ಕಾರವಾರ: ತಾಲೂಕಿನ ಮಾಜಾಳಿಯ ರಾಮನಾಥ ದೇವರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಿತು. ದೇವರ ವಿಗ್ರಹ ಹೊತ್ತ ಪಲ್ಲಕ್ಕಿ ಮಾಜಾಳಿಯ ಸಾತೇರಿ ದೇವಸ್ಥಾನಕ್ಕೆ ತೆರಳಿ ಅಲ್ಲಿಂದ ಗ್ರಾಮದಲ್ಲಿ ಸಂಚರಿಸಿತು. ಗ್ರಾಮಸ್ಥರು ಪಲ್ಲಕ್ಕಿಗೆ ಭಕ್ತಿಯಿಂದ ಪೂಜೆ ಸಲ್ಲಿಸಿದರು.
ಇದಾದ ನಂತರ ಗ್ರಾಮದ ಜನರು ಸಂಪ್ರದಾಯದಂತೆ ಬೃಹತ್ ಗಾತ್ರದ ವಾಫರನ್ನ ಗಾಳಿಯಲ್ಲಿ ಬಿಡುವ ಮೂಲಕ ದೇವರಿಗೆ ತಮ್ಮೂರಿನಲ್ಲಿ ಯಾವುದೇ ಸಮಸ್ಯೆ ಆಗದಂತೆ ಬೇಡಿಕೊಂಡರು. ಊರಿನಲ್ಲಿ ರೋಗ ರುಜಿನೆ ಜನರಿಗೆ, ದನ ಕರು ಗಳಿಗೆ ಬರಬರಾದು, ಜೊತೆಗೆ ಉತ್ತಮವಾಗಿ ಮಳೆ ಬೆಳೆಯಾಗಲಿ ಅಂತಾ ವಾಫರ್ ಬಿಡುವುದು ಇಲ್ಲಿನ ಸಂಪ್ರದಾಯ. ಅದರಂತೆ ಒಂದು ವಾರದಿಂದ ತಯಾರಿಸಿದ್ದ ಸಮಾರು ೨೦ ಅಡಿ ಎತ್ತರದ ವಾಫರನ್ನ ಬಿಡಲಾಯಿತು.
ತನ್ನದೇ ಭಕ್ತ ಕೋಟಿ ಹೊಂದಿರುವ ಈ ದೇವಾಲಯದ ಜಾತ್ರೆಗೆ ಅನೇಕರು ಸಾಕ್ಷಿಯಾದರು. ಗೋವಾ ಮಾಹಾರಾಷ್ಟ್ರ ಸೇರಿದಂತೆ ವಿವಿಧ ಭಾಗಗಳಿಂದ ಜನರು ಜಾತ್ರೆಗೆ ಆಗಮಿಸಿದ್ದರು.