ಕಾರವಾರ: ಮಾಜಿ ಸಚಿವ ಹಾಗೂ ಮಾಜಿ ಶಾಸಕ ಆನಂದ್ ಅಸ್ನೋಟಿಕರ್ ಅವರು ರಾಜಕೀಯಕ್ಕೆ ರೀ ಎಂಟ್ರಿ ಆಗ್ಬೇಕು ಅಂತ ವಾಟಾಳ್ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ರಾಘು ನಾಯ್ಕ ಒತ್ತಾಯಿಸಿದ್ದಾರೆ.
ವಿವಿಧ ಸಂಘಟನೆಗಳ ಮುಖಂಡರು ಒಟ್ಟಾಗಿ ನಡೆಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮತನಾಡಿದ ಅವರು, ವಸಂತ ಅಸ್ನೋಟಿಕರ್ ಮಾಡಿದ್ದ ಅಭಿವೃದ್ಧಿ ಕಾರ್ಯಗಳಿಂದಾಗಿ ಅವರ ಸಹಸ್ರ ಅಭಿಮಾನಿಗಳ ಬಳಗ ಅಂದು ಹುಟ್ಟುಕೊಂಡಿತ್ತು. ಅದು ಈಗಲೂ ಕಾರ್ಯಾಚರಿಸುತ್ತಿದೆ. ಆನಂತರ ಅವರ ಪುತ್ರ ಆನಂದ ಅಸ್ನೋಟಿಕರ್ ಶಾಸಕರಾಗಿ, ಸಚಿವರಾಗಿ ಕಾರವಾರ- ಅಂಕೋಲಾ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ಆದರೆ ಅವರು ಕಳೆದ ಚುನಾವಣೆಯಲ್ಲಿ ಸೋಲನನುಭವಿಸಿದ ಬಳಿಕ ನಾಲ್ಕೂವರೆ ವರ್ಷಗಳಿಂದ ರಾಜಕೀಯದಿಂದ ದೂರ ಉಳಿದಿದ್ದಾರೆ. ಆದರೆ ಇಲ್ಲಿನ ಜನತೆಗೆ ಅವರ ಆಗಮನ ಬೇಕಾಗಿದೆ. ಅವರು ರಾಜಕೀಯಕ್ಕೆ ರೀ ಎಂಟ್ರಿ ಕೊಡಬೇಕು. ಅವರು ರಾಜಕೀಯಕ್ಕೆ ರೀ ಎಂಟ್ರಿ ಆಗಲೇಬೇಕು ಎಂದು ಒತ್ತಾಯಿಸಿ ನವೆಂಬರ್ 12 ರಂದು ಆನಂದ್ ಅಸ್ನೋಟಿಕರ್ ಅವರ ಮನೆಯ ಎದುರು ಧರಣಿ ನಡೆಸುತ್ತೇವೆ. ಅಂದು ಅವರು ಎಲ್ಲೇ ಇದ್ದರೂ ಧರಣಿ ಸ್ಥಳಕ್ಕೆ ಬಂದು ಯಾವಾಗ ರಾಜಕೀಯಕ್ಕೆ ಬರುತ್ತೀರಿ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ಅಸ್ನೋಟಿಕರ್ ಅಭಿಮಾನಿ ಬಳಗದವರು ಹಾಗೂ ಆನಂದ್ ಅಸ್ನೋಟಿಕರ್ ಅವರ ಅಭಿಮಾನಿ ಬಳಗದ ಜನರು ಕೂಡ ಎಲ್ಲೇ ಇದ್ದರು ಅಂದು ಭಾಗವಹಿಸಬೇಕು ಎಂದು ವಿನಂತಿಸಿದ್ದಾರೆ.
ಈ ವೇಳೆ ಜಯಕರ್ನಾಟಕ ಸಂಘಟನೆಯ ದಿಲೀಪ್ ಅರ್ಗೇಕರ್, ಸತೀಶ್ ಅರ್ಗೇಕರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

RELATED ARTICLES  ನಿವೇದಿತ್ ಆಳ್ವಾರಿಂದ ನೂತನ ಗ್ರಾಮ ಪಂಚಾಯತ್‌ ಅಧ್ಯಕ್ಷರಿಗೆ ಸನ್ಮಾನ