ಕುಮಟಾ : ನ.10ರಂದು ನಡೆಯಲಿರುವ ಟಿಪ್ಪು ಜಯಂತಿಯನ್ನು ಕುಮಟಾ ತಾಲೂಕಾ ಪಂಚಾಯತ ಸಭಾಭವನದಲ್ಲಿ ಆಚರಿಸಲು ಸಿದ್ದತೆ ನಡೆಸಲಾಗಿದೆ. ಈ ಕುರಿತು ಮಾತನಾಡುವ ಸಂಭಂದ ಕುಮಟಾ ತಾಲೂಕಾ ಪಂಚಾಯತ ಸಭಾಭವನದಲ್ಲಿ ಸಾರ್ವಜನಿಕ ಸಭೆ ಕರೆಯಲಾಗಿತ್ತು, ಈ ಸಭೆಯಲ್ಲಿ ಅನೇಕ ಇಸ್ಲಾಂ ಮುಖಂಡರು ಭಾಗಿಯಾಗಿ ಕಾರ್ಯಕ್ರಮದ ರೂಪರೇಶೆಗಳ ಬಗ್ಗೆ ಅಧಿಕಾರಿಗೊಟ್ಟಿಗೆ ಚರ್ಚೆ ನಡೆಸಿದ್ರು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅತಿಥಿಗಳ ಬಗ್ಗೆ ಉಪನ್ಯಾಸಕರ ಬಗ್ಗೆ ಕುಮಟಾ ತಹಸಿಲ್ದಾರ ಮೇಘರಾಜ ನಾಯ್ಕ ಮಾಹಿತಿ ನೀಡಿದ್ರು.

ಸಹಾಯಕ ಆಯುಕ್ತರು ಸಿ.ಪಿ ಐ ಬಳಿ ಟಿಪ್ಪು ಜಯಂತಿಯಂದು ಯಾವುದಾದರು ಪ್ರತಿಭಟನೆ ನಡೆಯಲಿದೆಯಾ? ಸರಕಾರ ಹೆಚ್ಚಿನ ಅಧಿಕಾರ ನೀಡಿದೇಯಾ ಎನ್ನುವ ಬಗ್ಗೆಯು ಮಾಹಿತಿ ಕಲೆಹಾಕಿದ್ರು, ಬಳಿಕ ಈ ವೇಳೆ ತಾಲೂಕಾಡಳಿತದ ವಿರುದ್ದ ಗರಂ ಆದ ಇಸ್ಲಾಂ ಮುಖಂಡರು ಇದು ಕೇವಲ ಒಂದು ಧರ್ಮದ ಕಾರ್ಯಕ್ರಮವಾಗಬಾರದು, ಈ ಕಾರ್ಯಕ್ರಮದಲ್ಲಿ ಎಲ್ಲಾ ಧರ್ಮದವರು ಪಾಲ್ಗೊಳ್ಳಬೇಕು. ಅನ್ಯ ಧರ್ಮದಲ್ಲಿಯು ಟಿಪ್ಪುವಿನ ಬಗ್ಗೆ ಗೌರವ ಹೊಂದಿದ್ದಾರೆ. ಅಲ್ಲದೆ ಈ ಸಭೆಯಲ್ಲಯು ಕೂಡ ಎಲ್ಲಾ ಧರ್ಮದವರಿಗೆ ಅಹ್ವಾನ ಮಾಡಬೇಕಾಗಿತ್ತು. ಇದು ತಾಲೂಕಾಡಳಿತದ ತಪ್ಪಾಗಿದೆ. ನಿಮ್ಮ ಈ ತಪ್ಪು ಸಮಾಜದಲ್ಲಿ ಬೇರೆ ರೀತಿಯಾ ಅರ್ಥವನ್ನು ನೀಡುತ್ತೆ ಎಂದ ಅವರು ಇಲ್ಲವಾದರೆ ಸರಕಾರದ ಆದೇಶದಂತೆ ಆಚರನೆಯನ್ನು ಮಾಡಿಕೊಳ್ಳಿ. ನಮ್ಮ ಧರ್ಮದಲ್ಲಿ ಜಯಂತಿ ಆಚರಣೆಗೆ ಅವಕಾಶವಿಲ್ಲ ಆದರೆ ಸರಕಾರದ ಆದೇಶಕ್ಕೆ ಒಪ್ಪಿ ಬಂದಿದ್ದೆವೆ, ನಮಗೆ ನೀವು ಕರೆಯದಿದ್ರು ನಾವು ಬೇಸರ ಮಾಡಿಕೊಳ್ಳುವುದಿಲ್ಲ. ಆದರೆ ಮಾಡುವ ಕಾರ್ಯಕ್ರಮ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡಬೇಕು ಎಂದು ಆಕ್ರೊಶ ವ್ಯಕ್ತ ಪಡಿಸಿದ್ರು..

RELATED ARTICLES  ಉತ್ತರಕನ್ನಡದಲ್ಲಿ ಚುನಾವಣಾ ಕಣದಿಂದ ಹಿಂದೆ‌ ಸರಿದವರಾರು? ಉಳಿದವರಾರು ಗೊತ್ತಾ? ಇಲ್ಲಿದೆ ಮಾಹಿತಿ.

ಇನ್ನೂರ್ವರು ಮಾತನಾಡಿ ನಾವು ಕೂಡ ಕರ್ನಾಟಕದವರೇ ನಾವು ಕನಕದಾಸರ ಬಗ್ಗೆಯು ತಿಳಿದುಕೊಂಡಿದ್ದವೆ ಆದರೆ ತಾಲೂಕಾಡಳಿದವರು ನಮ್ಮನ್ನು ಟಿಪ್ಪು ಜಯಂತಿಗೆ ಮಾತ್ರ ಕರೆಯುತ್ತಾರೆ. ಕನಕ ಜಯಂತಿ,ಗಾಂದಿ ಜಯಂತಿಗೆ ಕರೆಯುವುದಿಲ್ಲ ಎಂದು ಬೇಸರಿಸಿದರು..

RELATED ARTICLES  ಕುಮಟಾದ ಆಭರಣ ಚಿನ್ನಾಭರಣ ಮಳಿಗೆ ಮೇಲೆ ಐ.ಟಿ ದಾಳಿ?

ಇನ್ನು ಮುಂದಾದರೂ ಒಮ್ಮತದಿಂದ ಸೇರಿ ನಡೆಯೊಣ ಎನ್ನುವ ಮಾತುಗಳು ಕೇಳಿ ಬಂದವು. ಈ ಸಭೆಯಲ್ಲಿ ಅನೇಕ ಇಸ್ಲಾಂ ಬಾಂದವರು ಉಪಸ್ಥಿತರಿದ್ರು.