ಗೋಕರ್ಣ – ಕೇಂದ್ರದ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಸಹಕಾರದಿಂದ ಗೋಕರ್ಣದ ಹಿತ್ತಲಮಕ್ಕಿ, ದೇವಣ, ದುಬ್ಬನಸಸಿ , ಮೂಲಿಕೇರಿ ಮುಂತಾದ ಭಾಗಗಳಲ್ಲಿ 2ನೇ ಸುತ್ತಿನ ಉಚಿತ ಗ್ಯಾಸ ವಿತರಣಾ ಕಾರ್ಯಕ್ರಮ ದಲ್ಲಿ ಒಂದೇ ದಿನದಲ್ಲಿ 14 ಮನೆಗಳಿಗೆ ಉಚಿತ ಗ್ಯಾಸ ಕಿಟ್ ಗಳನ್ನು ವಿತರಿಸಲಾಯಿತು.
ಈ ಸಂಧರ್ಭದಲ್ಲಿ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರು ಹಾಗೂ ಬಿಜೆಪಿ ಪ್ರಮುಖರೂ ಆದ ನಾಗರಾಜ ನಾಯಕ ತೊರ್ಕೆ ಅವರು ಮಾತನಾಡಿ ತಾಯಂದಿರ ಸ್ವಾಸ್ಥ್ಯ ಮತ್ತು ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ಜಾರಿಯಾದ ಈ ಯೋಜನೆಯು ಜನಸ್ನೇಹಿ ಯೋಜನೆಯಾಗಿದ್ದು ಕಡು ಬಡವರಿಗೆ ಈ ಯೋಜನೆಯಡಿ ಉಜ್ವಲ ಗ್ಯಾಸ ಸೌಲಭ್ಯ ದೊರೆಯುತ್ತಿದೆ. ಈ ಭಾಗಗಳಲ್ಲಿ ಈಗಾಗಲೇ ಮೊದಲ ಸುತ್ತಿನಲ್ಲಿ ಹಲವು ಫಲಾನುಭವಿಗಳಿಗೆ ಉಚಿತ ಗ್ಯಾಸ ಸಂಪರ್ಕ ಕಲ್ಪಿಸಲಾಗಿದ್ದು ಇದೀಗ ಎರಡನೇ ಸುತ್ತಿನ ಗ್ಯಾಸ ವಿತರಣಾ ಕಾರ್ಯಕ್ರಮ ನಡೆಯುತ್ತಿದೆ. ಇನ್ನೂ ಕೆಲವು ಫಲಾನುಭವಿಗಳಿಗೆ ಉಚಿತ ಗ್ಯಾಸ ಸೌಲಭ್ಯ ಕಲ್ಪಿಸುವುದು ಬಾಕಿ ಇದ್ದು ಅದನ್ನು ಕೂಡಾ ಪೂರೈಸುವ ನಿಟ್ಟಿನಲ್ಲಿ ಕಾರ್ಯ ಕೈಗೊಳ್ಳಲಾಗುವುದು. ಈಗಾಗಲೇ 2011 ರ ಪೂರ್ವದಲ್ಲಿ ನೋಂದಣಿಯಾದ ಗ್ಯಾಸ ಸಂಪರ್ಕ ಹೊಂದಿರದ
ಫಲಾನುಭವಿಗಳಿಗೆ ಈ ಯೋಜನೆಯಡಿ ಉಚಿತ ಗ್ಯಾಸ ವಿತರಣೆ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಈಗಾಗಲೇ ಗ್ಯಾಸ ಸಂಪರ್ಕ ಹೊಂದಿರದ ಎಲ್ಲಾ ಬಿಪಿಎಲ್. ಕಾರ್ಡದಾರರಿಗೂ ಈ ಸೌಲಭ್ಯ ದೊರೆಯುತ್ತಿದ್ದು ಆಗಲೂ ತಮ್ಮ ಟ್ರಸ್ಟ್ ವತಿಯಿಂದ ಸಂಪೂರ್ಣ ಸಹಕಾರ ದೊರೆಯುವುದು ಎಂದು ಭರವಸೆ ನೀಡಿದರು.
ಫಲಾನುಭವಿಗಳಾದ ಮೂಲೆಕೇರಿಯ ಭವಾನಿ ವಿ. ನಾಯ್ಕ, ಉತ್ತರಿ ದೇವು ಗೌಡ, ರಮಾ ಎಂ. ಗೌಡ, ತುಳಸಿ ಎನ್. ಗೌಡ, ಭಾಗೀರತಿ ಎಂ. ಗೌಡ, ದೇವಣÀದ ಗಂಗೆ ಎನ್. ಗೌಡ, ಭಾಗೀರತಿ ಮಹಾಬಲೇಶ್ವರ ಗೌಡ. ಮಾದೇವಿ ಎನ್. ಕಡಬ, ದುಬ್ಬನಸಸಿಯ ರತ್ನಾ ಎನ್. ರೆಡ್ನೇಕರ, ರೇವತಿ ಆರ್. ರೆಡ್ನೇಕರ, ಅಂಕಿತಾ ಜಿ. ಬಾಂದೇಕರ, ಪವಿತ್ರಾ ಪಿ. ಪೆಡ್ನೇಕರ, ತಾರಾ ಹೊನ್ನಪ್ಪ ಗೌಡ ಮುಂತಾದವರು ಉಚಿತ ಗ್ಯಾಸ ಸೌಲಭ್ಯವನ್ನು ಪಡೆದುಕೊಂಡರು,
ಈ ಸಂಧರ್ಭದಲ್ಲಿ ಬಿಜೆಪಿ ಮಂಡಲಾಧ್ಯಕ್ಷ ಕುಮಾರ ಮಾರ್ಕಾಂಡೆ, ಹಮ್ಮು ತಿಮ್ಮಪ್ಪ ಗೌಡ, ಮಿರ್ಜಾನ ಶಕ್ತಿಕೇಂದ್ರದ ಅಧ್ಯಕ್ಷ ವೆಂಕಟ್ರಮಣ ಕವರಿ, ಟ್ರಸ್ಟ್ ನ ಕಾರ್ಯದರ್ಶಿ ಅರುಣ ಕವರಿ, ನಾಗೇಶ ಗೌಡ, ಗುರು ಗೌಡ, ಸತೀಶ ನಾಯಕ, ತಿಮ್ಮಣ್ಣ ನಾಯಕ, ದಿಗಂಬರ ಕುರ್ಲೆ, ಗೌರೀಶ ನಾಯಕ, ಗಣಪತಿ, ಹಮ್ಮು ನಾರಾಯಣ ಗೌಡ, ಮಹಾಬಲ ಗೌಡ, ಮಂಕಾಳ ಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.