ಹೊನ್ನಾವರ : ಸರ್ಕಾರದ ಜನಪರ ಯೋಜನೆಗಳನ್ನು ಜನತೆಗೆ ತಲುಪಿಸುವ ದೃಷ್ಟಿಯಿಂದ ಹಾಗೂ ಚುನಾವಣಾ ಪೂರ್ವ ಸಿದ್ಧತೆಯ ನಿಟ್ಟಿನಲ್ಲಿ ಮನೆ ಮನೆಗೆ ಕಾಂಗ್ರೆಸ್ ಶೀರ್ಷಿಕೆಯಡಿ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಮನೆಮನೆಗೆ ತೆರಳಿ ಕಾಂಗ್ರೆಸ್‌ನ ಸಾಧನೆಯನ್ನು ಜನತೆಗೆ ತಿಳಿಸುವ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಿದ್ದಾರೆ ಎನ್ನಬಹುದು.
ಈ ನಿಟ್ಟಿನಲ್ಲಿ ಕುಮಟಾ ಹಾಗೂ ಹೊನ್ನಾವರ ತಾಲೂಕಿನಲ್ಲಿ ಈ ಕಾರ್ಯಕ್ರಮ ಭರದಿಂದ ಸಾಗಿದೆ . ಇದು ಇತರ ಪಕ್ಷಗಳಲ್ಲಿ ತಳಮಳ ಹುಟ್ಟಿಸಿದೆ ಎನ್ನಲಾಗುತ್ತಿದೆ.
ಕುಮಟಾ ಹೊನ್ನಾವರ ಶಾಸಕರು ಮತ್ತು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಮತಿ ಶಾರದಾ ಶೆಟ್ಟಿ ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ . ಇಂದು ಹಳದಿಪುರದ ಪಳ್ಳಿಕೇರಿಯಲ್ಲಿ ಈ ಕಾರ್ಯಕ್ರಮವನ್ನು ಶಾಸಕರು ತೆರಳಿ ಯಶಸ್ವಿಯಾಗಿ ನಡೆಸಿದರು .
ಹಳದಿಪುರದ ಕಾರ್ಯಕರ್ತರು ಹಾಗೂ ಸಾರ್ವಜನಿಕರೊಂದಿಗೆ ತೆರಳಿದ ಶಾಸಕರು ಮನೆಮನೆಗೆ ತೆರಳ ಸರಕಾರದ ಸಾಧನೆಯನ್ನು ತಿಳಿಸುವ ಕೆಲಸ ಮಾಡಿದರು .
ಒಟ್ಟಾರೆ ಶಾಸಕರು ಹಾಗೂ ಕಾರ್ಯಕರ್ತರು ಈ ಅಭಿಯಾನದ ಮೂಲಕ ಚುನಾವಣೆಯ ಪೂರ್ವ ಸಿದ್ಧತೆ ನಡೆಸಿದರು . ಈ ಬಗ್ಗೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು ಶಾಸಕರ ಮುಖದಲ್ಲಿ ನಗು ಮೂಡಿಸಿತು . ಈ ಸಂದರ್ಭದಲ್ಲಿ ಹಳದೀಪುರ ಗ್ರಾ.ಪಂ ಸದಸ್ಯ ವಿನಾಯಕ ಶೇಟ್,ಉದ್ಯಮಿ ದಾಮೋದರ ನಾಯ್ಕ ಹಾಗೂ ಇನ್ನಿತರ ಸದಸ್ಯರು ಹಾಜರಿದ್ದರು.