ಕಾರವಾರ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ರಾಜ್ಯದಲ್ಲಿ ಮೀನು ಹಿಡಿಯುತ್ತಾರಂತೆ! ಇದೇನಪ್ಪಾ ಅಂತೀರಾ, ಚುನಾವಣೆ ಹಿನ್ನೆಲೆಯಲ್ಲಿ ದೇಶಾದ್ಯಂತ ಪ್ರವಾಸ ಮಾಡಿ, ರೈತರು ಸೇರಿ ವಿವಿಧ ವರ್ಗದವರನ್ನು ಭೇಟಿ ಮಾಡುತ್ತಿರುವ ರಾಹುಲ್ ಗಾಂಧಿ 2 ತಾಸು ಮೀನುಗಾರಿಕೆ ನಡೆಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸೂಕ್ತ ಕಾರ್ಯಕ್ರಮ ರೂಪಿಸುವಂತೆ ರಾಜ್ಯ ಮೀನುಗಾರರ ಕಾಂಗ್ರೆಸ್ ಸಮಿತಿ ಮುಖಂಡರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

RELATED ARTICLES  ಕುಮಟಾ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ದಿನಕರ ಶೆಟ್ಟಿ.

ಮೀನುಗಾರರ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ರಾಮಾ ಮೊಗೇರ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ನ.20 ರಿಂದ 30 ರ ನಡುವೆ ರಾಹುಲ್ ಗಾಂಧಿ ರಾಜ್ಯ ಪ್ರವಾಸ ಕಾರ್ಯಕ್ರಮ ನಿಗದಿಯಾಗಿದೆ. ಒಂದು ದಿನ ಜಿಲ್ಲೆಯ ಕುಮಟಾ ಅಥವಾ ಮುರ್ಡೆಶ್ವರಕ್ಕೆ ಅವರು ಆಗಮಿಸಲಿದ್ದು, ಮೀನುಗಾರರ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

RELATED ARTICLES  ರಾಜ್ಯೋತ್ಸವ ಪ್ರಶಸ್ತಿ: ಶಾಂತಾರಾಮ ನಾಯಕರಿಗೆ ಆಹ್ವಾನ ನೀಡಿದ ಜಿಲ್ಲಾ ಕಸಾಪ ಅಧ್ಯಕ್ಷರು.

ಭದ್ರತಾ ಪರಿಶೀಲನೆ ನಂತರ ಸ್ಥಳ, ದಿನಾಂಕ ಹಾಗೂ ಮೀನುಗಾರಿಕೆಗೆ ತೆರಳುವ ವಿಷಯ ಖಚಿತವಾಗಲಿದೆ ಎಂದರು. ಮೀನುಗಾರರನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕು. ಕೇಂದ್ರದಲ್ಲಿ ಪ್ರತ್ಯೇಕ ಮೀನುಗಾರಿಕೆ ಇಲಾಖೆ ತೆರೆಯಬೇಕು. ರಾಜ್ಯ ಸರ್ಕಾರ ಮೀನುಗಾರರ 50 ಸಾವಿರ ರೂ. ಸಾಲ ಮನ್ನಾ ಮಾಡಬೇಕು ಎಂದು ಈ ಸಮಾವೇಶದಲ್ಲಿ ಹಕ್ಕೊತ್ತಾಯ ಮಂಡಿಸಲಾಗುವುದು ಎಂದರು.