಿದರು.

RELATED ARTICLES  ಡಿಸಿಎಮ್ ಡಾ. ಸಿ.ಎನ್. ಅಶ್ವಥ್ನಾರಾಯಣ್'ಗೆ ಹವ್ಯಕದಿಂದ ಅಭಿನಂದನಾ ಸಮಾರಂಭ

* ನೀರ್ಚಾಲಿನಲ್ಲಿ ದಿನಾಂಕ 07.11.2017 ರಂದು ಜರಗಲಿರುವ ಶ್ರೀ ಗುರುಭಿಕ್ಷಾ ಸಮಾರಂಭದ ದಿನ ಭತ್ತದ ಭಕ್ತಿ – ರಾಮನೈವೇದ್ಯ ಭತ್ತವನ್ನು ಸಮರ್ಪಣೆ ಮಾಡಲು ತೀರ್ಮಾನಿಸಲಾಗಿದೆ.