ಹೊನ್ನಾವರ: ತಾಲೂಕಿನ ಬಾಳೆಗದ್ದೆಯಲ್ಲಿರುವ ಭೈರವೇಶ್ವರ ದೇವಸ್ಥಾನದ ಹತ್ತಿರದಲ್ಲಿ ಕಲರ್ ಫುಲ್ ಕ್ರಿಯೇಷನ್ ಹೆಸರಿನ ಇಂಡಸ್ಟ್ರಿಯೊಂದು ಇಂದು ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಕಲಾ ಶಾಸ್ತ್ರಿಯವರಿಂದ ಉದ್ಘಾನೆಗೊಂಡಿತು. ಶ್ರೀಕಲಾ ಶಾಸ್ತ್ರಿ ಮತ್ತು ಸುಬ್ರಹ್ಮಣ್ಯ ಶಾಸ್ತ್ರಿ ದಂಪತಿಸಮೇತ ರಿಬ್ಬನ್ ಕತ್ತರಿಸುವ ಮೂಲಕ ಇಂಡಸ್ಟ್ರಿ ಉದ್ಘಾಟಿಸಿದರು.
ಪರಿಸರ ಸ್ನೇಹಿ ಕೈ ಚೀಲ ತಯಾರಿಸುವ ಈ ಕಂಪನಿಯು ಪ್ಲಾಸ್ಟಿಕ್ ಮುಕ್ತ ದೇಶಕ್ಕೆ ಸಹಾಯಕಾರಿಯಾಗಿದೆ. ಸ್ಥಳೀಯರ ಸಹಕಾರ ಹಾಗೂ ಹಿತೈಷಿಗಳ ಸಹಕಾರದಿಂದ ಇಂತಹ ಸಂಸ್ಥೆಯನ್ನು ಗ್ರಾಮದ ಯುವಕರು ಇಂದು ಪ್ರಾರಂಭಿಸಿದ್ದಾರೆ. ಇದರಿಂದ ಉದ್ಯೋಗ ಸೃಷ್ಟಿ ಜೊತೆಗೆ ಯುವಕರು ಹಳ್ಳಿ ಬಿಟ್ಟು ಪಟ್ಟಣಕ್ಕೆ ಹೋಗುವುದು ಕಡಿಮೆಯಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ವೆಂಕಟ್ರಮಣ ಹೆಗಡೆ ಹಾಗೂ ಇನ್ನಿತರ ಪ್ರಮುಖರು ಹಾಜರಿದ್ದರು.